Wednesday, July 22, 2026
spot_imgspot_img
spot_imgspot_img

ವಿಟ್ಲ: ಪಿ. ಎಂ. ಶ್ರೀ. ಸರಕಾರಿ ಪ್ರೌಢ ಶಾಲೆ (RMSA)ಯಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ

- Advertisement -
- Advertisement -

ನೋಡುಗರನ್ನು ಮನಸೂರೆಗೊಳಿಸಿದ ಶಾಲಾ ವಿದ್ಯಾರ್ಥಿಗಳ ಸಾಂಸ್ಕೃತಿಕ ವೈಭವ

ವಿಟ್ಲ: ಪಿ. ಎಂ. ಶ್ರೀ. ಸರಕಾರಿ ಪ್ರೌಢ ಶಾಲೆ (ಆರ್. ಎಂ. ಎಸ್ ಎ )ವಿಟ್ಲ ಇಲ್ಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ ಡಿ. 13 & 14 ರಂದು ಬಹಳ ಅದ್ದೂರಿಯಾಗಿ ನಡೆಯಿತು.

ವಿಟ್ಲ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಕರುಣಾಕರ ಗೌಡ ನಾಯ್ತೊಟ್ಟು ಇವರ ಅಧ್ಯಕ್ಷತೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷರು ರವಿಪ್ರಕಾಶ್ ವಿಟ್ಲ, ಪಟ್ಟಣ ಪಂಚಾಯತ್ ವಿರೋಧ ಪಕ್ಷದ ನಾಯಕ ವಿ.ಕೆ.ಎಂ ಅಶ್ರಫ್, ವಿಟ್ಲ ಪಟ್ಟಣ ಪಂಚಾಯತ್ ಕೌನ್ಸಿಲರ್ ಎನ್. ಕೃಷ್ಣ, ಬಂಟ್ಟಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಜುನಾಥನ್. ಎಂ.ಜಿ, ಕಬಡ್ದಿ ಅಸೋಸಿಯೇಶನ್ ಬಂಟ್ಟಾಳ ತಾಲೂಕಿನ ಉಪಾಧ್ಯಕ್ಷರಾದ ರಮಾನಾಥ್ ವಿಟ್ಲ, ಶ್ರೀ ಭಾರತೀ ಜನಾರ್ದನ ಸೇವಾ ಟ್ರಸ್ಟ್ ಕಾರ್ಯದರ್ಶಿಗಳಾದ ಪಿ ಸುಬ್ರಾಯ ಪೈ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಮೋನಪ್ಪ ಗೌಡ ಶಿವಾಜಿನಗರ, ಸಮಾಜ ಸೇವಕ ಆಪತ್ಭಾಂದವ ಮುರಳೀಧರ ವಿಟ್ಲ, ಪ್ರೌಢ ವಿಭಾಗದ ಎಸ್.ಡಿ.ಎಂ ಸಿ ಅಧ್ಯಕ್ಷೆ ರಶ್ಮಿ ಹರೀಶ್, ಪ್ರಾಥಮಿಕ ಶಾಲಾ ಎಸ್.ಡಿ ಎಂ ಸಿ ಅಧ್ಯಕ್ಷರು ರವಿಶಂಕರ ಸಿ, ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಫೆಲ್ಸಿಟಾಸ್ ಈವಾ ಗಲ್ಬಾವೊ, ಪ್ರಾಥಮಿಕ ಶಾಲಾ ಪ್ರಭಾರ ಮುಖ್ಯ ಶಿಕ್ಷಕಿ ಶ್ರೀಮತಿ ಶ್ರೀಮತಿ ಕೆ,ಪ್ರೌಢ ಶಾಲಾ ವಿದ್ಯಾರ್ಥಿ ನಾಯಕ ಪಿ.ವಿ. ಶಿಶಿರ ಕುಮಾರ್, ಪ್ರಾಥಮಿಕ ಶಾಲಾ ವಿದ್ಯಾರ್ಥಿ ನಾಯಕ ಶ್ರವಣ್ ಪ್ರಸಾದ್ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಹಸ್ತಪತ್ರಿಕೆ ‘ಬಾಲ ಬಂಧು’ ಬಿಡುಗಡೆ ಮಾಡಲಾಯಿತು. ರಾಷ್ಟ್ರಮಟ್ಟದಲ್ಲಿ ಮಿಂಚಿದ ಕಬಡ್ಡಿ ಪ್ರತಿಭೆ ಕುಮಾರಿ ಕೀರ್ತಿಯವರ ಅನುಪಸ್ಥಿತಿಯಲ್ಲಿ ಅವರ ತಾಯಿ ಶ್ರೀಮತಿ ವನಿತಾ ಮತ್ತು ತಂದೆ ಲಕ್ಷ್ಮಣ ಗೌಡರವರನ್ನು ಸನ್ಮಾನಿಸಲಾಯಿತು.

ಕ್ರೀಡಾ ಸಾಧನೆಗೈದ ವಿದ್ಯಾರ್ಥಿಗಳನ್ನು ಗುರುತಿಸಿ ಸನ್ಮಾನಿಸಲಾಯಿತು. ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿರುವ ಮತ್ತು ಶಾಲೆಗೆ ವಿವಿಧ ರೀತಿಯ ಕೊಡುಗೆಗಳನ್ನು ನೀಡಿದ ಅನೇಕ ದಾನಿಗಳನ್ನು ಗುರುತಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ವಯೋನಿವೃತ್ತಿ ಹೊಂದಿದ ಶ್ರೀಮತಿ ಪ್ರೇಮಲತಾ ಪಿ ರವರನ್ನು ಸನ್ಮಾನಿಸಲಾಯಿತು.

ಶಾಲಾ ವಿದ್ಯಾರ್ಥಿಗಳಿಂದ ನೋಡುಗರನ್ನು ಮನಸೂರೆಗೊಳಿಸುವಂತ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಪ್ರಾಥಮಿಕ ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ರವಿಶಂಕರ ಸಿ ಸ್ವಾಗತಿಸಿ, ಪ್ರೌಢ ವಿಭಾಗದ ಎಸ್ ಡಿ ಎಂ ಸಿ ಅಧ್ಯಕ್ಷೆ ರಶ್ಮಿ ಹರೀಶ್ ವಂದಿಸಿದರು. ಸಹಶಿಕ್ಷಕ ನಿರಂಜನ ಕೇಶವ ನಾಯಕ ಕಾರ್ಯಕ್ರಮ ನಿರೂಪಿಸಿದರು.

- Advertisement -

Related news

error: Content is protected !!