Friday, June 5, 2026
spot_imgspot_img
spot_imgspot_img

ಬಂಟ್ವಾಳ: ಟಯರ್ ಸ್ಫೋಟಗೊಂಡು ಟೆಂಪೋ ಟ್ರಾವೆಲರ್ ಪಲ್ಟಿ..!

- Advertisement -
- Advertisement -

ಬಂಟ್ವಾಳ: ಬೆಂಗಳೂರಿನಿಂದ ಮಂಗಳೂರಿಗೆ ಹೂ ತರುತ್ತಿದ್ದ ಟೆಂಪೋ ಟ್ರಾವೆಲರ್‌ ಪಲ್ಟಿಯಾದ ಘಟನೆ ಫರಂಗಿಪೇಟೆಯಲ್ಲಿ ನಡೆದಿದೆ.

ಅಡ್ಯಾರ್‌ನಲ್ಲಿ ಕಾರ್ಯಕ್ರಮ ನಿಮಿತ್ತ ಹೂ ಅಲಂಕಾರ ನಡೆಸುವುದಕ್ಕಾಗಿ ಬೆಂಗಳೂರಿನಿಂದ ಅಲಂಕಾರಿಕ ಹೂ ತುಂಬಿಸಿಕೊಂಡು ಹೊರಟಿದ್ದ ಟ್ರಾವೆಲರ್ ಫರಂಗಿಪೇಟೆ ಬರುವಷ್ಟರಲ್ಲಿ ಟಯರ್ ಬ್ಲಾಸ್ಟ್ ಆಗಿ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಾಹನದಲ್ಲಿದ್ದ ಹನ್ನೊಂದು ಮಂದಿ ಡೆಕೋರ್ ಕಾರ್ಮಿಕರು ಅದೃಷ್ಟವಶಾತ್ ಯಾವುದೇ ಗಯಾಗಳಾಗದೇ ಪಾರಾಗಿದ್ದಾರೆ. ವಾಹನ ರಸ್ತೆಗೆ ಮಗುಚಿ ಬಿದ್ದು ಅಲಂಕಾರಿಕ ಹೂ ರಸ್ತೆಯಲ್ಲೆಲ್ಲಾ ಚೆಲ್ಲಾಪಿಲ್ಲಿಯಾಗಿದೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!