




ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ. ಇದರ ಉದ್ಘಾಟನಾ ಸಮಾರಂಭ ವಿಟ್ಲ ಮಂಗಳೂರು ರಸ್ತೆಯಲ್ಲಿರುವ ’ರಾಧಾಶ್ರೀ ವಾಣಿಜ್ಯ ಸಂಕೀರ್ಣದ ಪ್ರಥಮ ಮಹಡಿಯಲ್ಲಿ ನಡೆಯಲಿದೆ.
ಬೆಳಗ್ಗೆ 10:30 ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಂಗಾರು ಅರಸರು ವಿಟ್ಲ ಅರಮನೆ ಅನುವಂಶಿಕ ಆಡಳಿತ ಮೊಕ್ತೇಸರರು ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇವರು ಸಂಘದ ಕಚೇರಿಯನ್ನು ಉದ್ಘಾಟಿಸಲಿದ್ದಾರೆ.
ಹರೀಶ್ ಆರಿಕೋಡಿ, ಧರ್ಮದರ್ಶಿಗಳು, ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಆರಿಕೋಡಿ ಬೆಳ್ತಂಗಡಿ ತಾಲೂಕು ದ.ಕ, ಇವರು ದೀಪ ಪ್ರಜ್ವಲನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಸಂಜೀವ ಮಠಂದೂರು, ನಿಕಟಪೂರ್ವ ಶಾಸಕರು ಪುತ್ತೂರು ವಿಧಾನಸಭಾ ಕ್ಷೇತ್ರ, ಇವರು ಭದ್ರತಾ ಕೊಠಡಿಯನ್ನು ಹಾಗೂ ರಮೇಶ್ ಹೆಚ್.ಎನ್ ಸಹಕಾರ ಸಂಘಗಳ ಉಪನಿಬಂಧಕರು ದ.ಕ ಜಿಲ್ಲೆ ಮಂಗಳೂರು, ಇವರು ಗಣಕ ಯಂತ್ರವನ್ನು ಉದ್ಘಾಟಿಸಲಿದ್ದಾರೆ.
ಶಶಿಕುಮಾರ್ ರೈ ಬಾಲ್ಯೊಟ್ಟು ನಿರ್ದೇಶಕರು ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಇವರು ಪ್ರಥಮ ಠೇವಣಿ ಪತ್ರ ಹಸ್ತಾಂತರಿಸಲಿದ್ದಾರೆ.
ಅಕ್ಷಯ ಗೌಡ ಸಮುದಾಯ ಭವನ ಶಾಂತಿ ನಗರ ವಿಟ್ಲದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ.
ಮೋನಪ್ಪ ಗೌಡ ಶಿವಾಜಿನಗರ ಅಧ್ಯಕ್ಷರು, ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿ. ಇವರ ಅಧ್ಯಕ್ಷತೆಯಲ್ಲಿ ನಡೆಯುವ ಉದ್ಘಾಟನಾ ಸಮಾರಂಭದಲ್ಲಿ ಕರುಣಾಕರ ಗೌಡ ನಾಯ್ತೊಟ್ಟು, ಅಧ್ಯಕ್ಷರು ಪಟ್ಟಣ ಪಂಚಾಯತ್ ವಿಟ್ಲ, ಪಿ.ಸಿ ಜಯರಾಮ, ಅಧ್ಯಕ್ಷರು ವೆಂಕಟರಮಣ ಕ್ರೆಡಿಟ್ ಕೋ, ಆಪರೇಟಿವ್ ಸೊಸೈಟಿ ಸುಳ್ಯ, ಚಿದಾನಂದ ಬೈಲಾಡಿ, ಅಧ್ಯಕ್ಷರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರಿ ಸೇವಾ ಸಂಘ ಪುತ್ತೂರು, ಅಧ್ಯಕ್ಷರು ಒಕ್ಕಲಿಗ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸುಳ್ಯ, ಎನ್.ಎನ್ ಭಟ್ ಮಾಲಕರು ರಾಧಾಶ್ರೀ ವಾಣಿಜ್ಯ ಸಂಕೀರ್ಣ ವಿಟ್ಲ, ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಗಿರಿಯಪ್ಪ ಗೌಡ ಶಾಂತಿಲ, ಗೌರವಾಧ್ಯಕ್ಷರು ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗ ಸಂಘ (ರಿ) ವಿಟ್ಲ, ಕುಶಾಲಪ್ಪ ಗೌಡ ಇರಂದೂರು ಅಧ್ಯಕ್ಷರು ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗ ಸಂಘ (ರಿ) ವಿಟ್ಲ, ಮಹಾಬಲ ಗೌಡ ಅಡ್ಡಾಳಿ ಉಪಾಧ್ಯಕ್ಷರು ವಿಟ್ಲ ಅಕ್ಷಯ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ನಿ. , ಶ್ರೀಮತಿ ಅಮಿತಾ ಕೃಷ್ಣ ಕೆ.ಜಿ ಅಧ್ಯಕ್ಷರು ಮಹಿಳಾ ಘಟಕ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗ ಸಂಘ (ರಿ) ವಿಟ್ಲ, ದಿನೇಶ್ ಗೌಡ ಮಾಡ್ತೇಲು ಅಧ್ಯಕ್ಷರು ಯುವ ವೇದಿಕೆ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗ ಸಂಘ (ರಿ) ವಿಟ್ಲ, ಉಪಸ್ಥಿತಿಯಲ್ಲಿರುವರು.








