
ವಿಟ್ಲ: ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ(ರಿ.) ಶಾಂತಿನಗರ ಆಶ್ರಯದಲ್ಲಿ ಶ್ರೀ ಸತ್ಯನಾರಾಯಣ ಪೂಜೆ ಮತ್ತು ಪ್ರತಿಭಾ ಪುರಸ್ಕಾರವು ಅಕ್ಷಯ ಸಮುದಾಯ ಭವನ ಶಾಂತಿನಗರ, ವಿಟ್ಲ ಇಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಬಂಟ್ವಾಳ ತಾಲೂಕು ಗೌಡರ ಯಾನೆ ಒಕ್ಕಲಿಗರ ಸಂಘ (ರಿ.) ವಿಟ್ಲ ಅಧ್ಯಕ್ಷ ಸಿ. ಕುಶಾಲಪ್ಪ ಗೌಡ ಸಭಾಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದ ಗಣ್ಯ ಅತಿಥಿಯಾಗಿ ಭಾಗವಹಿಸಿದ್ದ ಪುತ್ತೂರು ವಿಧಾನ ಸಭಾ ಕ್ಷೇತ್ರ ನಿಕಟ ಪೂರ್ವ ಶಾಸಕ ಸಂಜೀವ ಮಠಂದೂರು ಮಾತನಾಡಿ ಸಂಘಟನೆಯೇ ಶಕ್ತಿ ಸಮಾಜದಲ್ಲಿ ಗೌಡ ಸಮಾಜದ ಪಾತ್ರ ಹಿರಿದು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಟ್ಲ ಪಟ್ಟಣ ಪಂ. ಅಧ್ಯಕ್ಷ ಕರುಣಾಕರ ನಾಯ್ತೂಟ್ಟು, ವಿಟ್ಲ ಮುಡ್ನೂರು ಗ್ರಾ. ಪಂ ಅಧ್ಯಕ್ಷ ಪುನೀತ್ ಮಾಡತ್ತಾರು, ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಧ್ಯಾನ್ ಮೋಕ್ಷಿತ್, ಜಸ್ವಂತ್, ಕೃಷಿ ಕ್ಷೇತ್ರದಲ್ಲಿ ಜಿಲ್ಲಾ ಕೃಷಿ ಪ್ರಶಸ್ತಿ- ಚಂದ್ರಶೇಖರ ಗಿರಿನಿವಾಸ, ಚಂದ್ರಮೋಹನ ಭಂಡಾರದ ಮನೆ- ದತ್ತಿನಿಧಿ ಸಹಾಯಧನ ಇವರನ್ನು ಸನ್ಮಾನಿಸಲಾಯಿತು. ಶ್ರುತಿ ಹಾಗೂ ಸನ್ನಿಧಿಯವರನ್ನು ಕಾರ್ಯಕ್ರಮದಲ್ಲಿ ಅಭಿನಂದಿಸಲಾಯಿತು.


ಹಿರಿಯ ಸಾಧಕರುಗಳಾದ ಪುಂಡಲೀಕ ಗೌಡ ಪಂಜಿಕಲ್ಲು, ಬಾಬು ಗೌಡ ವರಪ್ಪಾದೆ, ಬಾಬು ಗೌಡ ಗುರ್ಮೆ, ನೀಲಪ್ಪ ಗೌಡ ರೆಂಜಾಡಿ, ನಾರಾಯಣ ಗೌಡ ದೇವಸ್ಯ, ಲೋಕಯ್ಯ ಗೌಡ- ಶೃಂಗೇರಿ ಮಠ ಇವರನ್ನು ಸನ್ಮಾನಿಸಲಾಯಿತು.
ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಿದ್ದ ಸುಳ್ಯ ಎಂ. ಬಿ ಫೌಂಡೇಶನ್ ಅಧ್ಯಕ್ಷ ಎಂ. ಬಿ.ಸದಾಶಿವ ಮತನಾಡಿ ಮಕ್ಕಳಿಗೆ ಸಂಸ್ಕಾರಯುತ ಶಿಕ್ಷಣ ನೀಡಬೇಕು. ಒಕ್ಕಲಿಗರು ಶಿವನ ಆರಾಧಕರು, ಮಾತ್ರವಲ್ಲದೆ ವಿಷ್ಣುವಿನ ಆರಾಧಕರು ಹೌದು. ಒಕ್ಕಲಗರಲ್ಲಿ ನಾಯಕತ್ವದ ಗುಣ ಇದೆಅದನ್ನು ಬಳಸಿಕೊಳ್ಳಿ. ಡಿಜಿಟಲ್ ಯುಗದಲ್ಲಿ ನಾವು ಶೈಕ್ಷಣಿಕ, ಸಾಮಾಜಿಕ ಬದಲಾವಣೆಗಳನ್ನು ಕಾಣಬೇಕು ಎಂದು ತಿಳಿಸಿದರು. ಬಳಿಕ ಗೌರವ ಉಪಸ್ಥಿತಿಯಾಗಿ ಭಾಗವಹಿಸಿದ್ದ ಬೆಂಗಳೂರು ರಾಜ್ಯ ಒಕ್ಕಲಿಗ ಸಂಘ (ರಿ.) ಇದರ ನಿರ್ದೇಶಕ ರೇಣುಕಾ ಪ್ರಸಾದ್ ಕುರುಂಜಿ ಮತನಾಡಿ ಸಮುದಾಯದ ಪ್ರೀತಿ ವಾತ್ಸಲ್ಯವನ್ನು ವಿವರಿಸಿ, ರಾಜ್ಯ ಸಂಘದಿಂದ ಸಹಕಾರ ನೀಡುವ ಬಗ್ಗೆ , ಯುವ ಸಬಲೀಕರಣದ ಬಗ್ಗೆ ಹೇಳಿದರು.
ಕಾರ್ಯಕ್ರಮವನ್ನು ಜಲಜಾಕ್ಷಿ ಮತ್ತು ಯತೀಶ್ ಪಾದೆ ನಿರೂಪಿಸಿದರು, ವಿಶ್ವನಾಥ ಕುಳಾಲು ಸ್ವಾಗತಿಸಿದರು. ಅಮಿತಾ ಕೃಷ್ಣ ಧನ್ಯವಾದಗೈದರು.