Monday, June 22, 2026
spot_imgspot_img
spot_imgspot_img

ಹೂಡಿಕೆ ಹಣಕ್ಕೆ ಕಮಿಷನ್ ನೀಡುವುದಾಗಿ ನಂಬಿಸಿ 12.46 ಲಕ್ಷ ರೂ. ವಂಚನೆ

- Advertisement -
- Advertisement -

ಉಡುಪಿ: ಹೂಡಿಕೆ ಹಣಕ್ಕೆ ಕಮಿಷನ್ ನೀಡುವುದಾಗಿ ನಂಬಿಸಿ ಮಹಿಳೆಗೆ ಲಕ್ಷಾಂತರ ರೂ. ವಂಚಿಸಿರುವ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಪ್ನಾ(28) ಎಂಬವರ ಇನ್ಸ್ಟಾಗ್ರಾಮ್ ಖಾತೆಗೆ ಡಿ.9ರಂದು ‘ವರ್ಕ್ ಫ್ರಮ್ ಹೋಮ್’ ಲಿಂಕ್ ಬಂದಿದ್ದು, ಅದನ್ನು ಓಪನ್ ಮಾಡಿದ ನಂತರ ಅದರಲ್ಲಿ ಹಣ ಹೂಡಿಕೆ ಮಾಡಲು ತಿಳಿಸಲಾಗಿತ್ತು. ಅದನ್ನು ನಂಬಿದ ಸಪ್ನಾ ಹೆಚ್ಚಿನ ಕಮಿಷನ್ ಬರುವುದಾಗಿ ಡಿ.9ರಿಂದ ಡಿ.28ರ ಮಧ್ಯಾವಧಿಯಲ್ಲಿ ಅಪರಿಚಿತರು ತಿಳಿಸಿದ ವಿವಿಧ ಬ್ಯಾಂಕಿನ ಖಾತೆಗಳಿಗೆ ಒಟ್ಟು 12.46 ಲಕ್ಷ ರೂ. ಹಣವನ್ನು ಹೂಡಿಕೆ ಮಾಡಿದರು. ಆದರೆ ದುಷ್ಕರ್ಮಿಗಳು ಆ ಹಣವನ್ನು ಹಿಂತಿರುಗಿಸದೆ ವಂಚಿಸಿರುವುದಾಗಿ ದೂರಲಾಗಿದೆ.

- Advertisement -

Related news

error: Content is protected !!