Tuesday, July 1, 2025
spot_imgspot_img
spot_imgspot_img

ಇರಾ: (ಜ.25-26) ಭಾರತ್‌‌ ಫ್ರೆಂಡ್ಸ್‌‌ ಕ್ಲಬ್‌ (ರಿ.) ಇರಾ ಆಶ್ರಯದಲ್ಲಿ ದಿ| ದೇವದಾಸ ಅಡಪ ದರ್ಬೆ ಇರಾ ಇವರ ಸ್ಮರಣಾರ್ಥ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಇರಾ ಕಬಡ್ಡಿ-2025

- Advertisement -
- Advertisement -

ಇರಾ: ಭಾರತ್‌‌ ಫ್ರೆಂಡ್ಸ್‌‌ ಕ್ಲಬ್‌ (ರಿ.) ಇರಾ (ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುತಸ್ಕೃತ) ಇದರ ಆಶ್ರಯದಲ್ಲಿ ದಿ.ದೇವದಾಸ ಅಡಪ ದರ್ಬೆ ಇರಾ ಇವರ ಸ್ಮರಣಾರ್ಥ ಕರ್ನಾಟಕ ರಾಜ್ಯ ಅಮೆಚೂರು ಕಬಡ್ಡಿ ಅಸೋಸಿಯೇಷನ್‌‌ ಹಾಗೂ ದ.ಕ. ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್‌ ಇವರ ಸಹಭಾಗಿತ್ವದಲ್ಲಿ ಪುರುಷರ ಮತ್ತು ಮಹಿಳೆಯರ ರಾಜ್ಯ ಮಟ್ಟದ ಇರಾ ಕಬಡ್ಡಿ-2025 ಜ.25ನೇ ಶನಿವಾರ ಮತ್ತು 26ನೇ ಆದಿತ್ಯವಾರದಂದು ಇರಾ ಶಾಲಾ ಮೈದಾನದಲ್ಲಿ ನಡೆಯಲಿದೆ.

ದಿನಾಂಕ: 25-1-2025ನೇ ಶನಿವಾರ ಸಂಜೆ 3:00 ಗಂಟೆಯಿಂದ ಮಹಿಳಾ ವಿಭಾಗದ ಕಬಡ್ಡಿ ಪಂದ್ಯಾಟ ಆರಂಭವಾಗಲಿದೆ. ಪಂದ್ಯಾ ವಿಜೇತ ತಂಡಗಳಿಗೆ ಪ್ರಥಮ: 15,000/- ನಗದು ಇರಾ ಟ್ರೋಫಿ, ದ್ವಿತೀಯ:10,000/-ನಗದು ಇರಾ ಟ್ರೋಫಿ, ತೃತೀಯ: 7,000/- ನಗದು ಇರಾ ಟ್ರೋಫಿ, ಚತುರ್ಥ: 7,000/- ನಗದು ಇರಾ ಟ್ರೋಫಿ ನೀಡಲಾಗುವುದು.

ದಿನಾಂಕ: 26-1-2025ನೇ ಆದಿತ್ಯವಾರ ಬೆಳಿಗ್ಗೆ 10:00 ಗಂಟೆಯಿಂದ ಪುರುಷರ ವಿಭಾಗದ ಕಬಡ್ಡಿ ಪಂದ್ಯಾಟ ಆರಂಭವಾಗಲಿದೆ. ಪಂದ್ಯಾ ವಿಜೇತ ತಂಡಗಳಿಗೆ ಪ್ರಥಮ: 50,000/-ನಗದು ಮತ್ತು ಇರಾ ಟ್ರೋಫಿ, ದ್ವಿತೀಯ: 30,000/-ನಗದು ಮತ್ತು ಇರಾ ಟ್ರೋಫಿ, ತೃತೀಯ: 20,000/- ನಗದು ಮತ್ತು ಇರಾ ಟ್ರೋಫಿ, ಚತುರ್ಥ: 20,000/- ನಗದು ಮತ್ತು ಇರಾ ಟ್ರೋಫಿ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!