Sunday, April 28, 2024
spot_imgspot_img
spot_imgspot_img

ದಕ್ಷಿಣ ಭಾರತ ಕುಸ್ತಿ ಪಂದ್ಯಾವಳಿಗೆ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ 30 ಕುಸ್ತಿಪಟುಗಳ ತಂಡ; ಗುಣರಂಜನ್ ಶೆಟ್ಟಿರವರ ನೇತೃತ್ವದಲ್ಲಿ ಪೂರ್ವಭಾವಿ ಸಭೆ

- Advertisement -G L Acharya panikkar
- Advertisement -

ತಮಿಳುನಾಡಿನ ಈರೋಡ್‌ನಲ್ಲಿ ನಡೆಯಲಿರುವ ದಕ್ಷಿಣ ಭಾರತ ಕುಸ್ತಿ ಪಂದ್ಯಾವಳಿಯಲ್ಲಿ ಕರ್ನಾಟಕ ರಾಜ್ಯವನ್ನು ವಿವಿಧ ಕುಸ್ತಿ ಪಂದ್ಯಾವಳಿಯಲ್ಲಿ ಪ್ರತಿನಿಧಿಸಲು 30 ಕುಸ್ತಿಪಟುಗಳ ತಂಡ ರೆಡಿಯಾಗಿದ್ದು ಇವರಿಗೆ ಕರ್ನಾಟಕ ಕುಸ್ತಿ ಅಸೋಶಿಯೇಶನ್‌ನ ಅಧ್ಯಕ್ಷರಾದ ಬಿ.ಗುಣರಂಜನ್ ರವರ ನೇತೃತ್ವದಲ್ಲಿ ಪೂರ್ವಭಾವಿಯನ್ನು ನಡೆಸಲಾಯಿತು.

ಎಲ್ಲಾ ಕುಸ್ತಿಪಟುಗಳಿಗೆ ಕರ್ನಾಟಕ ಕುಸ್ತಿ ಅಸೋಶಿಯೇಶನ್‌ನ ಜರ್ಸಿಯನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕುಸ್ತಿಪಟುಗಳನ್ನು ಉದ್ದೇಶಿಸಿ ಮಾತನಾಡಿದ ಬಿ.ಗುಣರಂಜನ್ ಶೆಟ್ಟಿ ಪಂದ್ಯಾವಳಿಗಳಲ್ಲಿ ಗೆಲುವು ಸೋಲು ಸರ್ವೇ ಸಾಮಾನ್ಯ. ಆದರೆ ಗೆಲ್ಲುವ ಛಲ ಬಿಡಬಾರದು. ಮುಂದಿನ ದಿನಗಳಲ್ಲಿ ಸರಕಾರದಿಂದ ಸಾಕಷ್ಟು ಅನುಕೂಲತೆಗಳು ಕುಸ್ತಿಪಟುಗಳನ್ನು ಹುಡುಕಿಕೊಂಡು ಬರಲಿದೆ. ಕುಸ್ತಿಪಟುಗಳು ತಮ್ಮ ಏಕಾಗ್ರತೆಯನ್ನೆಲ್ಲ ಕುಸ್ತಿಯಲ್ಲಿಟ್ಟಿರಬೇಕು.

ಈ ಸಭೆಯಲ್ಲಿ ಕರ್ನಾಟಕ ಕುಸ್ತಿ ಅಸೋಶಿಯೇಶನ್‌ನ ಖಜಾಂಚಿ ಶ್ರೀನಿವಾಸ ಅಂಗರಕೋಡಿ, ಕಾರ್ಯದರ್ಶಿಗಳಾದ ಜಯಶ್ರೀನಿವಾಸ್, ತಾಂತ್ರಿಕ ವಿಭಾಗದ ಚೇರ್‌ಮನ್ ವಿನೋದ್ ಕುಮಾರ್‍ ಹಾಗೂ ತಂಡದ ತರಬೇತುದಾರರು ಉಪಸ್ಥಿತರಿದ್ದರು.

- Advertisement -

Related news

error: Content is protected !!