ಸಮುದಾಯ ದಂತ ವಿಭಾಗ, ಯೇನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ವೈದ್ಯರ ತಂಡದವರಿಂದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ


ಒಕ್ಕೆತ್ತೂರು: ಶ್ರೀ ಸತ್ಯಸಾಯಿ ಸೇವಾ ಸಮಿತಿ ಈಶ್ವರಾಂಬಾ ಟ್ರಸ್ಟ್ (ರಿ.) ಗಾಂಧಿನಗರ, ಮಂಗಳೂರು ಇವರ ಆಶ್ರಯದಲ್ಲಿ ಹಾಗೂ ಶಿವಾಜಿ ಫ್ರೆಂಡ್ಸ್, ಮಂಗಳಪದವು ಇವರ ಸಹಯೋಗದೊಂದಿಗೆ ಜಸ್ಟಿಸ್ ಕೆ ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ದೇರಳಕಟ್ಟೆ ಇವರ ವೈದ್ಯರ ತಂಡದವರಿಂದ ಉಚಿತ ವೈದ್ಯಕೀಯ ಕಣ್ಣಿನ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಮತ್ತು ಸಮುದಾಯ ದಂತ ವಿಭಾಗ ಯೇನಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇಲ್ಲಿಯ ವೈದ್ಯರ ತಂಡದವರಿಂದ ಉಚಿತ ದಂತ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವು ಜ.12ನೇ ಆದಿತ್ಯವಾರ ಬೆಳಿಗ್ಗೆ 9:30 ರಿಂದ 1:00ರ ವರೆಗೆ ದ.ಕಜಿ.ಪ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಒಕ್ಕೆತ್ತೂರು ವಿಟ್ಲ ಇಲ್ಲಿ ನಡೆಯಲಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಕಣ್ಣಿನ ತಪಾಸಣೆಗೆ ಬೆಳಿಗ್ಗೆ11:30ರೊಳಗೆ ಶಿಬಿರಕ್ಕೆ ಬರಬೇಕು ಎಂದು ತಿಳಿಸಿದ್ದಾರೆ.
ಶಿಬಿರದಲ್ಲಿ ಲಭ್ಯವಿರುವ ಸೇವೆಗಳು:
*ಸಾಮಾನ್ಯ ವೈದ್ಯಕೀಯ ವಿಭಾಗ
*ನೇತ್ರ ವಿಭಾಗ
*ದಂತ ಚಿಕಿತ್ಸೆ ವಿಭಾಗ
*ಬಿ.ಪಿ ಶುಗರ್ ತಪಾಸಣೆ
*ಕಿವಿ, ಮೂಗು ಮತ್ತು ಗಂಟಲು ವಿಭಾಗ
*ಎಲುಬು, ಚರ್ಮ ಮತ್ತು ಮಕ್ಕಳ ವಿಭಾಗ