Sunday, June 29, 2025
spot_imgspot_img
spot_imgspot_img

ಕೋಲ್ಕತಾ ವೈದ್ಯೆ ರೇಪ್ ಪ್ರಕರಣ: ಇಂದು ತೀರ್ಪು

- Advertisement -
- Advertisement -

ಕೋಲ್ಕತಾ: ಇಡೀ ದೇಶದಲ್ಲಿ ಭಾರಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾಗಿದ್ದ ಇಲ್ಲಿನ ಆರ್‌ಜಿ ಕರ್‌ ಆಸ್ಪತ್ರೆಯಲ್ಲಿ ವೈದ್ಯೆಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದ್ದಂತೆ ಸಿಯಾಲ್ದಹಾ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ ನ್ಯಾಯಾಲಯ ಶನಿವಾರ ತೀರ್ಪು ಪ್ರಕಟಿಸಬೇಕಿದೆ. ಆರೋಪಿ ಸಂಜಯ್‌ ರಾಯ್‌ಗೆ ಮರಣದಂಡನೆ ವಿಧಿಸಬೇಕು ಎಂದು ಕೇಂದ್ರ ತನಿಖಾ ದಳ (ಸಿಬಿಐ) ವಾದ ಮಂಡಿಸಿತ್ತು.

ಘಟನೆ ಸಂಭವಿಸಿದ 57 ದಿ ನಂತರ ತೀರ್ಪು ಪ್ರಕಟವಾಗಿದೆ.ಮತ್ತೊಂದೆಡೆ ಕೋಲ್ಕತಾ ಹೈಕೋರ್ಟ್‌ ಪ್ರಕರಣದ ತನಿಖೆಯನ್ನು ಕೋಲ್ಕತಾ ಪೊಲೀಸರಿಂದ ಸಿಬಿಐಗೆ ವರ್ಗಾಯಿಸಿತ್ತು. ಇದರ ತನಿಖೆ ನಡೆಸಿದ ಸಿಬಿಐ, 50 ಸಾಕ್ಷಿಗಳು ಮತ್ತು ಹಲವು ಮಹತ್ತರ ದಾಖಲೆಗಳನ್ನು ತನಿಖೆಗೆ ಒಳಪಡಿಸಿ 45 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ಕೊನೆಯದಾಗಿ ಜ.9ರಂದು ಸಿಯಾಲ್ದಾಹ್‌ ನ್ಯಾಯಾಲಯ ಕೊನೆ ವಿಚಾರಣೆಯನ್ನು ಪೂರ್ಣಗೊಳಿಸಿತ್ತು. ಶನಿವಾರ ತೀರ್ಪು ನೀಡಲಿದೆ.

- Advertisement -

Related news

error: Content is protected !!