- Advertisement -
- Advertisement -


ಪುತ್ತೂರು: ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ದಿ. ಕಾರ್ತಿಕ್ ಮೇರ್ಲರವರ ತಂದೆ ಆರ್ಯಾಪು ಮೇರ್ಲದ ’ಸ್ವರ್ಣ ಕುಟೀರ’ ನಿವಾಸಿಯಾಗಿದ್ದ ಪಿ.ರಮೇಶ ಸುವರ್ಣ(70ವ.)ರವರು ಫೆ.2ರಂದುರಾತ್ರಿ ಸ್ವಗೃಹದಲ್ಲಿ ನಿಧನರಾದರು.
ರಮೇಶ್ ಸುವರ್ಣರವರು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಕೆಲ ವರುಷಗಳ ಹಿಂದೆ ನಿವೃತ್ತರಾಗಿದ್ದರು.
ಮೃತ ರಮೇಶ್ ಸುವರ್ಣ ಅವರ ಹಿರಿಯ ಪುತ್ರ, 2019ರಲ್ಲಿ ಸೆ.3 ರಂದು ಸಾರ್ವಜನಿಕ ಗಣೇಶೋತ್ಸವ ಪ್ರಯುಕ್ತ ನಡೆಯುತ್ತಿದ್ದ ಯಕ್ಷಗಾನವನ್ನು ವೀಕ್ಷಿಸುತ್ತಿದ್ದ ಹಿಂದೂ ಜಾಗರಣ ವೇದಿಕೆ ತಾಲೂಕು ಕಾರ್ಯದರ್ಶಿ ಕಾರ್ತಿಕ್ ಮೇರ್ಲರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.
ಮೃತರು ಪತಿ, ಪುತ್ರ,ಸೊಸೆ ಹಾಗೂ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತ ರಮೇಶ್ ಸುವರ್ಣ ಅವರ ಅಂತ್ಯಕ್ರಿಯೆ ಇಂದು ಬೆಳಿಗ್ಗೆ1 0 ಗಂಟೆಗೆ ಮೇರ್ಲ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬಸ್ಥರರು ತಿಳಿಸಿದ್ದಾರೆ.
- Advertisement -








