Monday, October 26, 2026
spot_imgspot_img
spot_imgspot_img

ಸಾಣೂರು: ಬೆಳ್ಳಂಬೆಳಗ್ಗೆ ಸರಕಾರಿ ಬಸ್- ಟೆಂಪೊ ಡಿಕ್ಕಿ ;13 ಮಂದಿ ಗಾಯ

- Advertisement -
- Advertisement -

ಕಾರ್ಕಳ : ಸಾಣೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ಸರಕಾರಿ ಬಸ್ ಟೆಂಪೊಗೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಬಸ್ಸಿನ ಚಾಲಕನ ಸಹಿತ 13 ಮಂದಿ ಗಾಯಗೊಂಡಿದ್ದಾರೆ.

ಬೆಳಗಾವಿ ಕಡೆಯಿಂದ ಧರ್ಮಸ್ಥಳಕ್ಕೆ ಹೋಗುತ್ತಿದ್ದ ಚಿಕ್ಕೋಡಿ ವಿಭಾಗದ ಸರಕಾರಿ ಬಸ್ (ಕೆಎ23 ಎಫ್ 1109) ಸಾಣೂರು ರಾಮ ಮಂದಿರದ ಬಳಿ ರಸ್ತೆ ಬದಿ ನಿಲ್ಲಿಸಿದ್ದ ಟೆಂಪೊಗೆ ಹಿಂದಿನಿಂದ ಡಿಕ್ಕಿ ಹೊಡೆದಿದೆ. ಅಪಘಾತದಿಂದ ಬಸ್ಸಿನ ಮುಂಭಾಗ ಜಖಂಗೊಂಡಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಗಾಯವಾಗಿದೆ. ಚಾಲಕನಿಗೆ ಗಂಭೀರ ಸ್ವರೂಪದ ಗಾಯವಾಗಿದೆ.

ಡಿಕ್ಕಿಯ ಬಿರುಸಿಗೆ ರಸ್ತೆ ಬದಿ ನಿಲ್ಲಿಸಿದ್ದ ಟೆಂಪೊ ಫುಟ್‌ಪಾತ್‌ ಮೇಲೇರಿದೆ.ಸ್ಥಳೀಯರಾದ ರಾಜೇಶ್ ಬೈಪಾಸ್ ಮತ್ತು ಸಾಣೂರು ಯುವಕಮಂಡಲದ ಅಧ್ಯಕ್ಷ ಪ್ರಸಾದ್ ಅಂಬುಲೆನ್ಸ್ ತಂದುಗಾಯಾಳುಗಳನ್ನು ಕಾರ್ಕಳದ ಸರಕಾರಿ ಆಸ್ಪತ್ರೆಗೆ ಸಾಗಿಸಿದರು.ರಾಜೇಶ್ ಬೈಪಾಸ್ ತಮ್ಮದೇ ಕಾರಿನಲ್ಲಿ ಗಾಯಾಳುಗಳನ್ನು ಕ್ಷಿಪ್ರವಾಗಿ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.ಇಲ್ಲಿ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಬಸ್ಸಿನ ಚಾಲಕ ನಿದ್ದೆಯ ಮಂಪರಿನಲ್ಲಿದ್ದದ್ದು ಅಪಘಾತಕ್ಕೆ ಕಾರಣವಾಗಿರಬಹುದು ಎನ್ನಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

- Advertisement -

Related news

error: Content is protected !!