

ವಿಟ್ಲ: ಶ್ರೀ ನಾಗ, ಶ್ರೀ ಜಟಾಧಾರಿ ಮತ್ತು ರಾಜನ್ ದೈವ ಗುಳಿಗ ದೈವದ ಸಾನಿಧ್ಯದಲ್ಲಿ ನಾಗತಂಬಿಲ, ಜಟಾಧಾರಿ ಮೈಮೆ ಮತ್ತು ರಾಜನ್ ದೈವ ಗುಳಿಗ ದೈವದ ಕೊಲವು ಫೆ.7-2-2025ನೇ ಶುಕ್ರವಾರ ಮತ್ತು 8-2-2025ನೇ ಶನಿವಾರ ನಡೆಯಲಿದೆ.

ದಿನಾಂಕ: 7-2-2025ನೇ ಶುಕ್ರವಾರ ಬೆಳಿಗ್ಗೆ 8:00ಕ್ಕೆ ಪ್ರರ್ಥನೆ ಸ್ಥಳ ಶುದ್ಧಿ, ಪಂಚಗವ್ಯ ಪುಣ್ಯಾಹಃ ಶ್ರೀ ಗಣಪತಿ ಹೋಮ ಮತ್ತು ನಾದೇವರಿಗೆ ತಂಬಿಲಸೇವೆ ನಡೆಯಲಿದೆ. ಬಳಿಕ 12:00ಕ್ಕೆ ಮಹಾಪೂಜೆ ಮಧ್ಯಾಹ್ನ12:30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಸಂಜೆ 4:00ರಿಂದ ಶ್ರೀ ಜಟಾಧಾರಿ ದೈವದ ಭಂಡಾರ ಆಗಮನವಾಗಲಿದೆ. (ಕುಡಾಲು ಬಾಡೂಎರು ಕೂಡುಕಟ್ಟಿನ ಬಾಡೂರು ಚಾವಡಿಯಿಂದ) ಬಳಿಕ ನವಕ ಕಲಶಾಭಿಷೇಕ, ತಂಬಿಲಾದಿ ಸೇವೆ ನಡೆಯಲಿದೆ. ಸಂಜೆ 6:30ರಿಂದ ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದು ಬಳಿಕ ರಾತ್ರಿ 8:30ಕ್ಕೆ ಅನ್ನಸಂತರ್ಪಣೆ ನಡೆಯಲಿದೆ.

ರಾತ್ರಿ 9:00 ಗಂಟೆಗೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ವಿಟ್ಲ ಅರಮನೆ, ಅನುವಂಶಿಕ ಮೊಕ್ತೇಸರು ಬಂಗಾರು ಅರಸರು ಅಧ್ಯಕ್ಷತೆ ವಹಿಸಲಿದ್ದಾರೆ. ಅಂತರಾಷ್ಟ್ರೀಯ ನಿರೂಪಕ ದಿನೇಶ್ ಸುವರ್ಣ ರಾಯಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಕುಂಬಾರು ಶ್ರೀ ದುರ್ಗಾಪರಮೇಶ್ವರೊ ದೇವಸ್ಥಾನ ಮತ್ತು ಜಟಾಧಾರಿ ದೈವಸ್ಥಾನ ಅನುವಂಶಿಕ ಮೊಕ್ತೇಸರು ನೆರಿಯ ಹೆಗ್ಗಡೆ ಲಕ್ಷ್ಮೀ ನಾರಾಯಣ ಭಟ್, ವಿಟ್ಲ ಗ್ರಾಮೀಣ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಚ್. ಜಗನ್ನಾಥ ಸಾಲ್ಯಾನ್, ಚಂದ್ರನಾಥ ಸ್ವಾಮಿ ಬಸದಿ ವಿಟ್ಲ ಜಿತೇಶ್ ಯಂ, ಮೈಸೂರು ಎಸ್‌ಎಲ್‌ವಿ ಗ್ರೂಪ್ಸ್ ಆಡಳಿತ ನಿರ್ದೇಶಕರು ದಿವಾಕರ ದಾಸ್ ನೇರ್ಲಾಜೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ರಾತ್ರಿ 10:00 ಗಂಟೆಗೆ ಜಟಾಧಾರಿ ದೈವದ ಭಂಡಾರ ಮೈಮೆ ಗದ್ದೆಗೆ ಆಗಮನವಾಗಲಿದೆ. ಬಳಿಕ ಪುಗರ್ತೆ ಕಲಾವಿದರು ವಿಟ್ಲ ಮೈರ- ಕೇಪು, ಅಭಿನಯದ ಅದ್ಧೂರಿ ಭಕ್ತಿ ಪ್ರಧಾನ “ಕಲ್ಜಿಗದ ಕಾಳಿ ಮಂತ್ರದೇವತೆ” ತುಳು ನಾಟಕ ನಡೆಯಲಿದೆ. ರಾತ್ರಿ 2:00ರಿಂದ ಜಟಾಧಾರಿ ದೈವದ ಮೈಮೆ ಕೊಲ ನಡೆಯಲಿದೆ.
ದಿನಾಂಕ: 8-2-2025ನೇ ಶನಿವಾರ ಸಂಜೆ 4:00ಕ್ಕೆ ರಾಜನ್ ದೈವ ಗುಳಿಗನ ಭಂಡಾರ ಕಲ್ಲಗದ್ದೆ ಭಂಡಾರದ ಮನೆಯಿಂದ ಆಗಮನವಾಗಲಿದೆ. 7:00ಕ್ಕೆ ರಾಜನ್ ದೈವ ಗುಳಿಗನ ಕೋಲ ನಡೆದು ಬಳಿಕ ಅನ್ನಸಂರ್ಪಣೆ ನಡೆಯಲಿದೆ.