Friday, July 31, 2026
spot_imgspot_img
spot_imgspot_img

ಕರುವಿನ ಬಾಲ ಕತ್ತರಿಸಿದ ಕೃತ್ಯದ ವಿರುದ್ಧ ಹಿಂದು ಸಂಘಟನೆಗಳ ಆಕ್ರೋಶ

- Advertisement -
- Advertisement -

ಉಡುಪಿ : ಬ್ರಹ್ಮಾವರ ತಾಲೂಕಿನ ಗುಂಡ್ಮಿ ಗ್ರಾಮದಲ್ಲಿ ಸೇಲ್ಸ್‌ಮ್ಯಾನ್ ಸೋಗಿನಲ್ಲಿ ಬಂದ ದುಷ್ಕರ್ಮಿಯೊಬ್ಬ ಅಂಗಳದಲ್ಲಿದ್ದ ಕರುವಿನ ಬಾಲ ಕತ್ತರಿಸಿ ಕ್ರೌರ್ಯ ಮೆರೆದ ಘಟನೆ ಬುಧವಾರ ಸಂಭವಿಸಿದೆ.

ರಾಜ್ಯದಲ್ಲಿ ಇತ್ತೀಚೆಗಿನ ದಿನಗಳಲ್ಲಿ ಗೋವುಗಳ ಮೇಲೆ ಕ್ರೌರ್ಯ ಮೆರೆದ ಕೆಲವು ಘಟನೆಗಳು ನಡೆದಿದ್ದು, ಇದು ಇದೇ ಮಾದರಿಯ ಇನ್ನೊಂದು ಘಟನೆ ಎಂದು ಹಿಂದು ಸಂಘಟನೆಗಳು ಆಕ್ರೋಶ ವಯಕ್ತಪಡಿಸಿವೆ.ಕರುವಿನ ಬಾಲ ಕತ್ತರಿಸಿದ ಕೃತ್ಯದ ವಿರುದ್ಧ ಹಿಂದು ಸಂಘಟನೆಗಳ ಆಕ್ರೋಶಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಿ ಗರ್ಭ ಧರಿಸಿದ್ದ ಹಸುವಿನ ತಲೆ ಕಡಿದು ಅದರ ಹೊಟ್ಟೆಯೊಳಗಿದ್ದ ಕರುವನ್ನು ಕಿತ್ತು ತೆಗೆದುಕೊಂಡ ಹೋದ ಬರ್ಬರ ಘಟನೆ ಇಡೀ ರಾಜ್ಯವನ್ನು ಬೆಚ್ಚಿಬೀಳಿಸಿತ್ತು. ಇದಕ್ಕೂ ಮೊದಲು ಮೈಸೂರಿನಲ್ಲಿ ದುರುಳರು ಗೂಳಿಯ ಬಾಲ ಕತ್ತರಿಸಿ ವಿಕೃತಿ ಮೆರೆದಿದ್ದರು. ಇದರ ಬೆನ್ನಿಗೆ ಬ್ರಹ್ಮಾವರದಲ್ಲಿ ಕರುವಿನ ಬಾಲ ಕತ್ತರಿಸಿದ್ದು, ಇದು ಕೋಮು ಸೌಹಾರ್ದ ಕದಡಲು ಉದ್ದೇಶಪೂರ್ವಕವಾಗಿ ನಡೆಸುತ್ತಿರುವ ಕೃತ್ಯಗಳು ಎಂದು ಹಿಂದು ಸಂಘಟನೆಗಳು ಆರೋಪಿಸಿವೆ.ಗುಂಡ್ಮಿಯಲ್ಲಿ ಮಯ್ಯ ಎಂಬುವರ ಮನೆಗೆ ಸೇಲ್ಸ್‌ಮ್ಯಾನ್ ಸೋಗಿನಲ್ಲಿ ಬಂದಿದ್ದ ದುರುಳ ಮನೆಯವರನ್ನು ಕರೆದಿದ್ದಾನೆ. ಮಹಿಳೆಯೊಬ್ಬರು ಹೊರಬಂದಾಗ ತನ್ನ ಬ್ಯಾಗಿನಲ್ಲಿದ್ದ ವಸ್ತುಗಳನ್ನು ತೋರಿಸಿದ್ದಾನೆ. ಮಹಿಳೆ ನಮಗೆ ಯಾವ ವಸ್ತುವೂ ಬೇಡ ಎಂದು ಬಾಗಿಲು ಹಾಕಿದಾಗ ಮನೆ ಬಳಿಯೇ ಇದ್ದ 2 ವರ್ಷದ ಕರುವಿನ ಬಾಲ ಕತ್ತರಿಸಿ ಪರಾರಿಯಾಗಿದ್ದಾನೆ. ಕೋಟ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.ಇದಕ್ಕೂ ಮೊದಲು ಕೆಲವು ದಿನಗಳ ಹಿಂದೆ ಹಿರಿಯಡ್ಕ ವೀರಭದ್ರ ದೇವಸ್ಥಾನದ ಗೋಶಾಲೆಯಿಂದ ದನ ಕಳವು ಮಾಡಲಾಗಿತ್ತು. ಈ ಸಂಬಂಧ ಪೊಲೀಸ್ ದೂರು ದಾಖಲಾಗಿದೆ. ಬುಧವಾರ ಮುಂಜಾನೆ 2 ರಿಂದ 3 ಗಂಟೆಯ ನಡುವೆ ಈ ಕಳ್ಳತನ ನಡೆದಿದ್ದು ಸಿಸಿ ಕ್ಯಾಮೆರಾದಲ್ಲಿ ದೃಶ್ಯ ದಾಖಲಾಗಿದೆ. ದೇವಸ್ಥಾನದ ಮುಂಭಾಗದ ಬಾಕಿಮಾರು ಗದ್ದೆಯಲ್ಲಿ ಗೋಶಾಲೆ ಇದ್ದು, ಅಲ್ಲಿ ಕಟ್ಟಿ ಹಾಕಲಾಗಿದ್ದ ಎರಡು ಹಸುಗಳನ್ನು ದುಷ್ಕರ್ಮಿಗಳು ಕಳ್ಳತನ ಮಾಡಿದ್ದಾರೆ. ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸಿಸಿ ಟಿವಿ ದೃಶ್ಯ ಆಧರಿಸಿ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

- Advertisement -

Related news

error: Content is protected !!