Tuesday, July 1, 2025
spot_imgspot_img
spot_imgspot_img

ವಿಟ್ಲ: ಭ। ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಪಂಚಕಲ್ಯಾಣ ಮಹೋತ್ಸವ –

- Advertisement -
- Advertisement -

(ಫೆ.13) ಗುರುವಾರದ ಕಾರ್ಯಕ್ರಮ

ವಿಟ್ಲ: ಭ। ಶ್ರೀ ೧೦೦೮ ಚಂದ್ರನಾಥ ಸ್ವಾಮಿ ಬಸದಿ ತೀರ್ಥಂಕರರ ಮತ್ತು ಭ। ಶ್ರೀ ೧೦೦೮ ಶ್ರೀ ಮಹಾವೀರ ಸ್ವಾಮಿ ತೀರ್ಥಂಕರರ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠೆ ಹಾಗೂ ಯಕ್ಷಿ ಶ್ರೀ ಪದ್ಮಾವತಿ ಅಮ್ಮನವರ ಮತ್ತು ಯಕ್ಷಿ ಶ್ರೀ ಜ್ವಾಲಾಮಾಲಿನಿ ಅಮ್ಮನವರ ಪ್ರತಿಷ್ಠಾ ಮಹೋತ್ಸವವು 13-02-2025ನೇ ಗುರುವಾರದಿಂದ 17-02-2025ನೇ ಸೋಮವಾರದವರೆಗೆ ನಡೆಯಲಿದೆ.

ದಿನಾಂಕ: 13-02-2025ನೇ ಗುರುವಾರ ಬೆಳಿಗ್ಗೆ 06:55ರಿಂದ ಇಂದ್ರ ಪ್ರತಿಷ್ಠೆ, 07:55ರ ಕುಂಭ ಲಗ್ನದಲ್ಲಿ ತೋರಣ ಮುಹೂರ್ತ, ವಿಮಾನಶುದ್ಧಿ ವಿಧಾನ, ದಿವಾಗಂಟೆ 12:15ರ ಅಭಿಜಿನ್ ಲಗ್ನದಲ್ಲಿ ಮುಖವಸ್ತ್ರ ಉದ್ಘಾಟನೆ, ಅಪರಾಹ್ನ 02:00 ರಿಂದ ನಾಂದಿ ಮಂಗಲ ಪೂಜಾ ವಿಧಾನ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ, ದಿಕ್ಷಾಲಕ ಬಲಿ ವಿಧಾನ, ಮತ್ತಿಕಾ ಸಂಗ್ರಹಣೆ, ಅಂಕುರಾರ್ಪಣೆ ನಡೆಯಲಿದೆ. ಬಳಿಕ ಸಂಜೆ 05:05ರ ಕರ್ಕಾಟಕ ಲಗ್ನದಲ್ಲಿ ಪಂಚಕಲ್ಯಾಣ ಮಂಟಪ ಪ್ರವೇಶ, ಸಂಜೆ 06:45ರ ಸಿಂಹ ಲಗ್ನದಲ್ಲಿ ಶ್ರೀ ಕ್ಷೇತ್ರಪಾಲ ಪ್ರತಿಷ್ಠೆ, ಸಂಜೆ 4:30ಕ್ಕೆ ಅನ್ನೋದಕ ಮೆರವಣಿಗೆ, ಅಭಿಷೇಕ ಪೂಜೆ, ಮಹಾಮಂಗಳಾರತಿ ನಡೆಯಲಿದೆ.

ಸಂಜೆ 5:00ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಶ್ರೀ ಜೈನಮಠ ಮೂಡಬಿದಿರೆ ಪರಮಪೂಜ್ಯ ಭಾರತಭೂಷಣ ಸ್ವಸ್ತಿಶ್ರೀ ಡಾ॥ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯವರ್ಯ ಮಹಾಸ್ವಾಮಿ, ಶ್ರೀ ಜೈನಮಠ, ಕಾರ್ಕಳ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿ ಆಶೀರ್ವಚನ ಮತ್ತು ಪಾವನ ಸಾನ್ನಿಧ್ಯ ನೀಡಲಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆ ಅಧ್ಯಕ್ಷತೆ ವಹಿಸಲಿದ್ದಾರೆ. ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೆರಿಸಲಿದ್ದಾರೆ. ಬಂಗಾರು ಅರಸರು, ವಿಟ್ಲ ಅರಮನೆ ಗೌರವ ಉಪಸ್ಥಿತರಿರುವರು. ಮಂಗಳೂರು ಲೋಕಸಭಾ ಕ್ಷೇತ್ರ ಸಂಸದ ಕ್ಯಾ| ಬ್ರಿಜೇಶ್ ಚೌಟ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರಳ ರಾಜೇಂದ್ರ ಶೆಟ್ಟಿ, ಕರ್ನಾಟಕ ಸರಕಾರ ಮಾಜಿ ಸಚಿವ ಅಭಯಚಂದ್ರ ಜೈನ್, ಸುರೇಶ ಬಲ್ಲಾಳ್, ಬಲ್ಲಾಳ್‌ಬಾಗ್, ಮಂಗಳೂರು ಗೌರವಾನ್ವಿತ ಅತಿಥಿಗಳಾಗಿ ಉಪಸ್ಥಿತರಿರುವರು. ರಾತ್ರಿ 7:00ರಿಂದ ಡೈನಾಮಿಕ್ ಡ್ಯಾನ್ಸ್ ಫ್ಯಾಕ್ಟರಿ ಉಜಿರೆ, ಇವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

- Advertisement -

Related news

error: Content is protected !!