Saturday, June 6, 2026
spot_imgspot_img
spot_imgspot_img

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವರ ಸನ್ನಿಧಿಯಲ್ಲಿ ವಿಜೃಂಭಣೆಯಿಂದ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ

- Advertisement -
- Advertisement -

ವಿಟ್ಲ: ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನ, ಪಿಲಿಪ್ಪೆ-ವಿಷ್ಣುನಗರ ಶ್ರೀ ಮಲರಾಯ ಮೂವರ್ ದೈವಂಗಳ ದೈವಸ್ಥಾನ, ಶಿಬರಿಕಲ್ಲ ಮಾಡ ಕುಳ ಇಲ್ಲಿ ದಿನಾಂಕ: 18-08-2022ರಂದು ಶ್ರೀಕೃಷ್ಣ ಜನ್ಮಾಷ್ಟಮಿ ಉತ್ಸವ ಕಾರ್ಯಕ್ರಮ ನಡೆಯಿತು.

ಬೆಳಿಗ್ಗೆ 7.30ರಿಂದ ಧಾರ್ಮಿಕ ಕಾರ್ಯಕ್ರಮ ನಾಲ್ಕು ಕಾಯಿ ಗಣಪತಿ ಹವನ, ಭಜನೆ, ಪಂಚಾಮೃತಾಭಿಷೇಕ ಸಹಿತ ಪವಮಾನ ಅಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಭಜನೆ, ರಂಗಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ, ತೊಟ್ಟಿಲೋತ್ಸವ ನಡೆಯಿತು.

ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಕೃಷ್ಣಯ್ಯ ಕೆ. ವಿಟ್ಲ ಅರಮನೆ, ಜಯಪ್ರಕಾಶ್ ನಾಯಕ್‌ ನಾಟೆಕಲ್ಲು ಅಧ್ಯಕ್ಷರು, ವಿಟ್ಲ ಮುಡ್ನೂರು ಗ್ರಾಮ ಪಂಚಾಯತ್‌, ಯಶೋದ ಕಂಪ ಉಪಾಧ್ಯಕ್ಷರು, ಕುಳ-ಇಡ್ಕಿದು ಗ್ರಾಮ ಪಂಚಾಯತ್‌, ಯತೀಶ್ ಹಡೀಲು, ಅಧ್ಯಕ್ಷರು ವಿಷ್ಣುಮೂರ್ತಿ ಯುವಕ ವೃಂದ (ರಿ.) ವಿಷ್ಣುನಗರ ಭಾಗವಹಿಸಿದ್ದರು. ವೇದಿಕೆಯಲ್ಲಿ ಕುಂಡಡ್ಕ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ದಯಾನಂದ ಉಜಿರೆಮಾರು ಉಪಸ್ಥಿತರಿದ್ದರು.

ಬೆಳಿಗ್ಗೆ 9.30ಕ್ಕೆ ಆಟೋಟ ಸ್ಫರ್ಧೆಗಳಾದ ಮಡಕೆ ಒಡೆಯುವುದು, ತಪ್ಪಾಂಗಾಯಿ, ಹಿಟ್ಟಿನಲ್ಲಿ ನಾಣ್ಯ ಹುಡುಕುವುದು, ನೀರು ಕುಡಿಯುವ ಸ್ಪರ್ಧೆ ನಡೆಯಿತು. ಪುರುಷರಿಗೆ, ಮಹಿಳೆಯರಿಗೆ ,ಬಾಲಕರಿಗೆ,ಬಾಲಕಿಯರಿಗೆ ವಿವಿಧ ಸ್ಪರ್ಧೆಗಳು ನಡೆಯಿತು.

- Advertisement -

Related news

error: Content is protected !!