- Advertisement -
- Advertisement -





ಸುಳ್ಯ: ಪಯಸ್ವಿನಿ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿದ್ದ ಯುವಕನ ಮೃತದೇಹ ರವಿವಾರ ಪತ್ತೆಯಾಗಿದೆ. ಮೃತರನ್ನು ಪಿರಿಯಾಪಟ್ಟಣದ ಅಜಿತ್ (24) ಎಂದು ಗುರುತಿಸಲಾಗಿದೆ.
ಅಜಿತ್ ಸುಳ್ಯದ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದು, ಕೆಲವು ತಿಂಗಳ ಹಿಂದೆ ಊರಿಗೆ ಹೋಗಿದ್ದವರು ಮರಳಿ ಬಂದಿರಲಿಲ್ಲ.ರವಿವಾರ ಪಯಸ್ವಿನಿ ನದಿ ಹರಿಯುವ ಸುಳ್ಯದ ಅಂಗಡಿಮಠ ಗೋಳಿಮೂಲೆ ಯಲ್ಲಿ ಮಹಿಳೆಯೋರ್ವರಿಗೆ ಶವ ಕಂಡುಬಂದಿದ್ದು, ಅವರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಪೊಲೀಸರು ಶವದ ಬಳಿಯಲ್ಲಿದ್ದ ದಾಖಲೆಗಳ ಮೂಲಕ ಮೃತರ ಗುರುತು ಪತ್ತೆ ಹಚ್ಚಿದರು.
- Advertisement -








