



ಪುತ್ತೂರು: ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಿಶ್ವವಿದ್ಯಾಲಯ, ರಾಷ್ಟ್ರೀಯ ಸೇವಾ ಯೋಜನೆ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿಟ್ಲ “ನನ್ನ ಭಾರತಕ್ಕೆ ಯುವಜನತೆ, ಡಿಜಿಟಲ್ ಸಾಕ್ಷರತೆಗಾಗಿ ಯುವಜನತೆ” ಎಂಬ ಶಿರೋನಾಮೆಯೊಂದಿಗೆ ವಾರ್ಷಿಕ ವಿಶೇಷ ಶಿಬಿರ 2024-25 ಫೆ.18-2- 2025ನೇ ಮಂಗಳವಾರದಿಂದ ಫೆ.24-2- 2025ನೇ ಸೋಮವಾರದ ವರೆಗೆ .ಕ.ಜಿ.ಪಂ.ಹಿರಿಯ ಪ್ರಾಥಮಿಕ ಸಾಜ, ಪುತ್ತೂರು ಇಲ್ಲಿ ನಡೆಯಲಿದೆ.

ದಿನಾಂಕ 18-2-2025ನೇ ಮಂಗಳವಾರ ಪೂರ್ವಾಹ್ನ 10:00 ರಿಂದ 2:30 ವರೆಗೆ ಶಿಬಿರದ ಪೂರ್ವಭಾವಿ ಸಿದ್ಧತೆ ನಡೆದು ಬಳಿಕ ಅಪರಾಹ್ನ 3:00 ರಿಂದ 4:30 ಉದ್ಘಾಟನಾ ಸಮಾರಂಭ ನಡೆಯಲಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕ ಅಶೋಕ್ ಕುಮಾರ್ ರೈ, ಕಾಲೇಜು ಅಭಿವೃಧ್ಧಿ ಸಮಿತಿ ಅಧ್ಯಕ್ಷ ಸಪ್ರದಕಾ ವಿಟ್ಲ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಪ್ರೊ. ಪದ್ಮನಾಭ ಅಧ್ಯಕ್ಷತೆ ವಹಿಸಲಿದ್ದಾರೆ. ಬಲ್ನಾಡು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪರಮೇಶ್ವರಿ ಬಿ ಆರ್, ಬಲ್ನಾಡು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಚಂದ್ರ ಸಾಜ, ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ದ.ಕ.ಜಿ.ಪಂ.ಹಿ. ಪ್ರಾ. ಸಾಜ ಶಾಲೆ ಎಸ್. ಆರ್, ಎಸ್.ಡಿ. ಎಂ.ಸಿ, ಅಧ್ಯಕ್ಷ ಸುಧಾಕರ್ ನಾಯಕ್ ಹಸಂತಡ್ಕ, ವಿಟ್ಲ ಸ.ಪ್ರ.ದ.ಕಾಲೇಜು, ಕಾಲೇಜು ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅಶ್ರಫ್. ವಿ. ಕೆ. ಎಂ. ಸಾಜ ಅರಣ್ಯ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಆಳ್ವ ಸಾಜ, ಪ್ರಗತಿಪರ ಕೃಷಿಕ ನಾರಾಯಣ ರೈ ಸಾಜ, ಪುತ್ತೂರು ಟೌನ್ ಬ್ಯಾಂಕ್ ನಿರ್ದೇಶಕ ಕಿರಣ್ ಕುಮಾರ್ ರೈ, ಮುಖ್ಯ ಅತಿಥಿಗಳು ಹಾಗೂ ದ.ಕ.ಜಿ.ಪಂ. ಹಿ.ಪ್ರಾ ಶಾಲೆ ಸಾಜ ಮುಖ್ಯ ಗುರುಗಳು ಶಶಿಕಾಂತ್ ಸಿ. ಗೌರವ ಉಪಸ್ಥಿತರಿರುವರು.
ದಿನಾಂಕ 19-02-2025ನೇ ಬುಧವಾರ ಪೂರ್ವಾಹ್ನ 7:30ಕ್ಕೆ ಶ್ರಮದಾನದ ಉದ್ಘಾಟನೆಯನ್ನು ದ.ಕ.ಜಿ.ಪಂ.ಹಿ. ಪ್ರಾ. ಶಾಲೆ ಸಾಜ ಸ್.ಡಿ. ಎಂ.ಸಿ. ಸುಧಾಕರ್ ನಾಯಕ್ ಹಸಂತಡ್ಕ ನೇರವೆರಿಸಲಿದ್ದಾರೆ. ರಮೇಶ ಪೂಜಾರಿ ಕಾಡ್ಲ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಅಪರಾಹ್ನ 2:30- 4:00 ಶೈಕ್ಷಣಿಕ ಕಾರ್ಯಕ್ರಮ ನಡೆಯಲಿದೆ. ತೇಜಸ್ ಪೊಳ್ನಾಯ ಕೂಟೇಲು ಅಧ್ಯಕ್ಷತೆ ವಹಿಸಲಿದ್ದಾರೆ. ಸಂವಾದ ಸಂಪನ್ಮೂಲ ಕೇಂದ್ರ, ಮಂಗಳೂರು ಯೋಗೀಶ್ ಮಲ್ಲಿಗೆಮಾಡು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. (KTM) ಉದ್ಯಮಿ ಗಣೇಶ್ ಭಟ್ ಸುದೇನಡ್ಕ, ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಸಾಜ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಮಹಮ್ಮದ್ ಎಸ್ ಕೆ. ಸಾಜ, ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವಿಟ್ಲ ಸ. ಪ್ರ. ದ. ಕಾಲೇಜು ವಾಣಿಜ್ಯ ವಿಭಾಗ ಮುಖ್ಯಸ್ಥೆ ಪ್ರೊ ಶಶಿಕಲ ಕೆ ಉಪಸ್ಥಿತರಿರುವರು .ಸಾಯಂಕಾಲ 6:30 ರಿಂದ 7:30ವರೆಗೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಪ್ರಗತಿಪರ ಕೃಷಿಕ ಕೃಷ್ಣಪ್ರಸಾದ್ ಭಂಡಾರಿ ಕೂಟೇಲು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಿಯೂರುಕಟ್ಟೆ ಸ.ಪ.ಪೂ ಕಾಲೇಜು ಉಪನ್ಯಾಸಕಿ ಇಂದಿರಾ ಭಂಡಾರಿ ಕೆ.ಎಂ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಬಲ್ನಾಡು ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕ ವೀಣಚಂದ್ರ ಆಳ್ವ ಎ.ಎಂ. ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸ. ಪ್ರ. ದ. ಕಾಲೇಜು ಕನ್ನಡ ವಿಭಾ ಮುಖ್ಯಸ್ಥೆ ಪ್ರೊ ಸುಜಾತಾ ಎಂ.ಕೆ ಉಪಸ್ಥಿತರಿರುವರು .
ದಿನಾಂಕ 20-02-2025 ನೇ ಗುರುವಾರ ನಡೆಯುವ ಕಾರ್ಯಕ್ರಮದಲ್ಲಿ ಜೆಸಿಐ ಭಾರತ ಅಧ್ಯಕ್ಷ ಭಾಗೇಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ವಿದ್ಯಾಮಾತಾ ಅಕಾಡೆಮಿ ಭಾಗೇಶ್ ರೈ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಸಾಜ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷೆ ಅನುರಾಧ ನಾಯ್ಕ ಸರಳೀಕಾನ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸ. ಪ್ರ. ದ. ಕಾಲೇಜು ಸಮಾಜ ಕಾರ್ಯ ವಿಭಾಗ ಸಹಾಯಕ ಪ್ರಾಧ್ಯಾಪಕಿ ಡಾ. ಸೌಮ್ಯ ಹೆಚ್ ಉಪಸ್ಥಿತರಿರುವರು. ಸಾಯಂಕಾಲ 5:00ರಿಂದ 6:00 ವರೆಗೆ ದ.ಕ.ಜಿ. ಪಂ. ಹಿರಿಯ ಪ್ರಾಥಮಿಕ ಶಾಲೆ ಸಾಜ ಮೈದಾನದಲ್ಲಿ ಮಹಿಳೆಯರಿಗೆ ಗ್ರಾಮೀಣ ಕ್ರೀಡೆಗಳು ನಡೆದು ಬಳಿಕ ಸಾಯಂಕಾಲ 6.30 ರಿಂದ 7.30ವರೆಗೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಜೆಸಿಐ ಭಾರತ ಅಧ್ಯಕ್ಷ ಭಾಗೇಶ್ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಜೆಸಿಐ ಭಾರತ ಜೇಸೀ ಕೃಷ್ಣಮೋಹನ್ ಪಿ.ಎಸ್. ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಶ್ರೀ. ಕ್ಷೇ.ಧ. ಗ್ರಾ. ಯೋಜನೆ ಸಾರ್ಯ ಒಕ್ಕೂಟ ಅಧ್ಯಕ್ಷ ಭಾಸ್ಕರ ಕೆ. ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸ. ಪ್ರ. ದ.ಕಾ. ವಾಣಿಜ್ಯ ವಿಭಾಗ ಸಹಾಯಕ ಪ್ರಾಧ್ಯಾಪಕಿ ಪ್ರೊ. ಮಾಳವಿಕಾ ಕ್ಯಾಥರಿನ್ ಬಲ್ಮಿ ಉಪಸ್ಥಿತರಿರುವರು. ರಾತ್ರಿ 7.30-ರಿಂದ 8.30ವರೆಗೆ ಸಂಜೀವಿನಿ ಒಕ್ಕೂಟ ಹಾಗೂ ಸ್ತ್ರೀಶಕ್ತಿ ಗುಂಪು, ಸಾಜ ಅಂಗನವಾಡಿ ಕೇಂದ್ರ ಇವರಿಂದ ಲಿಂಗತ್ವ ಆಧಾರಿತ ದೌರ್ಜನ್ಯದ ಬಗ್ಗೆ ಕಿರುನಾಟಕ ನಡೆಯಲಿದೆ.
ದಿನಾಂಕ: 21-02-2025ನೇ ಶುಕ್ರವಾರ ಪೂರ್ವಾಹ್ನ 9:00 ರಿಂದ 12:00ವರೆಗೆ ಬಲ್ನಾಡು ಗ್ರಾಮ ಪಂಚಾಯತ್ ಸಹಯೋಗದೊಂದಿಗೆ ಗ್ರಾಮೀಣ ಸ್ವಚ್ಚತಾ ಕಾರ್ಯಕ್ರಮ ನಡೆಯಲಿದೆ. ಪೂರ್ವಾಹ್ನ 10:00ರಿಂದ 1:00 (ಶಾಲಾ ಮಕ್ಕಳಿಗಾಗಿ) ನಡೆಯುವ ಕಾರ್ಯಕ್ರಮದಲ್ಲಿ ದ.ಕ.ಜಿ.ಪಂ. ಹಿ.ಪ್ರಾ ಶಾಲೆ, ಸಾಜ ಮುಖ್ಯ ಗುರುಗಳು ಶಶಿಕಾಂತ್ ಸಿ ಅಧ್ಯಕ್ಷತೆ ವಹಿಸಲಿದ್ದಾರೆ. ವಿಟ್ಲಜೀವನ ಕೌಶಲ್ಯ ತರಬೇತುದಾರರು, ಹಿರಿಯ ವಿದ್ಯಾರ್ಥಿಗಳು, ಕುಮಾರಿ ಅಂಕಿತ ಸುದೇಶ್ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ದ.ಕ.ಜಿ.ಪಂ. ಹಿ.ಪ್ರಾ ಶಾಲೆ, ಸಾಜ ಪ.ಪ್ರಾ. ಶಾಲಾಶಿಕ್ಷಕಿ ಕವಿತಾ ಹೆಚ್.ಎಲ್. ದ.ಕ.ಜಿ.ಪಂ. ಹಿ.ಪ್ರಾ ಶಾಲೆ, ಸಾಜ ಗೌರವ ಸಹಶಿಕ್ಷಕ ಕೃಷ್ಣ ಕೂಟೇಲು ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಅಪರಾಹ್ನ 2:30 ರಿಂದ 4:00ವರೆಗೆ ಶೈಕ್ಷಣಿಕ ಕಾರ್ಯಕ್ರಮಗಳು ನಡೆಯಲಿದೆ. ಸಾಜ ಸಾಜ ಅಧ್ಯಕ್ಷ ಬಾಲಕೃಷ್ಣ ನಾಯ್ಕ ಮುರುಂಗಿ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಗ್ರಾಮಾಂತರ ಪೋಲಿಸ್ ಠಾಣೆ ಉಪ ಆರಕ್ಷಕ ನಿರೀಕ್ಷಕ ಜಂಬೂರಾಜ ಮಹಾಜನ್ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಸಾಜ ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ಧನಂಜಯ ನಾಯ್ಕ ಕಾನುಮೂಲೆ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಕುಮಾರೇಶ್ವರ್ ಉಪಸ್ಥಿತರಿರುವರು. ಸಾಯಂಕಾಲ 6:30 ರಿಂದ 7:30ವರೆಗೆ ಸಾರ್ವಜನಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಸಾಜ ಹಿರಿಯ ದೈವನರ್ತಕ ಕುಟ್ಟಿನಲಿಕೆ ಕೂಟೇಲು ಅಧ್ಯಕ್ಷತೆ ವಹಿಸಲಿದ್ದಾರೆ. ಬಲ್ನಾಡು ಬಲ್ನಾಡು ನಿರ್ದೇಶಕ ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಸುಬೋಧ ರೈ ಸಾಜ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸ. ಪ್ರ. ದ. ಕಾಲೇಜು ಇಂಗ್ಲಿಷ್ ವಿಭಾಗ ಸಹಾಯಕ ಪ್ರಾಧ್ಯಾಪಕ ಪ್ರೊ. ಓಂಪ್ರಕಾಶ್ ಉಪಸ್ಥಿತರಿರುವರು.
ದಿನಾಂಕ: 22-02-2025ನೇ ಶನಿವಾರ ಪೂರ್ವಾಹ್ನ 10:30 ರಿಂದ 12:00 ವರೆಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಪಾಣಾಜೆ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಮಂಗಳೂರು, ಎಸ್ಸಿಲ್ಲೋರ್ ವಿಷನ್ ಫೌಂಡೆಷನ್, ಬೆಂಗಳೂರು ಸಹಯೋಗದಲ್ಲಿ ಉಚಿತ ಮಧುಮೇಹ, ರಕ್ತದೊತ್ತಡ, ನೇತ್ರ ತಪಾಸಣಾ ಶಿಬಿರ ನಡೆದು ಅಪರಾಹ್ನ 2:30 ರಿಂದ 4:00ವರೆಗೆ ನಡೆಯುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ನಡೆಯಲಿದೆ. ಸಾಜ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ, ಉಪಾಧ್ಯಕ್ಷೆ ಮಲಾ ಚರಣ್ ಅಧ್ಯಕ್ಷತೆ ವಹಿಸಲಿದ್ದಾರೆ. ಮೂಹ ಸಂಪನ್ಮೂಲ ವ್ಯಕ್ತಿ, ನರಿಮೊಗ್ರು ಕ್ಲಸ್ಟರ್, ಪುತ್ತೂರು ಪರಮೇಶ್ವರಿ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಸುಂದರ್ ಪೂಜಾರಿ ಕಾಡ್ಲ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸ. ಪ್ರ. ದ. ಕಾಲೇಜು ಸಮಾಜಕಾರ್ಯ ವಿಭಾಗ ಮುಖ್ಯಸ್ಥ ಪ್ರೊ. ಪ್ರಸನ್ನ ಕುಮಾರ್ ಸಿ ಉಪಸ್ಥಿತರಿರುವರು. ಸಾಯಂಕಾಲ 6:30 ರಿಂದ 7:30ವರೆಗೆ ನಡೆಯುವ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಸಾಜ ಸೌಜನ್ಯ ಯುವಜನ ಸಂಘ ಅಧ್ಯಕ್ಷ ಯೂಸುಫ್ ಗೌಸಿಯಾ ಅಧ್ಯಕ್ಷತೆ ವಹಿಸಲಿದ್ದಾರೆ. ಪುತ್ತೂರು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ ಮೇಲ್ವಿಚಾರಕ ಶ್ರೀಕಾಂತ್ ಪೂಜಾರಿ ಬಿರಾವು ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಪುತ್ತೂರು ಯುವಜನ ಒಕ್ಕೂಟ ಕೋಶಾಧಿಕಾರಿ ಹಮೀದ್ ಸಾಜ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕಿ ಕುಸುಮ ಉಪಸ್ಥಿತರಿರುವರು. ರಾತ್ರಿ 7:30 ರಿಂದ 8:30ವರೆಗೆ 8.30 ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ದಿನಾಂಕ: 23-02-2025ನೇ ಭಾನುವಾರ ಅಪರಾಹ್ನ 2:30 ರಿಂದ 4:00ವರೆಗೆ ನಡೆಯುವ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಸಾಜ ಸಾಜ ಅಧ್ಯಕ್ಷ ಕೃಪನ್ ಕುಮಾರ್ ಅಟ್ಲಾರು ಅಧ್ಯಕ್ಷತೆ ವಹಿಸಲಿದ್ದಾರೆ. ದಕ್ಷಿಣಕನ್ನಡ ಮಕ್ಕಳ ರಕ್ಷಣಾಧಿಕಾರಿ ವಝೀರ್ ಅಹಮ್ಮದ್ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಸಾಜ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಎಸ್.ಡಿ.ಎಂ.ಸಿ ಮಾಜಿ ಅಧ್ಯಕ್ಷ ತಿಮ್ಮಪ್ಪ ಗೌಡ ಸರಳೀಕಾನ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಉಪನ್ಯಾಸಕ ಶ್ರೀದೇವಿ ಉಪಸ್ಥಿತರಿರುವರು.ಸಾಯಂಕಾಲ 6:30 ರಿಂದ 7:30ವರೆಗೆ ನಡೆಯುವ ಸಾರ್ವಜನಿಕ ಸಭಾ ಕಾರ್ಯಕ್ರಮದಲ್ಲಿ ಬಲ್ನಾಡು ಬಲ್ನಾಡು ಮಾಜಿ ಉಪಾಧ್ಯಕ್ಷ ಇದ್ದಿಕುಂಞ ಹಾಜಿ ಅಧ್ಯಕ್ಷತೆ ವಹಿಸಲಿದ್ದಾರೆ. ಮಾತೃಶ್ರೀ ಇವೆಂಟ್ ಮಾನೇಜ್ಮೆಂಟ್ ಭವಿಷ್ಯತ್ ಹಸಂತಡ್ಕ ಸಂಪನ್ಮೂಲ ವ್ಯಕ್ತಿಯಾಗಿ ಉಪಸ್ಥಿತರಿರುವರು. ಸಾಜ ದ.ಕ.ಜಿ.ಪಂ. ಹಿ.ಪ್ರಾ.ಶಾಲೆ ವೃತ್ತ ಮುಖ್ಯ ಗುರುಗಳು ಜಯಲಕ್ಷ್ಮಿ ಎನ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಿರಿಯ ಗ್ರಂಥಪಾಲಕ ಪ್ರೊ. ನಿರಂಜನ್ ಉಪಸ್ಥಿತರಿರುವರು. ಸಂಜೆ 6:20 ರಿಂದ 7:00ವರೆಗೆ ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಸೇಸಪ್ಪರವರು ಯೋಗ ಹಾಗೂ ಏರೋಬಿಕ್ಸ್ ವ್ಯಾಯಾಮ ತರಬೇತಿ ನೀಡಲಿದ್ದಾರೆ.
ದಿನಾಂಕ: 24-02-2025ನೇ ಸೋಮವಾರ ಪೂರ್ವಾಹ್ನ 10:00 ರಿಂದ 1:00ವರೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಟ್ಲ ಸ. ಪ್ರ.ದ. ಕಾಲೇಜು ವಿಶ್ರಾಂತ ಪ್ರಾಂಶುಪಾಲ ಡಾ. ಶಂಕರ ಪಾಟಾಳಿ ಸಮಾರೋಪ ಭಾಷಣ ಮಾಡಲಿದ್ದಾರೆ. ಸಾಜ ದ.ಕ.ಜಿ.ಪಂ.ಹಿ.ಪ್ರಾ. ಶಾಲೆ ಎಸ್.ಡಿ. ಎಂ.ಸಿ, ಅಧ್ಯಕ್ಷ ಸುಧಾಕರ್ ನಾಯಕ್ ಹಸಂತಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಬಲ್ನಾಡು ಗ್ರಾಮ ಪಂಚಾಯತ್ ಪಂಚಾಯತ್ ಅಭಿವೃದ್ಧಿ ಅಧಿಕಾರಿ ದೇವಪ್ಪ ಪಿ ಆರ್, ವಿಟ್ಲ ಸ.ಪ್ರ.ದ.ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಚಾರ್ಲಿ ಫೆಲಿಕ್ಸ್ ಸೀಕ್ವೆರಾ, ಬಲ್ನಾಡು ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕ ಚಂದಪ್ಪ ಪೂಜಾರಿ ಕಾಡ್ಲ, ಉದ್ಯಮಿಗಳು ಮುರಳೀಕೃಷ್ಣ ಹಸಂತಡ್ಕ, ಉದ್ಯಮಿ ಕೃಷ್ಣವೇಣಿ ಕರುಣಾಕರ ರೈ ಸಾಜ, ಪ್ರಗತಿಪರ ಕೃಷಿಕ ಸ್ವರೂಪ ಜೆ. ಶೆಟ್ಟಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿರುವರು. ಸಮೂಹ ಸಂಪನ್ಮೂಲ ವ್ಯಕ್ತಿ, ಇರ್ದೆ ಉಪ್ಪಳಿಗೆ ಕ್ಲಸ್ಟರ್, ಪುತ್ತೂರು ಶಾಲಿನಿ ಬಿ, ಸಾಜ ದ.ಕ.ಜಿ.ಪಂ.ಹಿ.ಪ್ರಾ ಶಾಲೆ ಮುಖ್ಯ ಗುರುಗಳು ಶಶಿಕಾಂತ್ ಸಿ, ವಿಟ್ಲ ಸ.ಪ್ರದ. ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ. ಸೇಸಪ್ಪ, ಗೌರವ ಉಪಸ್ಥಿತರಿರುವರು.








