Friday, July 4, 2025
spot_imgspot_img
spot_imgspot_img

ಚಾಂಪಿಯನ್ಸ್ ಟ್ರೋಫಿ ಇಂದು ಭಾರತ- ಪಾಕಿಸ್ಥಾನ ಮುಖಾಮುಖಿ

- Advertisement -
- Advertisement -

ದುಬೈ : ಚಾಂಪಿಯನ್ಸ್ ಟ್ರೋಫಿ ಕೂಟದಲ್ಲಿ ಇಂದು ಭಾರತ- ಪಾಕಿಸ್ಥಾನ ಮುಖಾಮುಖಿಯಾಗಲಿದ್ದು, ಕ್ರಕೆಟಿನ ಈ ಮಹಾಕದನವನ್ನು ಜನರು ಕಾತರದಿಂದ ಎದುರು ನೋಡುತ್ತಿದ್ದಾರೆ. ಭಾನುವಾರ ಮಧ್ಯಾಹ್ನ 2.30ರಿಂದ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿಯ 5ನೇ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಮುಖಾಮುಖಿಯಾಗಲಿವೆ.

ಈ ಜಿದ್ದಾಜಿದ್ದಿನ ಕದನ ಬಹಳ ನಿರೀಕ್ಷೆಗಳನ್ನು ಹುಟ್ಟುಹಾಕಿದೆ.ದುಬೈ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಮ್ಯಾಚ್‌ನಲ್ಲಿ ಟೀಮ್ ಇಂಡಿಯಾ ಗೆದ್ದರೆ ಸೆಮಿಫೈನಲ್‌ ಗೇರುವುದು ಬಹುತೇಕ ಖಚಿತವಾಗಲಿದೆ. ಅತ್ತ ಪಾಕಿಸ್ಥಾನ ತಂಡ ಸೋತರೆ ಟೂರ್ನಿಯಿಂದಲೇ ಹೊರಬೀಳಲಿದೆ. ಹೀಗಾಗಿ ಪಾಕ್ ಪಡೆಗೆ ಇದು ಮಾಡು ಇಲ್ಲವೇ ಮಡಿ ಪಂದ್ಯ ಎನ್ನಬಹುದು.ಭಾರತ ಮತ್ತು ಪಾಕಿಸ್ಥಾನ ತಂಡಗಳು ಏಕದಿನ ಕ್ರಿಕೆಟ್‌ನಲ್ಲಿ ಇದುವರೆಗೆ 135 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ.

ಈ ವೇಳೆ ಭಾರತ ತಂಡ ಗೆದ್ದಿರುವುದಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಪಾಕಿಸ್ಥಾನ ತಂಡವೇ ಗೆದ್ದಿದೆ. ಅದರಲ್ಲೂ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲೂ ಭಾರತದ ವಿರುದ್ಧ ಪಾಕ್ ಪಡೆ ಹೆಚ್ಚಿನ ಮ್ಯಾಚ್‌ಗಳಲ್ಲಿ ಜಯ ಸಾಧಿಸಿದೆ. 135 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಕೇವಲ 57 ಮ್ಯಾಚ್‌ಗಳಲ್ಲಿ ಮಾತ್ರ ಗೆದ್ದರೆ, ಅತ್ತ ಪಾಕಿಸ್ಥಾನ 73 ಪಂದ್ಯಗಳಲ್ಲಿ ಭಾರತ ತಂಡಕ್ಕೆ ಸೋಲುಣಿಸಿದೆ.

ಐದು ಪಂದ್ಯಗಳು ಫಲಿತಾಂಶ ರಹಿತವಾಗಿದ್ದವು.ಭಾರತ ಮತ್ತು ಪಾಕಿಸ್ಥಾನ ನಡುವಣ ಕೊನೆಯ ಐದು ಏಕದಿನ ಪಂದ್ಯಗಳ ಫಲಿತಾಂಶವನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ಟೀಮ್ ಇಂಡಿಯಾವೇ ಬಲಿಷ್ಠ. ಏಕೆಂದರೆ 2018ರಿಂದ ಭಾರತದ ವಿರುದ್ಧ ಪಾಕಿಸ್ಥಾನ ತಂಡವು ಒಂದೇ ಒಂದು ಏಕದಿನ ಪಂದ್ಯ ಗೆದ್ದಿಲ್ಲ. ಹೀಗಾಗಿ ಇಂದಿನ ಪಂದ್ಯದಲ್ಲೂ ಭಾರತ ತಂಡವೇ ಗೆಲ್ಲುವ ಫೇವರೇಟ್ ಆಗಿ ಗುರುತಿಸಿಕೊಂಡಿದೆ.ಈ ಪಂದ್ಯವು ಭಾರತೀಯ ಕಾಲಮಾನ ಮಧ್ಯಾಹ್ನ 2.30 ರಿಂದ ಶುರುವಾಗಲಿದೆ. ಇದಕ್ಕೂ ಮುನ್ನ 2 ಗಂಟೆಗೆ ಟಾಸ್ ಪ್ರಕ್ರಿಯೆ ನಡೆಯಲಿದೆ.ಭಾರತ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್,ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್‌, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಹರ್ಷಿತ್ ರಾಣಾ, ಮೊಹಮ್ಮದ್ ಶಮಿ, ಆರ್ಷದೀಪ್ ಸಿಂಗ್, ರವೀಂದ್ರ ಜಡೇಜಾ, ವರುಣ್ ಚಕ್ರವರ್ತಿ.ಪಾಕಿಸ್ಥಾನ: ಮೊಹಮ್ಮದ್ ರಿಝಾನ್ (ನಾಯಕ), ಬಾಬರ್ಆಝಂ, ಕಮ್ರಾನ್ ಗುಲಾಮ್, ಸೌದ್ ಶಕೀಲ್, ತಯ್ಯಬ್ ತಾಹಿರ್, ಫಹೀಮ್ ಅಶ್ರಫ್, ಖುಶಿಲ್ ಶಾ, ಸಲ್ಮಾನ್ ಅಲಿ ಅಘಾ, ಉಸ್ಮಾನ್ ಖಾನ್, ಅಬ್ರಾರ್ ಅಹ್ಮದ್, ಹ್ಯಾರಿಸ್ ರೌಫ್‌, ಮೊಹಮ್ಮದ್ ಹಸ್ಟೈನ್, ನಸೀಮ್ ಶಾ, ಶಾಹಿನ್ ಶಾ ಆಫ್ರಿದಿ, ಇಮಾಮ್ ಉಲ್ ಹಕ್.

- Advertisement -

Related news

error: Content is protected !!