Tuesday, July 21, 2026
spot_imgspot_img
spot_imgspot_img

ಎ.1ರಿಂದ ವಿದ್ಯುತ್ ದರ ಏರಿಸಿ ರಾಜ್ಯ ಸರ್ಕಾರ

- Advertisement -
- Advertisement -

ರಾಜ್ಯದ ಜನತೆಗೆ ಬಿಗ್ ಶಾಕ್ ಎದುರಾಗಿದ್ದು, ಹಾಲಿನ ದರ ಏರಿಕೆ ಬೆನ್ನಲ್ಲೇ ವಿದ್ಯುತ್ ದರ ಪ್ರತಿ ಯೂನಿಟ್ ಗೆ 36 ಪೈಸೆ ಹೆಚ್ಚಿಸಿ ‘KERC’ ಆದೇಶ ಹೊರಡಿಸಿದೆ.ಪ್ರತಿ ಯೂನಿಟ್ ಗೆ 36 ಪೈಸೆಯಂತೆ ವಿದ್ಯುತ್ ದರ ಹೆಚ್ಚಳ ಮಾಡಲಾಗಿದೆ. ವಿದ್ಯುತ್ ಪ್ರಸರಣ ಮತ್ತು ವ್ ಎಸ್ಕಾಮ್ ಸಿಬ್ಬಂದಿ ಪಿಂಚಣಿ ಗ್ರ್ಯಾಚುಟಿ ಹಣವನ್ನು ಗ್ರಾಹಕರಿಂದ ವಸೂಲಿಗೆ ಮುಂದಾಗಿರುವ ಕೆಇಆರ್ ಸಿ, ವಿದ್ಯುತ್ ದರ 36 ಪೈಸೆ ಹೆಚ್ಚಿಸಿದೆ. ಏಪ್ರಿಲ್ 1ರಿಂದಲೇ ಕೆಇಆರ್ ಸಿ ಹೊಸ ದರ ಜಾರಿಗೆ ಬರಲಿದೆ.

ಯೂನಿಟ್‍ಗೆ 49 ಪೈಸೆ ಏರಿಕೆ ಮಾಡುವಂತೆ ಡಿಸೆಂಬರ್ ಕೊನೆಯ ವಾರದಲ್ಲಿ ಎಸ್ಕಾಂಗಳು ಕೆಇಆರ್‌ಸಿ ಪ್ರಸ್ತಾವನೆ ಸಲ್ಲಿಸಿದ್ದವು. ಪ್ರಸ್ತಾವನೆಯಂತೆ ಉತ್ಪಾದನೆಯ ಖರ್ಚು-ವೆಚ್ಚ ಮತ್ತು ನಿರ್ವಹಣೆಯ ನಷ್ಟ ಸರಿದೂಗಿಸುವ ನಿಟ್ಟಿನಲ್ಲಿ ದರ ಏರಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಹೀಗಾಗಿ ಇಂದು (ಮಾರ್ಚ್ 27) ಕೆಇಆರ್‌ಸಿ ಅಧಿಕೃತವಾಗಿ ಪ್ರತಿ ಯೂನಿಟ್​ ವಿದ್ಯುತ್​ಗೆ 36 ಪೈಸೆ ಏರಿಕೆ ಮಾಡಿ ಆದೇಶ ಹೊರಡಿಸಿದೆ. ಏಪ್ರಿಲ್ 1 ರಿಂದಲೇ ಹೊಸ ದರ ಜಾರಿಯಾಗಲಿದ್ದು, ರಾಜ್ಯದ ಜನರಿಗೆ ವಿದ್ಯುತ್ ದರದ ಬಿಸಿ ತಟ್ಟಲಿದೆ.

- Advertisement -

Related news

error: Content is protected !!