Tuesday, April 30, 2024
spot_imgspot_img
spot_imgspot_img

ಅಂತರರಾಷ್ಟ್ರೀಯ ವೆಬ್ಸೈಟ್ ಗಳನ್ನು ಹ್ಯಾಕ್ ಮಾಡುತ್ತಿದ್ದ ಕುಖ್ಯಾತ ಹ್ಯಾಕರ್ ಅಂದರ್

- Advertisement -G L Acharya panikkar
- Advertisement -

ಬೆಂಗಳೂರು: ಡಾರ್ಕ್ ವೆಬ್ ಮೂಲಕ ಅಕ್ರಮ ಹಣಗಳಿಸುತ್ತಿದ್ದ ಅಂತಾರಾಷ್ಟ್ರೀಯ ಕುಖ್ಯಾತಿಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಸರ್ಕಾರಿ ವೆಬ್ ಸೈಟ್​ಗಳ ಜೊತೆಗೆ ಅಂತರರಾಷ್ಟ್ರೀಯ ವೆಬ್​​ಸೈಟ್​ಗಳನ್ನೂ ಹ್ಯಾಕ್ ಮಾಡುತ್ತಿದ್ದ ಶ್ರೀಕಿ ಡ್ರಗ್ಸ್ ದಂಧೆಕೋರರಿಗೆ ಸಹಾಯ ಮಾಡುತ್ತಿದ್ದನೆನ್ನಲಾಗಿದೆ. ಈತನ ಬಂಧನ ಆಗಿರುವ ವಿಚಾರವನ್ನು ಬೆಂಗಳೂರಿನ ಪೊಲೀಸ್ ಕಮಿಷನರ್ ಕಮಲ್ ಪಂಥ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಡಾರ್ಕ್ ವೆಬ್ ಮೂಲಕ ಅಂತರರಾಷ್ಟ್ರೀಯ ಡ್ರಗ್ಸ್ ವ್ಯವಹಾರ ನಡೆಸಲು ಈತ ದಾರಿ ಮಾಡಿಕೊಟ್ಟಿದ್ದ. ಆನ್​ಲೈನ್ ಬಿಟ್ ಕಾಯಿನ್ ಮೂಲಕ ಬ್ಯುಸಿನೆಸ್ ಶುರು ಮಾಡಿದ್ದ ಶ್ರೀಕಿ ಮಾದಕ ವ್ಯಸನಿಯೂ ಆಗಿದ್ದ. ಡ್ರಗ್ಸ್ ಕೇಸ್​ನಲ್ಲಿ ಬಂಧಿತನಾಗಿರುವ ಸುನೀಶ್ ಹೆಗ್ಡೆಗೆ ಡಾರ್ಕ್ ವೆಬ್ ಜಾಲವನ್ನು ಪರಿಚಯಿಸಿದ್ದು ಇದೇ ಶ್ರೀಕಿ. 2019ರಲ್ಲಿ ಗೇಮಿಂಗ್ ವೆಬ್​ಸೈಟ್​ಗಳಲ್ಲಿ ನಿಪುಣನಾಗಿದ್ದ ಶ್ರೀಕಿಯನ್ನು ಬಳಸಿಕೊಂಡು ಸುನೀಶ್ ಹೆಗ್ಡೆ ಡಾರ್ಕ್ ವೆಬ್ ಮೂಲಕ ಡ್ರಗ್ಸ್ ದಂಧೆ ಮಾಡುತ್ತಿದ್ದನೆಲ್ಲಾಗಿದೆ. ಈತನನ್ನು ದೇವನಹಳ್ಳಿ ಹಾಗೂ ಗೋವಾದ ಪಂಚತಾರಾ ಹೋಟೆಲ್​ಗಳಲ್ಲಿ ಇರಿಸಿ ಹ್ಯಾಕಿಂಗ್ ಕೆಲಸ ಮಾಡಿಸಲಾಗುತ್ತಿತ್ತು.

ಶ್ರೀಕಿ ಸರ್ಕಾರಿ ವೆಬ್​ಸೈಟ್​ಗಳನ್ನ ಹ್ಯಾಕ್ ಮಾಡುತ್ತಿದ್ದ. ಅಲ್ಲಿ ಟೆಂಡರ್​ಗೆ ಸಂಬಂಧಪಟ್ಟ ಮಾಹಿತಿಯನ್ನು ಹ್ಯಾಕ್ ಮಾಡಿ ಪಡೆಯುತ್ತಿದ್ದ. ಅಂತರರಾಷ್ಟ್ರೀಯ ವೆಬ್ ಸೈಟ್​ಗಳನ್ನೂ ಹ್ಯಾಕ್ ಮಾಡಿ ಅಕ್ರಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡುತ್ತಿದ್ದ. ಈ ಹಿಂದೆ ಯುಬಿ ಸಿಟಿಯ ಸ್ಕೈ ಬಾರ್​ನಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲೂ ಈತನಿದ್ದನೆನ್ನಲಾಗಿದೆ. ವಿದ್ವತ್ ಮೇಲೆ ಯುಬಿ ಸಿಟಿಯಲ್ಲಿ ಹಲ್ಲೆ ಎಸಗಿದ್ದ ನಲಪಾಡ್ ಮತ್ತವನ ತಂಡದಲ್ಲಿ ಶ್ರೀಕಿಯೂ ಇದ್ದ. ಆ ಪ್ರಕರಣದಲ್ಲಿ ಈತ ಮೂರನೇ ಆರೋಪಿ. ಹಲವು ವರ್ಷಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದ ಈತ ಈಗ ಸಿಕ್ಕಿಬಿದ್ದಿದ್ದಾನೆ.

ಜಯನಗರದ ನಿವಾಸಿಯಾಗಿರುವ ಆರೋಪಿ ಶ್ರೀಕೃಷ್ಣ ಬೆಂಗಳೂರಿನಲ್ಲಿ ಪಿಯುಸಿವರೆಗೂ ಓದಿ 2014ರಲ್ಲಿ ನೆದರ್​ಲ್ಯಾಂಡ್​ನ ಆಮ್​ಸ್ಟರ್​ಡಾಮ್​ನಲ್ಲಿ ಕಂಪ್ಯೂಟರ್ ಸೈನ್ಸ್ ಪದವಿ ಪಡೆದು ಆ ಬಳಿಕ ಹ್ಯಾಕಿಂಗ್ ಕೃತ್ಯಗಳಿಗೆ ಇಳಿದಿದ್ದ. ಈತ ಅನೇಕ ಆನ್​ಲೈನ್ ಗೇಮಿಂಗ್ ಆ್ಯಪ್​ಗಳು, ಸರ್ಕಾರಿ ವೆಬ್​ಸೈಟ್​ಗಳನ್ನ ಹ್ಯಾಕ್ ಮಾಡಿರುವುದು ತಿಳಿದುಬಂದಿದೆ. ಸಿಸಿಬಿ ಪೊಲೀಸರು ಇದೀಗ ಈತನನ್ನು ಕೋರ್ಟ್​ಗೆ ಹಾಜರುಪಡಿಸಿ ಕಸ್ಟಡಿಗೆ ಪಡೆದುಕೊಂಡಿದ್ದಾರೆ.

- Advertisement -

Related news

error: Content is protected !!