Saturday, June 6, 2026
spot_imgspot_img
spot_imgspot_img

ಕುಂದಾಪುರ: ವ್ಯಕ್ತಿ ಮೇಲೆ ಚಿರತೆ ದಾಳಿ – ಗಾಯಗೊಂಡು ಆಸ್ಪತ್ರೆಗೆ ದಾಖಲು

- Advertisement -
- Advertisement -

ಚಿರತೆಯೊಂದು ದಾಳಿ ನಡೆಸಿ ವ್ಯಕ್ತಿಯನ್ನು ಗಂಭೀರ ಗಾಯಗೊಳಿಸಿರುವ ಘಟನೆ ಕೊಲ್ಲೂರು ಸಮೀಪದ ನಾಗೋಡಿ (ನಿಟ್ಟೂರು) ಘಾಟಿಯ ಕಂಚಿಕೆರೆ ಎಂಬಲ್ಲಿ ನಡೆದಿದೆ.

ಬುಧವಾರ ತಡರಾತ್ರಿ 2 ಗಂಟೆ ಸುಮಾರಿಗೆ ಗಾಢ ನಿದ್ರೆಯಲ್ಲಿದ್ದ ಮನೆ ಮಂದಿ ಸಾಕು ನಾಯಿ ಕೂಗಾಟವನ್ನು ಕೇಳಿ ಎಚ್ಚೆತ್ತಿದ್ದಾರೆ. ಮನೆ ಯಜಮಾನ ಗಣೇಶ್ (48) ಬಾಗಿಲು ತೆರೆದು ಹೊರ ಬಂದಾಗ ಅವರ ಮೇಲೆ ಚಿರತೆ ಎರಗಿದೆ. ಅವರು ಗಂಭೀರ ಗಾಯಗೊಂಡಿದ್ದಾರೆ. ಮನೆಯವರ ಕೂಗಾಟಕ್ಕೆ ಅಕ್ಕಪಕ್ಕದವರು ಓಡಿ ಬಂದಾಗ ಚಿರತೆ ಅಲ್ಲಿಂದ ಕಾಲ್ಕಿತ್ತಿದೆ.

ಗುರುವಾರ ಬೆಳಗ್ಗೆ ಅವರನ್ನು ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಕಾಂಬಿಕಾ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಕಂಚಿಕೆರೆ ಪ್ರದೇಶದಲ್ಲಿ ಚಿರತೆ ದಾಳಿ ಕಳವಳ ಮೂಡಿಸಿದೆ. ನಾಗೋಡಿ ಚೆಕ್‌ಪೋಸ್ಟ್‌ನಿಂದ ಅಂದಾಜು 4 ಕಿಮೀ ದೂರದಲ್ಲಿ ಈ ಊರಿದ್ದು, ಸಿಗಂಧೂರಿಗೆ ಹೋಗುವ ಮಾರ್ಗ ಬದಿಯಲ್ಲಿದೆ. ತಡರಾತ್ರಿ 2 ಗಂಟೆ ವೇಳೆಗೆ ನಾಯಿ ಕೂಗಿಕೊಳ್ಳುವುದನ್ನು ಕೇಳಿ ಗಣೇಶ್ ಬಾಗಿಲು ತೆಗೆದು ಹೊರಬಂದಾಗ ಏಕಾಏಕಿ ಅವರ ಮೇಲೆ ಚಿರತೆ ಎರಗಿದೆ.

- Advertisement -

Related news

error: Content is protected !!