Tuesday, July 1, 2025
spot_imgspot_img
spot_imgspot_img

ಕಡೇಶಿವಾಲಯ: (ಏ.1-22) ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವ

- Advertisement -
- Advertisement -

ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರಾ ಮಹೋತ್ಸವವು ಏ.1-4-2025ನೇ ಮಂಗಳವಾರದಿಂದ 22-4-2025ನೇ ಮಂಗಳವಾರದವರೆಗೆ ವಿವಿಧ ವೈಧಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.

ದಿನಾಂಕ: 1-4-2025ನೇ ಮಂಗಳವಾರ ಬೆಳಿಗ್ಗೆ 10:00ಕ್ಕೆ ಗೊನೆ ಮುಹೂರ್ತ ನಡೆಯಿತು.

ದಿನಾಂಕ: 9-4-2025ನೇ ಬುಧವಾರ ಮಧ್ಯಾಹ್ನ ಮಹಾಪೂಜೆ ನಂತರ ಧ್ವಜಾರೋಹಣ ನಡೆದು ರಾತ್ರಿ ಪ್ರತಿಷ್ಠಾ ಮಹೋತ್ಸವ ನಡೆಯಲಿದೆ.

ದಿನಾಂಕ: 10-04-2025ರಿಂದ 12-4-2025ರ ವರೆಗೆ ನಿತ್ಯಬಲಿ, ಮಹಾಪೂಜೆ ನಡೆಯಲಿದೆ.

ದಿನಾಂಕ: 13-4-2025ನೇ ಆದಿತ್ಯವಾರ ಸಂಕ್ರಮಣ, ಮಧ್ಯಾಹ್ನ ಮಹಾಪೂಜೆ, ರಾತ್ರಿ ಉತ್ಸವ ನಡೆಯಲಿದೆ.

ದಿನಾಂಕ: 14-4-2025ನೇ ಸೋಮವಾರ ಬೆಳಗ್ಗೆ 7:00ರಿಂದ ಉತ್ಸವ, ಮಧ್ಯಾಹ್ನ ಮಹಾಪೂಜೆ ನಡೆದು ರಾತ್ರಿ 6:00ರಿಂದ ಉತ್ಸವ ನಡೆಯಲಿದೆ.

ದಿನಾಂಕ: 15-4-2025ನೇ ಮಂಗಳವಾರ ಬೆಳಗ್ಗೆ 7:00ರಿಂದ ಉತ್ಸವ, ಮಧ್ಯಾಹ್ನ ಮಹಾಪೂಜೆ, ನಡೆದು ರಾತ್ರಿ 6:00ರಿಂದ ಉತ್ಸವ ನಡೆಯಲಿದೆ.

ದಿನಾಂಕ: 16-4-2025ನೇ ಬುಧವಾರ ಬೆಳಗ್ಗೆ 8:00ರಿಂದ ಉತ್ಸವ ದರ್ಶನ ಬಲಿ, ಬಟ್ಟಲು ಕಾಣಿಕೆ, ಮಧ್ಯಾಹ್ನ ಮಹಾಪೂಜೆ ನಡೆದು ರಾತ್ರಿ 6:00ರಿಂದ ಉತ್ಸವ, ಬೀದಿ ಸವಾರಿ, ಕಟ್ಟೆಪೂಜೆ ನಡೆಯಲಿದೆ. ಸಂಜೆ 8:00 ರಿಂದ ತುಳುವೆರೆ ಉಡಲ್ ಜೋಡುಕಲ್ಲು ಕಲಾವಿದರಿಂದ ಕಲಾ ಸವ್ಯಸಾಚಿ ಪ್ರಶಾಂತ್ ಸಿ.ಕೆ. ಮತ್ತು ರಂಗ ಕೇಸರಿ ರಮೇಶ್ ರೈ ಕುಕ್ಕುವಳ್ಳಿ ಅಭಿನಯದೊಂದಿಗೆ “ತನಿಯಜ್ಜೆ” ಎಂಬ ವಿನೂತನ ಶೈಲಿಯ ನಾಟಕ ನಡೆಯಲಿದೆ.

ದಿನಾಂಕ: 17-4-2025ನೇ ಗುರುವಾರ ಮಧ್ಯಾಹ್ನ ಮಹಾಪೂಜೆ ನಡೆದು ರಾತ್ರಿ 6:00ರಿಂದ ಮಹಾಪೂಜೆ ಉತ್ಸವ, ಕಟ್ಟೆಪೂಜೆ ನಡೆಯಲಿದೆ. ರಾತ್ರಿ 8:00 ರಿಂದ ಗಯಾಪಂ ಕಲಾವಿದೆರ್‌ ಉಬಾರ್‌ ಅಭಿನಯಿಸುವ ” ನಾಗ ಮಾಣಿಕ್ಯ” ಎಂಬ ವಿಭಿನ್ನ ರಂಗವಿನ್ಯಾಸ, ರೋಚಕ ಕಥಾ ಸಂಗಮ, ರಂಗ ಸಂಚಲನ ಮೂಡಿಸುವ ಚಾರಿತ್ರಿಕ ತುಳು/ ಕನ್ನಡ ನಾಟಕ ನಡೆಯಲಿದೆ.

ದಿನಾಂಕ: 18-4-2025ನೇ ಶುಕ್ರವಾರ ಮಧ್ಯಾಹ್ನ ಮಹಾಪೂಜೆ ಬಳಿಕ ರಾತ್ರಿ ಚಂದ್ರಮಂಡಲ ಉತ್ಸವ, ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 7:00 ರಿಂದ “ಸಂಗೀತ ರಸಮಂಜರಿ” ನಡೆಯಲಿದೆ.

ದಿನಾಂಕ: 19-4-2025ನೇ ಶನಿವಾರ ಮಧ್ಯಾಹ್ನ ಪಲ್ಲಪೂಜೆ, ಮಹಾಪೂಜೆ ನಡೆದು ರಾತ್ರಿ 8:00ಕ್ಕೆ ಮಹಾರಥೋತ್ಸವ, ಸುಡುಮದ್ದು ಪ್ರದರ್ಶನ, ಮಹಾ ಅನ್ನಸಂತರ್ಪಣೆ ಮಹಾಪೂಜೆ, ಕವಾಟ ಬಂಧನ ನಡೆಯಲಿದೆ. ರಾತ್ರಿ ರಥೋತ್ಸವವದ ಬಳಿಕ ಯುವಶಕ್ತಿ ಕಡೇಶಿವಾಲಯ (ರಿ.) ಇವರ 14ನೇ ವರ್ಷದ ಕಲಾ ಕಾಣಿಕೆ ಶ್ರೀ ಕ್ಷೇತ್ರ ಕಡೇಶಿವಾಲಯ ಮಹಾರಥೋತ್ಸವ ದಂದು ಅದ್ಧೂರಿ ರಂಗ ವಿನ್ಯಾಸದ ದಿ. ಅಲೆವೂರು ಶೇಖರ ಪೂಜಾರಿ ಇವರ ಸವಿನೆನಪಿನೊಂದಿಗೆ ಅಭಿನಯ ಕಲಾವಿದರು ಉಡುಪಿ ಅಭಿನಯಿಸುವ ಸಾಮಾಜಿಕ ನಾಟಕದ ಇತಿಹಾಸದಲ್ಲೇ ಪ್ರಪ್ರಥಮ ಬಾರಿಗೆ ಅದ್ಧೂರಿ ರಂಗ ವಿನ್ಯಾಸದ “ಶಾಂಭವಿ” ಕೂತೂಹಲಭರಿತ ತುಳು ಹಾಸ್ಯಮಯ ನಾಟಕ ನಡೆಯಲಿದೆ.

ದಿನಾಂಕ: 20-4-2025ನೇ ಆದಿತ್ಯವಾರ ಬೆಳಿಗ್ಗೆ 7:35ಕ್ಕೆ ಕವಾಟೋದ್ಘಾಟನೆ, ತುಲಾಭಾರ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ನಡೆದು ಸಂಜೆ 6:00ರಿಂದ ಉತ್ಸವ, ಕಟ್ಟೆಪೂಜೆ, ಅನ್ನಸಂತರ್ಪಣೆ ಅವಭೃತ ಸ್ನಾನ, ಧ್ವಜಾವರೋಹಣ ನಡೆಯಲಿದೆ. ರಾತ್ರಿ 9:00 ರಿಂದ ಶ್ರೀ ಪ್ರಾಪ್ತಿ ಯಕ್ಷಪ್ರತಿಷ್ಠಾನ ಹಾಗೂ ಜಿಲ್ಲೆಯ ಹೆಸರಾಂತ ಕಲಾವಿದರ ಕೂಡುವಿಕೆಯಿಂದ ಪ್ರಶಾಂತ್‌. ಸಿಕೆ ವಿರಚಿತ ಈ “ಬೂಡುದ ಗುಳಿಗ” ಎಂಬ ಯಕ್ಷಗಾನ ನಡೆಯಲಿದೆ.

ದಿನಾಂಕ: 21-4-2025ನೇ ಸೋಮವಾರ ರಾತ್ರಿ ಮಹಾಪೂಜೆ, ಶ್ರೀ ನಾರಾಳ್ತಾಯ ಮತ್ತು ಇತರ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ ನಡೆಯಲಿದೆ.

ದಿನಾಂಕ: 22-4-2025ನೇ ಮಂಗಳವಾರ ಮಧ್ಯಾಹ್ನ ಸಂಪ್ರೋಕ್ಷಣೆ, ಮಹಾಪೂಜೆ ನಡೆದು ರಾತ್ರಿ 8:00ಕ್ಕೆ ಮಂಗಲ, ಮಂತ್ರಾಕ್ಷತೆ ನಡೆಯಲಿದೆ.

- Advertisement -

Related news

error: Content is protected !!