Tuesday, April 23, 2024
spot_imgspot_img
spot_imgspot_img

ಮರಣವು ಮನುಷ್ಯನ ಕೊನೆ ಅಲ್ಲ ಆರಂಭ; ಝೈನುಲ್ ಉಲಮಾ ಮಾಣಿ ಉಸ್ತಾದ್

- Advertisement -G L Acharya panikkar
- Advertisement -

ಮಾಣಿ: ಆಳಾದರೂ ಅರಸನಾದರೂ ಮರಣದಿಂದ ವಿನಾಯಿತಿ ಇರುವುದಿಲ್ಲ ಮರಣವು ಮನುಷ್ಯನ ಕೊನೆ ಅಲ್ಲ, ಅದು ಆರಂಭವಾಗಿದೆ ಮರಣದ ಮೊದಲಿನ ಜೀವನ ಮಾತ್ರ ಕ್ಷಣಿಕವಾಗಿದ್ದು ಬಹಳ ಎಚ್ಚರಿಕೆಯಿಂದ ಜೀವಿಸಿ ಮರಣದ ನಂತರದ ಜೀವನಕ್ಕೆ ಬೇಕಾದ ಸತ್ಕರ್ಮದೊಂದಿಗಿನ ಸಿದ್ಧತೆಯು ಬಹಳ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್ ಹೇಳಿದರು.

ಅವರು ರಹ್ಮಾನಿಯಾ ಜುಮಾ ಮಸೀದಿ ಮಾಣಿ ಇದರ ಈದ್ ಪ್ರಭಾಷಣ ಮಾಡಿದರು. ಖತೀಬ್ ನಝೀರ್ ಅಹ್ಮದ್ ಅಮ್ಜದಿ ಸರಳಿಕಟ್ಟೆ ಈದ್ ನಮಾಝ್‌ಗೆ ನೇತೃತ್ವ ನೀಡಿ ಖುತುಬಾ ನಡೆಸಿ ತ್ಯಾಗ ಬಲಿದಾನದ ಸ್ಮರಣೆಯ ಈದ್ ಉಲ್ ಅಳ್‌ಹಾ ಹಬ್ಬದ ಶುಭಾಶಯ ಕೋರಿದರು.

- Advertisement -

Related news

error: Content is protected !!