- Advertisement -
- Advertisement -


ನಿಪಾ ಜ್ವರ ಲಕ್ಷಣಗಳೊಂದಿಗೆ ಕೋಝಿಕ್ಕೋಡ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಚಿಕಿತ್ಸೆಗೆ ದಾಖಲಾಗಿದ್ದಾರೆ. ಮಲಪ್ಪುರಂ ನಿವಾಸಿಯಾದ 40ರ ಮಹಿಳೆ ಚಿಕಿತ್ಸೆಗೆ ದಾಖಲಾಗಿದ್ದು, ಇವರನ್ನು ಪ್ರತ್ಯೇಕ ವಾರ್ಡಿಗೆ ವರ್ಗಾಯಿಸಲಾಗಿದೆ. ಮಹಿಳೆ ನಿಪಾ ಲಕ್ಷಣಗಳೊಂದಿಗೆ ಗಂಭೀರ ಸ್ಥಿತಿಯಲ್ಲಿರುವುದಾಗಿ ವರದಿಯಾಗಿದೆ.
ಇವರ ಸ್ರವ ಪರಿಶೋಧನೆಗಾಗಿ ಲ್ಯಾಬ್ ಗೆ ಕಳುಹಿಸಲಾಗಿದ್ದು, ಶನಿವಾರ ಫಲಿತಾಂಶ ದೊರೆಯಲಿದೆ.ಒಂದು ವಾರದ ಹಿಂದೆಯೇ ಇವರು ಅಸೌಖ್ಯ ಹೊಂದಿದ್ದರು. ಬಳಿಕ ಮಿದುಳು ಜ್ವರ ಕಾಣಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ಶುಕ್ರವಾರ ಇವರನ್ನು ಕಲ್ಲಿಕೋಟೆ ಮೆಡಿಕಲ್ ಕಾಲೇಜಿಗೆ ದಾಖಲಿಸಲಾಯಿತು.
- Advertisement -