- Advertisement -
- Advertisement -



ಇನ್ಮುಂದೆ 10 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ಬ್ಯಾಂಕ್ ಖಾತೆ ತೆರೆಯಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್(ಆರ್ಬಿಐ) ತಿಳಿಸಿದೆ.10 ವರ್ಷ ಹಾಗೂ ಅದಕ್ಕಿಂತ ಮೇಲ್ಪಟ್ಟ ಅಪ್ರಾಪ್ತರು ಆರ್ಬಿಐನ 1976ರ ಸುತ್ತೋಲೆಗೆ ಅನುಗುಣವಾಗಿ ತಮ್ಮ ಪೋಷಕರ ಮೂಲಕ ಉಳಿತಾಯ ಮತ್ತು ಅವಧಿ ಠೇವಣಿ ಖಾತೆಗಳನ್ನು ತೆರೆಯಬಹುದು ಎಂದು ಏ.21 ರಂದು ಹೊಸ ನಿರ್ದೇಶನ ಹೊರಡಿಸಿದೆ.
ಇದೇ ಜುಲೈ 1 ರಿಂದ ಈ ಹೊಸ ಆದೇಶ ಜಾರಿಗೆ ಬರಲಿದೆ. ಎಲ್ಲಾ ಬ್ಯಾಂಕ್ಗಳು ಈ ಮಾರ್ಗಸೂಚಿಗಳನ್ನು ಅನುಸರಿಸಬೇಕು ಎಂದು ತಿಳಿಸಿದೆ.ಈ ಹೊಸ ನಿರ್ದೇಶನದ ಅಡಿಯಲ್ಲಿ ಅಪ್ರಾಪ್ತರು ತಮ್ಮ ಪೋಷಕರ ನೆರವಿಲ್ಲದೆ ಸ್ವತಂತ್ರವಾಗಿ ತಮ್ಮ ಖಾತೆಗಳನ್ನು ನಿರ್ವಹಿಸಬಹುದು. 18 ವಯಸ್ಸಿನ ನಂತರ ತಮ್ಮ ಸಹಿ ಮಾದರಿ ಹಾಗೂ ಇನ್ನಿತರ ದಾಖಲೆಗಳನ್ನು ನವೀಕರಿಸಬೇಕು
- Advertisement -