Friday, June 26, 2026
spot_imgspot_img
spot_imgspot_img

ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಗಣನೀಯವಾಗಿ ಕಡಿತಕ್ಕೆ ಕೇಂದ್ರ ನಿರ್ಧಾರ!

- Advertisement -
- Advertisement -

ನವದೆಹಲಿ: ಸೌದಿ ಅರೇಬಿಯಾದಿಂದ ಕಚ್ಚಾ ತೈಲ ಆಮದು ಪ್ರಮಾಣವನ್ನು ಗಣನೀಯವಾಗಿ ತಗ್ಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.

ಕಚ್ಚಾ ತೈಲವನ್ನು ಅಮೆರಿಕದಿಂದ ಖರೀದಿಸಲು ಕೇಂದ್ರ ಸರ್ಕಾರ ಉದ್ದೇಶಿಸಿದೆ. ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸಬೇಕು ಎಂಬ ಮನವಿಗೆ ತೈಲ ಉತ್ಪಾದಕ ರಾಷ್ಟ್ರಗಳ ಒಕ್ಕೂಟ, ಒಪೆಕ್‌ ಪುರಸ್ಕರಿಸದೆ ಇದ್ದುದನ್ನು ಖಂಡಿಸಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ.

ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌, ಭಾರತ್‌ ಪೆಟ್ರೋಲಿಯಂ, ಹಿಂದುಸ್ತಾನ್‌ ಪೆಟ್ರೋಲಿಯಂ ಕಾರ್ಪೊರೇಷನ್‌, ಮಂಗಳೂರು ತೈಲ ಶುದ್ಧೀಕರಣಾಗಾರ ಮತ್ತು ಪೆಟ್ರೋಕೆಮಿಕಲ್ಸ್‌ ಜತೆಯಾಗಿ 10.8 ಮಿಲಿಯನ್‌ ಬ್ಯಾರಲ್‌ ಕಚ್ಚಾತೈಲವನ್ನು ಮಧ್ಯಪ್ರಾಚ್ಯ ಮತ್ತು ಕೊಲ್ಲಿ ರಾಷ್ಟ್ರಗಳಿಂದ ಖರೀದಿಸಿದ ಬಳಿಕ ಮೇ ಮಧ್ಯಭಾಗದಿಂದ ನಿರ್ಧಾರ ಜಾರಿಯಾಗಲಿದೆ.

ಸದ್ಯಸೌದಿ ಅರೇಬಿಯಾದಿಂದಲೇ 14.7- 14.8 ಮಿಲಿಯನ್ ಬ್ಯಾರಲ್‌ ಕಚ್ಚಾ ತೈಲವನ್ನು ಭಾರತ ಆಮದು ಮಾಡಿಕೊಳ್ಳುತ್ತಿದೆ.

- Advertisement -

Related news

error: Content is protected !!