





ಆಂಧ್ರಪ್ರದೇಶದಿಂದ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆಂದು ಬಂದವರ ಚಿನ್ನಾಭರಣ ಕಳವಾಗಿದ್ದು ಇದೀಗ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದೂರುದಾರರಾದ ಆಂದ್ರಪ್ರದೇಶದ ನೆಲ್ಲೂರು ಜಿಲ್ಲೆಯ ಸಾಯಿ ಹೃದಯ ಟೆಂಪಲ್ ಗೋಮತಿ ನಗರದಲ್ಲಿನ ಶ್ರೀ ನಗರ ಕಾಲೋನಿಯ ನಿವಾಸಿ ಜೆ ಲತಾ (47) ಎಂಬವರು ದಿನಾಂಕ: 02-05-2025ರಂದು ಅಂದ್ರಪ್ರದೇಶದ ನೆಲ್ಲೂರಿನಿಂದ ಒಂದು ಬಾಡಿಗೆ ಇನ್ನೋವಾ ಕಾರಿನಲ್ಲಿ ಹೊರಟು ದಿನಾಂಕ 03-05-2025 ರಂದು ಸಂಜೆ 05-00 ಘಂಟೆಗೆ ಬೆಳ್ತಂಗಡಿ ತಾಲೂಕು ಧರ್ಮಸ್ಥಳಕ್ಕೆ ತಲುಪಿರುತ್ತಾರೆ. ದೇವರ ದರ್ಶನಕ್ಕೆ ಹೋಗುವ ಮೊದಲು ಕಾರ್ಯಕ್ರಮಕ್ಕೆಂದು ಜೊತೆಯಲ್ಲಿ ತಂದಿದ್ದ ಚಿನ್ನಭರಣಗಳಾದ ಬ್ರಾಸ್ ಲೈಟ್, ಚಿನ್ನದ ಚೈನ್, ನೆಕ್ಲೇಸ್ ನ್ನು ವ್ಯಾನಿಟಿ ಬ್ಯಾಗ್ ನ ಒಳಗಡೆ ಪ್ಲಾಸ್ಟಿಕ್ ಡಬ್ಬದಲ್ಲಿ ಹಾಕಿ ಬ್ಯಾಗ್ ನಲ್ಲಿ ಇಟ್ಟುಕೊಂಡಿದ್ದರು. ದೇವರ ದರ್ಶನವನ್ನು ಮುಗಿಸಿ ಹೊರಡುವ ಸಮಯದಲ್ಲಿ ಬ್ಯಾಗನ್ನು ನೋಡಿದಾಗ ವ್ಯಾನಿಟಿ ಬ್ಯಾಗ್ ತೆರೆದಿತ್ತು. ಬ್ಯಾಗ್ ನ ಒಳಗಡೆ ನೋಡಿದಾಗ ಪ್ಲಾಸ್ಟಿಕ್ ಬಾಕ್ಸ್ನಲ್ಲಿ ಇಟ್ಟಿದ್ದ 97 ಗ್ರಾಮ್ ತೂಕದ ಚಿನ್ನಾಭರಣಗಳು ಕಳವಾಗಿದ್ದು, ಒಟ್ಟು ಮೌಲ್ಯ ರೂ 6,79,000/- ಆಗಿರುತ್ತದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ ಕ್ರ 17/2025 ಕಲಂ: 303(2) ಬಿಎನ್ ಎಸ್ 2023ಯಂತೆ ಪ್ರಕರಣ ದಾಖಲಾಗಿರುತ್ತದೆ.








