Tuesday, June 30, 2026
spot_imgspot_img
spot_imgspot_img

ಜುಲೈ 1 ರಿಂದ ಕಮರ್ಶಿಯಲ್, ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆ

- Advertisement -
- Advertisement -

ನವದೆಹಲಿ: ಜುಲೈ 1 ರಿಂದ ಕಮರ್ಶಿಯಲ್ ಹಾಗೂ ಇಂಡಸ್ಟ್ರಿಯಲ್ ಗ್ಯಾಸ್ ಸಿಲಿಂಡರ್ ದರ ಏರಿಕೆಗೆ ತೈಲ ಕಂಪನಿಗಳು ನಿರ್ಧರಿಸಿರುವುದಾಗಿ ವರದಿಯಾಗಿದೆ.

ಕಮರ್ಶಿಯಲ್ ಸಿಲಿಂಡರ್ (19 ಕೆಜಿ, 14.2 ಕೆಜಿ) 30 ರೂ. ದರ ಏರಿಕೆಗೆ ನಿರ್ಧಾರಿಸಲಾಗಿದೆ. ಇಂಡಸ್ಟ್ರಿಯಲ್ ಸಿಲಿಂಡರ್ (40ಕೆಜಿ) 1,300 ರೂ. ದರ ಏರಿಕೆಗೆ ನಿರ್ಧಾರಿಸಲಾಗಿದೆ. ಈಗಾಗಲೇ ಪೆಟ್ರೋಲ್, ಡೀಸೆಲ್, ಸಿಎನ್‌ಜಿ ದರ ಏರಿಕೆಯಿಂದ ಜನರ ಜೇಬಿಗೆ ಕತ್ತರಿ ಬಿದ್ದಿದ್ದು, ಇದೀಗ ವಾಣಿಜ್ಯ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಶಾಕ್ ನೀಡಿದೆ.

ಜೂ.1 ರಂದು ಸಹ ಸಿಲಿಂಡರ್ ದರ ಏರಿಕೆಯಾಗಿತ್ತು. ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಬಳಕೆ ಸಿಲಿಂಡರ್ ದರ 42 ರೂ. ಹೆಚ್ಚಾಗಿತ್ತು, ಪ್ರತಿ ಸಿಲಿಂಡರ್ ಬೆಲೆ 3,113.5 ರೂ.ಗಳಿಗೆ ತಲುಪಿದ್ದರೆ, ಬೆಂಗಳೂರಿನಲ್ಲಿ 46 ರೂ.ಗಳಷ್ಟು ಹೆಚ್ಚಳವಾಗಿ ಪ್ರತಿ ಸಿಲಿಂಡರ್ ದರ 3,198 ರೂ.ಗಳಿಗೆ ಹೆಚ್ಚಳವಾಗಿತ್ತು.

- Advertisement -

Related news

error: Content is protected !!