Wednesday, August 5, 2026
spot_imgspot_img
spot_imgspot_img

ನೆಟ್ಟಾರು :ಅಕ್ಷಯ ಯುವಕ ಮಂಡಲದ ವತಿಯಿಂದ ಸ್ವಯಂ ಪ್ರೇರಿತ ರಕ್ತದಾನ ಶಿಬಿರ

- Advertisement -
- Advertisement -

ಬೆಳ್ಳಿ ಹಬ್ಬದ ಸಂಭ್ರಮದಲ್ಲಿರುವ ನೆಟ್ಟಾರಿನ ಯುವಕ ಮಂಡಲ ವತಿಯಿಂದ ಮೇ 31ರಂದು ರಕ್ತದಾನ ಶಿಬಿರ ನಡೆಯಿತು. ಶಿಬಿರದ ಉದ್ಘಾಟನೆಯನ್ನು ಬೆಳ್ಳಾರೆ ಸಿ ಇ ಬ್ಯಾಂಕ್ ಇದರ ಅಧ್ಯಕ್ಷರಾದ ಶ್ರೀ ಆರ್ ಕೆ ಭಟ್ ಕುರುಂಬುಡೇಲು ನೆರವೇರಿಸಿ ಮಾತನಾಡಿದರು ಯುವಕ ಮಂಡಲವು ಹತ್ತು ಹಲವು ಸಮಾಜಮುಖಿ ಕೆಲಸ ನಿರಂತರವಾಗಿ ಮಾಡಿಕೊಂಡು ಬರುತ್ತಿದೆ. ರಕ್ತದಾನದಂತಹ ಶಿಬಿರವು ಆಯೋಜನೆ ಮಾಡಬೇಕು ಎಂದು ಹೇಳಿದಾಗ ರಕ್ತದ ಪೂರೈಕೆಯ ಅವಶ್ಯಕತೆ ಮನಗಂಡು ತಕ್ಷಣಕ್ಕೆ ಈ ಕಾರ್ಯಕ್ರಮವನ್ನು ಒಪ್ಪಿಕೊಳ್ಳಿ ನಾವು ಹೇಳಿದರು. ಮನುಷ್ಯ ಮನುಷ್ಯರ ಸಂಬಂಧಗಳು ಆ ಮೂಲಕ ಗಟ್ಟಿಯಾಗುತ್ತವೆ. ರಕ್ತ ನೀಡಿದ ವ್ಯಕ್ತಿಯನ್ನು ರಕ್ತವರು ಯಾವಾಗಲು ನೆನಪಿಸಿಕೊಳ್ಳುತ್ತಾರೆ. ಆದ್ದರಿಂದ ಈ ಅರ್ಥಪೂರ್ಣವಾಗಿದೆ ಎಂದು ಹೇಳಿ ಶುಭ ಹಾರೈಸಿದರು. ಅತಿಥಿಗಳಾದ ಬೆಳ್ಳಾರೆ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಈರಯ್ಯ ಡಿ ಮಾತನಾಡಿ ಇಂತಹ ಅರ್ಥಪೂರ್ಣ ಕಾರ್ಯಕ್ರಮ ಆಯೋಜನೆ ಮಾಡಿರುವುದು ಸಂತಸದ ವಿಚಾರ. ರಕ್ತದಾನ ಶ್ರೇಷ್ಠದಾನ ಇದರ ಬಗ್ಗೆ ಜನರು ಜಾಗೃತರಾಗಬೇಕು ನಿಮಗೆ ಅಭಿನಂದನೆಗಳು. ನೆಟ್ಟಾರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರಾದ ವಸಂತ ನೆಟ್ಟರು ಮಾತನಾಡಿ ಬೆಳ್ಳಿ ಹಬ್ಬ ಸಂಭ್ರಮದಲ್ಲಿರುವ ಯುವಕ ಮಂಡಲವು ಇಂತಹ ಕಾರ್ಯಕ್ರಮ ಮಾಡುತ್ತಿರುವುದು ಶ್ಲಾಘನೀಯ ಶುಭವಾಗಲಿ ಎಂದರು.

ಜಿಲ್ಲಾ ವೆನ್ಲಾಕ್ ಆಸ್ಪತ್ರೆ ರಕ್ತನಿಧಿ ವಿಭಾಗ ಆಂಟನಿ ಡಿಸೋಜಾ ಮಾತನಾಡಿ ಆರೋಗ್ಯವಂತ ಶರೀರ ಹೊಂದಿರುವ 18ರ ಮೇಲ್ಪಟ್ಟವರು ರಕ್ತದಾನ ಜನರಲ್ಲಿ ಅದರ ಬಗ್ಗೆ ಜಾಗೃತಿಯಾಗಲಿ. ಈ ಭಾಗದಲ್ಲಿ ಹಲವು ಬಾರಿ ರಕ್ತದಾನ ಶಿಬಿರಗಳು ಆಗಿದೆ. ಯುವ ಸಮುದಾಯ ಇದರ ಬಗ್ಗೆ ಹೆಚ್ಚು ಕ್ರಿಯಾಶೀಲರಾಗಿರುವುದು ಹೆಚ್ಚು ಕಡೆ ನಡೆಯುತ್ತಿದೆ. ಕಾರ್ಯಕ್ರಮ ಯಶಸ್ವಿಯಾಗಲಿ ಎಂದರು. ಶಾಲಾ ಮುಖ್ಯ ಗುರುಗಳಾದ ಶ್ರೀಮತಿ ನಳಿನಾಕ್ಷಿ ಮಾತನಾಡಿ ಯುವಕ ಮಂಡಲದವರು ಸಮಾಜಮುಖಿ ಕಾರ್ಯದ ಜೊತೆಗೆ ಶಾಲಾ ಚಟುವಟಿಕೆ ಶೈಕ್ಷಣಿಕ ಗೆ ಪ್ರತೀ ವರ್ಷ ಪ್ರೋತ್ಸಾಹ ನೀಡುತ್ತಿದ್ದಾರೆ. ಶಾಲೆಯ ಅಭಿವೃದ್ಧಿಗೆ ಇವರ ಕೊಡುಗೆ ಅಪಾರ. ಇದರ ಯುವಕರ ಕಾರ್ಯ ಅತ್ಯುತ್ತಮವಾದುದು ಕಾರ್ಯಕ್ರಮ ಶುಭವಾಗಲಿ ಎಂದರು.ವೇದಿಕೆಯಲ್ಲಿ ಶೆಣೈ ಸ್ವೀಟ್ಸ್ ಮಾಲಕರಾದ ಸುದರ್ಶನ್ ಶೆಣೈ, ಅಕ್ಷತಾ ಮಹಿಳಾ ಮಂಡಲ ಸ್ಥಾಪಕ ಅಧ್ಯಕ್ಷರಾದ ಗೀತಾ ಗೋಕುಲದಾಸ್, ಯುವಕ ಮಂಡಲ ಸ್ಥಾಪಕಾಧ್ಯಕ್ಷರಾದ ದೇವದಾಸ್ ನೆಟ್ಟರು. ಯುವಕ ಮಂಡಲದ ಪ್ರವೀಣ್ ಚಾವಡಿ ಬಾಗಿಲು ಸ್ವಾಗತಿಸಿ ದರು. ಅಕ್ಷಯ ಯುವಕ ಅಧ್ಯಕ್ಷ ಭಾಸ್ಕರ್ ನೆಟ್ಟರು ಧನ್ಯವಾದವಿತ್ತರು. ಶೈಲೇಶ್ ನೆಟ್ಟಾರು ನಿರೂಪಿಸಿ ದರು.ಕಾರ್ಯಕ್ರಮದಲ್ಲಿ ಯುವಕ ಮಂಡಲದ ಮಹಿಳಾ ಮಂಡಲಗಳ ಸದಸ್ಯರು ಭಾಗವಹಿಸಿದರು.ಶಿಬಿರದಲ್ಲಿ ಒಟ್ಟು 52ಮಂದಿ ರಕ್ತದಾನ ಮಾಡಿದರು.8ಮಂದಿ ಪ್ರಥಮ ಬಾರಿಗೆ ರಕ್ತದಾನ ಮಾಡಿದರು. ಮೊದಲ ಬಾರಿ ರಕ್ತದಾನ ಮಾಡಿದವರಿಗೆ ಗುಲಾಬಿ ಹೂ ನೀಡಿ ಗೌರವಿಸಲಾಯಿತು.

- Advertisement -

Related news

error: Content is protected !!