- Advertisement -
- Advertisement -






ಗುಣಶ್ರೀ ವಿದ್ಯಾಲಯ ಕುಳ- ಕುಂಡಡ್ಕ ಇಲ್ಲಿ ದಿನಾಂಕ 14-06-2025 ನೇ ಶನಿವಾರದಂದು ಬೆಳಿಗ್ಗೆ 9:30ಕ್ಕೆ ಶೈಕ್ಷಣಿಕ ವರ್ಷದ ಯೋಗ ತರಗತಿ ಉದ್ಘಾಟನೆಗೊಂಡಿತು.

ಶ್ರೀ ಸತ್ಯ ಸಾಯಿ ಲೋಕ ಸೇವಾ ವಿದ್ಯಾಸಂಸ್ಥೆ ಅಳಿಕೆ ಇಲ್ಲಿನ ಯೋಗ ಗುರುಗಳಾದ ಶ್ರೀ ಆನಂದ ಶೆಟ್ಟಿ ಇವರು ಕಾರ್ಯಕ್ರಮ ಉದ್ಘಾಟಿಸಿದರು. ಶಾಲಾ ಸಂಚಾಲಕರಾದ ಶ್ರೀ ವೇಣುಗೋಪಾಲ ಶೆಟ್ಟಿ ಮರುವಾಳ ಇವರು ಮಾತನಾಡಿ ” ಮನುಷ್ಯನ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಮತ್ತು ವ್ಯಕ್ತಿಯ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣಕ್ಕೆ ಯೋಗ ಸಹಕಾರಿ “ಎಂದು ನುಡಿದರು. ಶಾಲಾ ಮುಖ್ಯ ಶಿಕ್ಷಕ ಪ್ರವೀಣ್ ಶೆಟ್ಟಿ ಮೈರ ಮಾತನಾಡಿ ಯೋಗದ ಮಹತ್ವವನ್ನು ಮಕ್ಕಳಿಗೆ ತಿಳಿಸಿಕೊಟ್ಟರು. ಶಾಲಾ ಶಿಕ್ಷಕಿ ವೃಂದದವರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಮಹೇಶ್ ಸ್ವಾಗತಿಸಿ, ತನೀಶ ವಂದಿಸಿದರು. ವಂಶಿ ಕಾರ್ಯಕ್ರಮ ನಿರೂಪಿಸಿದರು.
- Advertisement -