Wednesday, July 22, 2026
spot_imgspot_img
spot_imgspot_img

ಗುಣಶ್ರೀ ವಿದ್ಯಾಲಯ ಕುಳ- ಕುಂಡಡ್ಕದಲ್ಲಿ ಪೋಷಕರ ಸಭೆ

- Advertisement -
- Advertisement -

ಗುಣಶ್ರೀ ವಿದ್ಯಾಲಯ ಕುಳ- ಕುಂಡಡ್ಕ ಇಲ್ಲಿ ದಿನಾಂಕ : 25-06-2025ನೇ ಬುಧವಾರ ಬೆಳಿಗ್ಗೆ ಪೋಷಕರ ಸಭೆ ನಡೆಯಿತು.

ಅತಿಥಿಗಳು ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು . ಮಾನ್ ದೇವ್ ಎಜುಕೇಷನಲ್ ಆಂಡ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇದರ ಅಧ್ಯಕ್ಷರು ಹಾಗೂ ಗುಣಶ್ರೀ ವಿದ್ಯಾಲಯ ಕುಳ- ಕುಂಡಡ್ಕ ಇದರ ಅಧ್ಯಕ್ಷರಾದ ಶ್ರೀ ನಾಗರಾಜ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಅಳಿಕೆ ವಿದ್ಯಾಸಂಸ್ಥೆಯ ಯೋಗಗುರುಗಳಾದ ತ್ಯಾಗಜೀವಿಗಳೂ ಆಗಿರುವ ಶ್ರೀ ಆನಂದ ಶೆಟ್ಟಿಯವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪ್ರವೀಣ್ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ ಶಾಲೆಯ ಈ ಶೈಕ್ಷಣಿಕ ವರ್ಷದ ಚಟುವಟಿಕೆಗಳು ಹಾಗೂ ಪೋಷಕರ ಜವಾಬ್ದಾರಿಗಳ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷೀಯ ನುಡಿಗಳನ್ನಾಡಿದ ಸಭಾಧ್ಯಕ್ಷರು “ಮಕ್ಕಳು ಸಂಸ್ಕಾರಯುತ ಶಿಕ್ಷಣ ಪಡೆದು ಹೆತ್ತವರ ಸೇವೆ ಮಾಡಿದರೆ ದೇವರ ಸೇವೆ ಮಾಡಿದಂತೆ” ಎಂದು ನುಡಿದರು. ಶಾಲಾ ಸಂಚಾಲಕರಾದ ಶ್ರೀ ವೇಣುಗೋಪಾಲ ಶೆಟ್ಟಿ ಮರುವಾಳ ಇವರು ಸೇರಿರುವ ಎಲ್ಲರನ್ನು ಸ್ವಾಗತಿಸಿ, ಶಿಕ್ಷಕರ ಪರಿಚಯ ಮಾಡಿಕೊಟ್ಟರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶಿಕ್ಷಕಿ ಶ್ರೀಮತಿ ರೇಖಾ ವಂದಿಸಿದರು. ಶಿಕ್ಷಕಿ ಕುಮಾರಿ ಕಾವ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ ಶಿಕ್ಷಕ ವೃಂದದವರು ಹಾಗೂ ಪೋಷಕ ವೃಂದದವರು ಉಪಸ್ಥಿತರಿದ್ದರು.

- Advertisement -

Related news

error: Content is protected !!