Sunday, July 6, 2025
spot_imgspot_img
spot_imgspot_img

ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ

- Advertisement -
- Advertisement -

ವಿಟ್ಲ: ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ನಡೆಯಿತು. ವಿಟ್ಲ ವಲಯ ಅರಣ್ಯಾಧಿಕಾರಿ ವೀರಣ್ಣ ಉದ್ಘಾಟಿಸಿ ವನಮಹೋತ್ಸವದ ಮಹತ್ವದ ಬಗ್ಗೆ ತಿಳಿಸಿದರು.

ಶಾಲಾ ಸಂಚಾಲಕ ಫಾ. ಐವನ್ ಮೈಕೆಲ್ ರೋಡ್ರಿಗಸ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಟ್ಲ ವಲಯದ ಅರಣ್ಯ ಗಸ್ತು ಅಧಿಕಾರಿ ಸತೀಶ್ ಡಿ ಸೋಜಾ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯರು ಫಾ ಅಮಿತ್ ಪ್ರಕಾಶ್ ರೋಡ್ರಿಗಸ್ ಮತ್ತು ಮುಖ್ಯ ಶಿಕ್ಷಕಿ ಸಿಸ್ಟರ್ ಮರೀನಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸ್ಕೌಟ್ , ಗೈಡ್ ವಿದ್ಯಾರ್ಥಿಗಳಿಗೆ ಗಿಡಗಳನ್ನು ವಿತರಿಸಲಾಯಿತು. ಕ್ಲಾರಿಸ್ ವನಮಹೋತ್ಸವದ ಮಾಹಿತಿ ನೀಡಿದರು. ಶಾಲಾ ಆವರಣದಲ್ಲಿ ಗಿಡಗಳನ್ನು ನೆಡಲಾಯಿತು. ಭಕ್ತಿ ಕೆ ಸ್ವಾಗತಿಸಿ, ಜನನಿ ಎಸ್ ವಂದಿಸಿದರು. ಫಾತಿಮಾ ಅಸ್ನ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ಸಚಿನ್, ಹೆಲನ್, ಸಂದ್ಯಾ, ದೈಹಿಕ ಶಿಕ್ಷಕರುಗಳಾದ ವಿದ್ಯಾ ಬಿ ಮತ್ತು ಸತ್ಯನಾರಾಯಣ ರೈ ಡಿ ಕಾರ್ಯಕ್ರಮ ಸಂಯೋಜಿಸಿದರು.

- Advertisement -

Related news

error: Content is protected !!