Wednesday, July 2, 2025
spot_imgspot_img
spot_imgspot_img

ಫುಟ್ಭಾಲ್​ನ ದಂತಕಥೆ ಡಿಯಾಗೋ ಮೆರಡೋನಾ ಇನ್ನಿಲ್ಲ!

- Advertisement -
- Advertisement -

ಫುಟ್ಭಾಲ್​ನ ದಂತಕಥೆ ಡಿಯಾಗೋ ಮೆರಡೋನಾ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಪುಟ್ಬಾಲ್​ನ ಸಾರ್ವಕಾಲಿಕ ಶ್ರೇಷ್ಟ ಆಟಗಾರ ಎಂದು ಗುರುತಿಸಿಕೊಂಡಿದ್ದ ಮರಡೋನಾ ಇಂದಿಗೂ ಅನೇಕರಿಗೆ ಸ್ಫೂರ್ತಿ. 1986ರಲ್ಲಿ ಅರ್ಜೆಂಟಿನಾಗೆ ವಿಶ್ವಕಪ್​ ಗೆದ್ದುಕೊಡುವಲ್ಲಿ ಪ್ರಮುಖ ವಹಿಸಿದ ಈ ಆಟಗಾರ ನಿನ್ನೆ ಕೊನೆ ಉಸಿರೆಳೆದಿರುವುದಾಗಿ ಕುಟುಂಬದ ಮೂಲ ದೃಢಪಡಿಸಿದೆ.

ಇತ್ತೀಚೆಗೆ ಇವರು ಮೆದುಳಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ ಪರಿಣಾಮ ಅವರು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಪುಟ್ಬಾಲ್​ ಹೊರತಾಗಿ ಮಾದಕ ಚಟದಿಂದಾಗಿ ಕೂಡ ಇವರ ವೃತ್ತಿ ಜೀವನ ವಿವಾದಕ್ಕೆ ಗುರಿಯಾಗಿತ್ತು.

​ ‘ಹ್ಯಾಂಡ್​ ಆಫ್​ ಗಾಡ್‘​ ಎಂದೇ ಖ್ಯಾತಿ ಗಳಿಸಿದ ಈತ, ಪುಟ್ಬಾಲ್​ ವಿಶ್ವಕಪ್​ನಲ್ಲಿ ಇಂಗ್ಲೆಡ್​ ವಿರುದ್ಧ ಗಳಿಸಿದ ಗೋಲ್​ ಇಂದಿಗೂ ದಾಖಲೆ ಪುಟ ಸೇರಿದೆ.

- Advertisement -

Related news

error: Content is protected !!