Thursday, May 2, 2024
spot_imgspot_img
spot_imgspot_img

ವಾರ್ಷಿಕ ಶಬರಿಮಲೆ ಯಾತ್ರೆ ಪ್ರಾರಂಭ; ಬಾಗಿಲು ತೆರೆದ ಅಯ್ಯಪ್ಪ ಸ್ವಾಮಿ ದೇಗುಲ

- Advertisement -G L Acharya panikkar
- Advertisement -

ಶಬರಿಮಲೆ: ಎರಡು ತಿಂಗಳ ದೀರ್ಘ ವಾರ್ಷಿಕ ಯಾತ್ರಾ ಋತುವಿನ ಆರಂಭ ವಾರ್ಷಿಕ ಮಂಡಲಂ-ಮಕರವಿಳಕ್ಕು ಉತ್ಸವಕ್ಕಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯದ ಬಾಗಿಲು ಗುರುವಾರ ತೆರೆಯಿತು. ದೇವಾಲಯದ ಪ್ರಧಾನ ಅರ್ಚಕ ಕಂದರಾರು ಮಹೇಶ್ ಮೋಹನರಾರು ನಿರ್ಗಮಿತ ಪ್ರಧಾನ ಅರ್ಚಕ ಕೆ.ಜಯರಾಮನ್ ನಂಬೂತಿರಿ ಅವರ ಅನುಪಸ್ಥಿತಿಯಲ್ಲಿ ಗರ್ಭಗುಡಿಯನ್ನು ತೆರೆದರು.

ತೀರ್ಥಯಾತ್ರೆ ಮೂಲಕ ದೊಡ್ಡ ಸಂಖ್ಯೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಆಗಮಿಸುವುದರಿಂದ ಸಾಲುಗಳನ್ನು ನಿಯಂತ್ರಿಸಲು ಸಿಬ್ಬಂದಿ ನೇಮಕ ಕೂಡ ಮಾಡಲಾಗಿದೆ. ಈಗಾಗಲೇ ದೇವರ ದರ್ಶನ ಪಡೆಯಲು ಸಾವಿರಾರು ಭಕ್ತರು ಆಗಮಿಸಿದ್ದು ಸರತಿ ಸಾಲಿನಲ್ಲಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಿದ್ದಾರೆ. ಮಲಯಾಳಂ ಕ್ಯಾಲೆಂಡರ್​ ಪ್ರಕಾರ 41 ದಿನಗಳ ಕಾಲ ದೇಗುಲದಲ್ಲಿ ಮಂಡಲ ಪೂಜೆ ಹಾಗೂ ಮಕರವಿಳಕ್ಕು ಯಾತ್ರೆ ಆರಂಭವಾಗಲಿದೆ. ಜನವರಿ 15ರ ಮಕರ ಸಂಕ್ರಮಣ ದಿನದಂದು ಮಕರವಿಳಕ್ಕು ನೆರವೇರಲಿದ್ದು, ದೇಶದಾದ್ಯಂತ ಲಕ್ಷಾಂತರು ಭಕ್ತರು ಶಬರಿಮಲೆಗೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ.

ಅಯ್ಯಪ್ಪ ಸ್ವಾಮಿ ದರ್ಶನಕ್ಕೆ ಆಗಮಿಸುವ ಭಕ್ತರಿಗಾಗಿ ಮೂಲ ಸೌಕರ್ಯಗಳನ್ನು ಕೈಗೊಳ್ಳಲಾಗಿದೆ. ಕುಡಿಯುವ ನೀರಿನ ವ್ಯವಸ್ಥೆ, ಆಸ್ಪತ್ರೆ, ಶೌಚಾಲಯ ಸೇರಿದಂತೆ ಭಕ್ತರಿಗೆ ತಂಗುವ, ಪಾರ್ಕಿಂಗ್​ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಲ್ಲದೇ ಕೇರಳ ಸರ್ಕಾರದಿಂದ ವಿಶೇಷ ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ. ಜನಸಂದಣಿಯನ್ನು ನಿರ್ವಹಿಸಲು ಆರು ಹಂತಗಳಲ್ಲಿ 13,000 ಪೊಲೀಸ್ ಅಧಿಕಾರಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗುವುದು ಮತ್ತು ಇಡೀ ಯಾತ್ರಾ ವಲಯವನ್ನು ಕಟ್ಟುನಿಟ್ಟಾದ ಕಣ್ಗಾವಲು ಜಾಲದ ಅಡಿಯಲ್ಲಿ ತರಲಾಗಿದೆ. ಮೂರು ತಾತ್ಕಾಲಿಕ ಪೊಲೀಸ್ ಠಾಣೆಗಳನ್ನು – ಸನ್ನಿಧಾನಂ, ನಿಲಕಲ್ ಮತ್ತು ವಡಸ್ಸೆರಿಕ್ಕರಾದಲ್ಲಿ ತಲಾ ಒಂದು ತೆರೆಯಲಾಗಿದೆ. ನಿಲಕಲ್ ಮತ್ತು ಸುತ್ತಮುತ್ತಲಿನ 17 ಮೈದಾನಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದ್ದು, ವರ್ಚುವಲ್ ಕ್ಯೂಗಳಿಗಾಗಿ 15 ಕೌಂಟರ್‌ಗಳನ್ನು ತೆರೆಯಲಾಗಿದೆ.

- Advertisement -

Related news

error: Content is protected !!