Saturday, June 28, 2025
spot_imgspot_img
spot_imgspot_img

ಅಮೆರಿಕನ್ನರು ಹಿಂದೆಂದೂ ನೋಡಿರದ ಭೀಕರ ದಾಳಿ ಎದುರಿಸಲು ಸಿದ್ಧರಾಗಿ- ಖಮೇನಿ ಎಚ್ಚರಿಕೆ

- Advertisement -
- Advertisement -

ಇರಾನ್‌ನ ಮೂರು ಪರಮಾಣು ಕೇಂದ್ರಗಳ ಮೇಲೆ ಅಮೆರಿಕ ಬಾಂಬ್ ದಾಳಿ ನಡೆಸಿದ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ‘ಅಮೆರಿಕನ್ನರು ಹಿಂದೆಂದಿಗಿಂತಲೂ ಭೀಕರ ಹಾಗೂ ಹೆಚ್ಚಿನ ಹಾನಿ ಉಂಟುಮಾಡಬಲ್ಲ ದಾಳಿಯನ್ನು ಎದುರಿಸಲು ಸಜ್ಜಾಗಿ’ ಅಮೆರಿಕಾಗೆ ಎಚ್ಚರಿಕೆ ನೀಡಿದ್ದಾರೆ.

ಇದಕ್ಕೆ ದನಿಗೂಡಿಸಿರುವ ಖಮೇನಿಯ ಪ್ರತಿನಿಧಿ ಹೊಸೈನ್ ಶರಿಯತ್‌ಮದಾರಿ, ಈಗ ಯಾವುದೇ ವಿಳಂಬವಿಲ್ಲದೇ ಕಾರ್ಯನಿರ್ವಹಿಸುವ ಸರದಿ ನಮ್ಮದಾಗಿದೆ. ಮೊದಲ ಹೆಜ್ಜೆಯಾಗಿ ನಾವು ಬಹ್ರೇನ್‌ನಲ್ಲಿರುವ ಯುಎಸ್ ನೌಕಾಪಡೆಯ ಮೇಲೆ ಕ್ಷಿಪಣಿ ದಾಳಿ ಮಾಡಬೇಕು. ಅದೇ ಸಮಯಕ್ಕೆ ಅಮೆರಿಕನ್, ಬ್ರಿಟಿಷ್, ಜರ್ಮನ್ ಮತ್ತು ಫ್ರೆಂಚ್ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ಮುಚ್ಚಬೇಕು. ನಿರ್ಣಾಯಕ ಮಿಲಿಟರಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಅಮೆರಿಕದ ದಾಳಿಯನ್ನು ಖಚಿತಪಡಿಸಿರುವ ಇರಾನ್‌ನ ಪರಮಾಣು ಇಂಧನ ಸಂಸ್ಥೆ, ನಮ್ಮ ಫೋರ್ಡೊ, ನಟಾಂಜ್ ಮತ್ತು ಎಸ್ಫಹಾನ್ ಪರಮಾಣು ಕೇಂದ್ರಗಳ ಮೇಲೆ ಶತ್ರುದೇಶ ದಾಳಿ ನಡೆಸಿದ್ದು, ಇದು ಅಂತಾರಾಷ್ಟ್ರೀಯ ಕಾನೂನು ಉಲ್ಲಂಘನೆಯ ಕ್ರೂರ ಕೃತ್ಯ. ಅಲ್ಲದೇ ಈ ದಾಳಿಯನ್ನು ಬಲವಾಗಿ ಖಂಡಿಸುವಂತೆ ಇರಾನ್ ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವಿ ಮಾಡಿದೆ. ಜೊತೆಗೆ ತನ್ನ ಪರಮಾಣು ಅಭಿವೃದ್ಧಿ ಕಾರ್ಯಕ್ರಮ ನಿಲ್ಲಿಸಲು ಸಾಧ್ಯವಿಲ್ಲ ಎಂದು ತಿಳಿಸಿದೆ.

- Advertisement -

Related news

error: Content is protected !!