Tuesday, September 8, 2026
spot_imgspot_img
spot_imgspot_img

ಕಾಸರಗೋಡು: 4 ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ..!

- Advertisement -
- Advertisement -

ಕಾಸರಗೋಡು: ನಾಲ್ಕು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕಾರ್ಮಿಕನ ಮೃತದೇಹ ಪತ್ತೆಯಾದ ಘಟನೆ ಬದಿಯಡ್ಕ ಸಮೀಪದ ಬಾಂಜ ತ್ತಡ್ಕ ಇಕ್ಕೇರಿ ಎಂಬಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಬಾಂಜತ್ತಡ್ಕ ಇಕ್ಕೇರಿಯ ವಿ.ವಿ.ಪ್ರಕಾಶ್ (40) ಎಂದು ಗುರುತಿಸಲಾಗಿದೆ.

ತೆಂಗಿನಕಾಯಿ ಕೊಯ್ಯುವ ಕಾಯಕ ಮಾಡಿಕೊಂಡಿದ್ದ ಪ್ರಕಾಶ್ ಜೂನ್ 18 ರಂದು ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಪತ್ನಿ ಬದಿಯಡ್ಕ ಠಾಣಾ ಪೊಲೀಸರಿಗೆ ದೂರು ನೀಡಿದ್ದರು.

ರವಿವಾರ ಇಕ್ಕೇರಿ ಸಮೀಪ ಹೊಳೆಯ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆ ಗಾಗಿ ಜನರಲ್ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

- Advertisement -

Related news

error: Content is protected !!