- Advertisement -
- Advertisement -



“ಕಾಂಟಾ ಲಗಾ” ಹಾಡಿನ ಮೂಲಕ ಪ್ರಸಿದ್ದಿ ಪಡೆದ ನಟಿ&ಬಿಗ್ ಬಾಸ್ 13ನೇ ಸೀಸನ್ನಲ್ಲಿ ಜನಪ್ರಿಯತೆ ಗಳಿಸಿದ್ದ ನಟಿ ಶೆಫಾಲಿ ಜರಿವಾಲಾ(42) ಸಾವನ್ನಪ್ಪಿದ್ದಾರೆ.
ಶುಕ್ರವಾರ ತಡರಾತ್ರಿ ಅವರಿಗೆ ಹೃದಯಾಘಾತವಾಗಿದ್ದು ಕೂಡಲೇ ಪತಿ, ನಟ ಪರಾಗ್ ತ್ಯಾಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ. ಆದರೆ ಅಷ್ಟರಲ್ಲೇ ಕೊನೆಯುಸಿರೆಳೆದಿದ್ದು ನಂತರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ರವಾನಿಸಲಾಗಿದೆ.ಮರಣೋತ್ತರ ಪರೀಕ್ಷೆ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. ಶೆಫಾಲಿ 2015ರಲ್ಲಿ ಪರಾಗ್ ತ್ಯಾಗಿಯನ್ನು ಮದುವೆಯಾದ್ದರು.
- Advertisement -