- Advertisement -
- Advertisement -



ಮಂಜೇಶ್ವರ: ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿಯೋರ್ವನನ್ನು ಮಂಜೇಶ್ವರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಚ್ಚಂಪಾಡಿಯ ಅಬ್ದುಲ್ ಜಬ್ಬಾರ್ (37) ಎಂದು ಗುರುತಿಸಲಾಗಿದೆ.
ಪಾವೂರು ಕೋಡಿ ಮನೆಯ ಅಬ್ದುಲ್ ಖಾದರ್ (35) ಮತ್ತು ಮಹಮ್ಮದ್ ಜಾಫರ್ ( 31) ರವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಈತನನ್ನು ಬಂಧಿಸಲಾಗಿದೆ.
ಈತನಲ್ಲದೆ ಹೊಸಂಗಡಿ ಯಾಕೂಬ್, ಮುಬಾರಕ್ ಮತ್ತು ಅಶ್ರಫ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಚ್ಚಂಪಾಡಿಯಲ್ಲಿ ಕಾರಿಗೆ ಸೈಡ್ ಕೊಡುವ ವಿಚಾರದಲ್ಲಿ ಈ ಘಟನೆ ನಡೆದಿದೆ.
- Advertisement -