- Advertisement -
- Advertisement -



ಪುತ್ತೂರು: ಭಾರತೀಯ ಜನತಾ ಪಾರ್ಟಿ ಪುತ್ತೂರು ವಿದಾನಸಭಾ ಕ್ಷೇತ್ರ ಇದರ ಆಶ್ರಯದಲ್ಲಿ ಮರಳು-ಕೆಂಪು ಕಲ್ಲು ಕೊರತೆಯ ವಿರುದ್ಧ ಪ್ರತಿಭಟನಾ ಸಭೆ ನಡೆಯಲಿದೆ.
ದಿನಾಂಕ 14.07.2025 ನೇ ಸೋಮವಾರದಂದು ಬೆಳಗ್ಗೆ ಗಂಟೆ 9.30ಕ್ಕೆ ಮರಳು-ಕೆಂಪು ಕಲ್ಲು ಕೊರತೆಯ ವಿರುದ್ಧ ಪುತ್ತೂರು ಖಾಸಗಿ ಬಸ್ಸು ನಿಲ್ದಾಣದ ಬಳಿಯಿಂದ ಮೆರವಣಿಗೆ ಮೂಲಕ ತೆರಳಿ ಅಮರ್ ಜವಾನ್ ಸ್ಮಾರಕದ ಎದುರು ಪ್ರತಿಭಟನೆ ನಡೆಯಲಿದ್ದು, ಮರಳು ಮತ್ತು ಕೆಂಪು ಕಲ್ಲು ಅಲಭ್ಯತೆಯಿಂದ ಸಾವಿರಾರು ಕಟ್ಟಡ ಕಾರ್ಮಿಕರಿಗೆ ನಿರುದ್ಯೋಗ, ಮನೆ ನಿರ್ಮಾಣ ಮತ್ತು ಅಭಿವೃದ್ಧಿ ಕೆಲಸಗಳು ಸ್ಥಗಿತ, ಲಾರಿ ಮಾಲಕರು- ಚಾಲಕರು ಆರ್ಥಿಕ ಸಂಕಷ್ಟದಲ್ಲಿದ್ದು, ಜನಸಾಮಾನ್ಯರ ಬದುಕು ತೀವ್ರವಾಗಿ ಕುಸಿತದಲ್ಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಕಾರ್ಮಿಕ ಸಂಘಟನೆಗಳು, ಲಾರಿ ಮಾಲಕರ ಸಂಘ, ಸಾರ್ವಜನಿಕರ ಜನಕ್ರೋಶ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
- Advertisement -








