- Advertisement -
- Advertisement -
ಚೆನ್ನೈ: ಬಾಂಗ್ಲಾದೇಶದ ವಿರುದ್ದದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಗೆಲುವು ಸಾಧಿಸಿದೆ.ಚೆನ್ನೈನಲ್ಲಿ ನಡೆದ ಪಂದ್ಯದ ನಾಲ್ಕನೇ ದಿನದಾಟದಲ್ಲೇ ಬಾಂಗ್ಲಾ ತಂಡವು 280 ರನ್ ಅಂತರದಿಂದ ಸೋತಿದೆ.
ಇದರೊಂದಿಗೆ ಭಾರತವು ಎರಡು ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಗೆಲುವಿಗೆ 515 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು 234 ರನ್ ಗಳಿಗೆ ಆಲೌಟಾ ಆದರು. ಪಂದ್ಯದಲ್ಲಿ ಅಶ್ವಿನ್ ಅದ್ಭುತ ಬೌಲಿಂಗ್ ನಡೆಸಿ ಆರು ವಿಕೆಟ್ ಪಡೆದರು.
ಮೂರನೇ ದಿನದಾಟದ ಅಂತ್ಯಕ್ಕೆ ನಾಲ್ಕು ವಿಕೆಟ್ ನಷ್ಟಕ್ಕೆ 158 ರನ್ ಗಳಿಸಿದ್ದ ಬಾಂಗ್ಲಾಗೆ ನಾಯಕ ನಜ್ಮುಲ್ ಹುಸೇನ್ ಆಧಾರವಾದರೂ. ಈ ಮೂಲಕ ಅವರು 82 ರನ್ ಗಳಿಸಿದರು. ಉಳಿದಂತೆ ಶಕೀಬ್ ಅಲ್ ಹಸನ್ 25 ರನ್ ಹೊಡೆದು ಔಟಾದರು. ಬಳಿಕ ಅಶ್ವಿನ್-ಜಡೇಜಾ ಸ್ಪಿನ್ ಜಾಲಕ್ಕೆ ಸಿಲುಕಿದ ಬ್ಯಾಟರ್ ಗಳು ರನ್ ಗಳಿಸಲು ಪರದಾಡಿದರು.
- Advertisement -