Thursday, June 18, 2026
spot_imgspot_img
spot_imgspot_img

ಖ್ಯಾತಿಯ ಕಡೆ ಮುಖ ಮಾಡಿದ್ದ ಯಕ್ಷಗಾನ ಕಲಾವಿದರ‌ ಬಾಳಿನಲ್ಲಿ ಬಿರುಗಾಳಿ

- Advertisement -
- Advertisement -

ನಿರಂತರ ಲೈಂಗಿಕ ಕಿರುಕುಳದ ಆರೋಪ – ಶ್ರೇಯಾ ಆಚಾರ್ಯ, ರೋಹಿತ್ ಉಜ್ಜಿಲ ಮದುವೆ ಕಹಾನಿ..!

ಕರಾವಳಿಯ ಗಂಡು ಕಲೆ ಯಕ್ಷಗಾನ ರಂಗದಲ್ಲಿ ಚೆಂಡೆ ವಾದಕರಾಗಿ ರೋಹಿತ್ ಉಚ್ಚಿಲ್ ಬಹಳ ಖ್ಯಾತಿ ಪಡೆದಿದ್ದರು. ಇತ್ತೀಚೆಗೆ ತಾವು ಉದಯೋನ್ಮುಖ ಹಿಮ್ಮೇಳ ಕಲಾವಿದೆ ಭಾಗವತೆ ಶ್ರೇಯಾ ಆಚಾರ್ಯ ಎಂಬವರನ್ನು ವಿವಾಹವಾಗಿದ್ದರು. ಆದರೆ ಇತ್ತೀಚಿಗೆ ತಮ್ಮ ಫೇಸ್ ಬುಕ್ ಖಾತೆಯಲ್ಲಿ ತಮ್ಮ ಪತ್ನಿ ಶ್ರೇಯಾ ಪೋಸ್ಟ್ ವೊಂದನ್ನು ಹರಿಯ ಬಿಟ್ಟಿದ್ದಾರೆ.

ಕೆಲ ಸಮಯಗಳ ಹಿಂದೆ ಮದುವೆ ಆಗಿದ್ದ ಇವರ ಬಾಳಿನಲ್ಲಿ ಬಿರುಗಾಳಿ ಬಂದಂತಾಗಿದ್ದು, ತಮ್ಮ ಪೋಸ್ಟ್ ನ್ನು ಈ ರೀತಿ ಹಂಚಿಕೊಂಡಿದ್ದಾರೆ.

https://www.facebook.com/share/19PSSAMjg6/

ನಮಸ್ತೆ 🙏
ಆತ್ಮೀಯ ಬಾಂಧವರೇ,
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ಮತ್ತು.. ,ವಿಚಾರ ತಿಳಿಯದೆ ತಮ್ಮ ಮೂಗಿನ ನೇರಕ್ಕೆ ಮಾತನಾಡುವವರ ಗಮನಕ್ಕೆ,….
ಶ್ರೇಯಾಳಾದನಾನು ಯಾರಿಗೂ ತಿಳಿಸದೆ ಮದುವೆಯಾದಬಗ್ಗೆ…
ನಿಮ್ಮ ಮುಂದೆ ಬಂದು ಅದರಬಗ್ಗೆ ಸ್ಪಷ್ಟೀಕರಣವೋ ಅಥವಾ ಉತ್ತರವೋ ನೀಡುವುದಕ್ಕೆ ಸಾಧ್ಯವಾಗದ ಕಾರಣ ಈ ಮೂಲಕ ಪ್ರತಿಕ್ರಿಯಿಸುತ್ತಿದ್ದೇನೆ.
ತಮಗೆ ಬಂದ ಸುದ್ದಿಯಂತೆ,ಆತುರತೆಯ ತೀಮಾ೯ನವೋ, ತಂದೆ ತಾಯಿಯರಿಗೆ ಮಾಡಿದ ಮೋಸವೋ ಅಥವಾ ಪೂವ೯ನಿಧಾ೯ರಿತ ಯೋಜನೆಯೋ ಏನೂ ಅಲ್ಲ. ಇದರ ಹಿಂದೆ ಕಳೆದಒಂದು ವಷ೯ದಿಂದ ನಾನು ಅನುಭವಿಸಿದ ಚಿತ್ರಹಿಂಸೆ ,ನೋವಿನ ಕಥೆ ಇದೆ ಕೇಳಿ,
ತಂದೆ ತಾಯಿಯ ಮುದ್ದಿನ ಮಗಳಾಗಿ, ತಮ್ಮನಿಗೆ ತಾಯಿಯ ಪ್ರೀತಿಯನ್ನು ಅಕ್ಕನ ಸ್ಥಾನದಲ್ಲಿ ನಿಂತು ಕೊಟ್ಟವಳು ನಾನು . ಆದರೆ ಕಳೆದ ಒಂದು ವಷ೯ಗಳಿಂದ ಅಪ್ಪ ಅಮ್ಮನ ಪ್ರೀತಿ, ತಮ್ಮನ ಪ್ರೀತಿ ಎಲ್ಲವನ್ನು ನಾನು ಕಳೆದುಕೊಂಡೆ. ಇದಕ್ಕೆ ಮೂಲ ಕಾರಣ, ತನ್ನ ಸ್ವಾಥ೯ಕ್ಕೆ ನನ್ನ ಜೀವನದೊಂದಿಗೆ ಆಡಿದ ಆದಶ್೯ ಆಚಾಯ೯ ಎಂಬಾತ.
ಕಳೆದ 4 ವಷ೯ಗಳ ಹಿಂದೆ, ತಮ್ಮನ ಉಪನಯನದ ಸಂದರ್ಭದಲ್ಲಿ ನಮ್ಮ ಮನೆಯ ಎಲ್ಲರ ಪರಿಚಯ ಮಾಡಿಕೊಂಡನು. ಎಲ್ಲರ ವಿಶ್ವಾಸವನ್ನು ಘಳಿಸಿಕೊಂಡ. ಆದರೆ ಆತನ ನಿಜ ಸ್ವರೂಪ ನನಗೆ ತಿಳಿದದ್ದು, ಕಳೆದ ಒಂದು ವಷ೯ದ ಹಿಂದೆ. ನನ್ನ ಸಮಾಜದ ಪುರೋಹಿತರು ಉತ್ತಮ ವ್ಯಕ್ತಿತ್ವ ಉಳ್ಳವರೆಂದು ತಿಳಿದು ತೋರಿದ ಸೌಜನ್ಯವನ್ನು ದುರುಪಯೋಗಪಡಿಸಿಕೊಂಡನು. ನನ್ನ ಹೆತ್ತವರಲ್ಲಿ ಹಾಗೂ ತಮ್ಮನ ಮುಂದೆ ಒಳ್ಳೆಯವರ ರೀತಿಯಲ್ಲಿ ನಟಿಸಿ ಮನೆಗೆ ಬಂದು ಯಾರು ಇಲ್ಲದ ಸಮಯ ನೋಡಿ, ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದನು . ದುರಾದೃಷ್ಟವಶಾತ್ ನಮ್ಮ ಮನೆಯವರ ಮುಂದೆ ಈ ವಿಚಾರಗಳ ಬಗ್ಗೆ ಹಂಚಿಕೊಂಡರೆ, ನನ್ನ ಮಾತನ್ನು ಯಾರೂ ನಂಬುವಂತಿರಲಿಲ್ಲ, ಯಾಕೆಂದರೆ ಅವರಿಂದ ಆ ರೀತಿಯ ವಿಶ್ವಾಸವನ್ನು ಘಳಿಸಿಕೊಂಡಿದ್ದ.
ಮುಂದಿನ ದಿನಗಳಲ್ಲಿ ನನ್ನ ಕಾಯ೯ಕ್ರಮದ ಕುರಿತಾಗಲಿ , ನನ್ನ ಫೋಟೊಗಳ ವಿಚಾರಗಳ ಬಗ್ಗೆಯಾಗಲಿ ನನಗೆ ವೈಯಕ್ತಿಕವಾಗಿ ಕಿರುಕುಳವನ್ನು ನೀಡಿ, ಫೋನ್ ಕರೆಗಳ ಮೂಲಕ, ಮೆಸೇಜ್ ಗಳ ಮೂಲಕ ಮಾನಸಿಕ ಕಿರುಕುಳವನ್ನು ನೀಡುತ್ತಿದ್ದ. ವಿಪಯಾ೯ಸವೇನೆಂದರೆ, ನನ್ನ ಅಪ್ಪ ಅಮ್ಮನಿಗೆ, ತಮ್ಮನಿಗೆ ಆತ ಕರೆ, ಮೆಸೇಜ್ ಮಾಡಿ ನನ್ನ ಬಗ್ಗೆ ಇಲ್ಲ ಸಲ್ಲದ ವಿಚಾರಗಳನ್ನು ಹೇಳಿ , ನನ್ನ ಅಪ್ಪ ಅಮ್ಮ ನನ್ನ ಮೇಲೆ ಇಟ್ಟ ಪ್ರೀತಿ, ವಿಶ್ವಾಸ, ನಂಬಿಕೆ ಎಲ್ಲವನ್ನು ಕಳೆದುಕೊಳ್ಳುವಂತೆ ಮಾಡಿದ. ಇದರಿಂದಾಗಿ ನನ್ನ ಅಮ್ಮ ಆತನ ಮಾತನ್ನು ಸತ್ಯವೆಂದು ನಂಬಿ ಎಷ್ಟೋ ದಿನ ನನ್ನಲ್ಲಿ ಮಾತನಾಡಲೇ ಇಲ್ಲ. ನನ್ನ ಹಾಗೂ ನನ್ನ ಅಮ್ಮನ ಸಂಬಂಧವೇ ಹಾಳಾಗುವಂತೆ ಆಯಿತು. ಅಷ್ಟೇ ಅಲ್ಲ ‘ನನ್ನ ಮಗಳು’ ಎಂದು ಹೆಮ್ಮೆಯಲ್ಲಿ ಹೇಳಿಕೊಳ್ಳುತ್ತಿದ್ದ ನನ್ನ ಅಪ್ಪ ಆತನ ಮಾತುಗಳನ್ನು ಕೇಳಿ, ನನ್ನ ಮೇಲಿನ ಪ್ರೀತಿ ಎಲ್ಲವನ್ನು ಕಳೆದುಕೊಂಡರು. ಈತನಿಂದಾಗಿ ನನ್ನ ಅಪ್ಪ ಅಮ್ಮನ ಬಾಯಿಯಿಂದ ‘ ನೀನು ನಮ್ಮ ಮಯಾ೯ದಿ ತೆಗಿತಿ ‘ ಎಂದು ಹೇಳುವ ತನಕ ಮಾಡಿಸಿದ. ಈ ಸಂದರ್ಭದಲ್ಲಿ ಕೆಲವು ವಿಚಾರಗಳ ಸತ್ಯಾಂಶವನ್ನು ತಿಳಿಯದೆ ನನ್ನ ತಮ್ಮ ನನ್ನ ಮೇಲೆ ಕೈ ಮಾಡಿದ್ದಾನೆ ಮತ್ತು ಈ ವಿಚಾರದಿಂದಾಗಿ ನನಗೂ, ನನ್ನ ತಮ್ಮನ ನಡುವೆ ಅನೇಕ ಮನಸ್ಥಾಪಗಳು ಬಂದಿದೆ.
ನನಗೆ ಆರೋಗ್ಯದ ಸಮಸ್ಯೆಯಲ್ಲಿ ಬಳಲುತ್ತಿದ್ದ ಸಂದರ್ಭದಲ್ಲೂ ಆತ ನನಗೆ ಕಿರುಕುಳವನ್ನು ಕೊಟ್ಟಿದ್ದಾನೆ. ಈ ವಿಚಾರದ ಬಗ್ಗೆ ನಮ್ಮ ಮನೆಯಲ್ಲಿ ಹೇಳಿದಾಗ ಆತನಿಂದಾಗಿ ನನ್ನನ್ನು ನಂಬಲಿಲ್ಲ.
ನನ್ನ ಕಾಲೇಜ್ ನ ಪರೀಕ್ಷೆ ಮುಗಿದ ದಿನದಂದು ನನ್ನ ಮನೆಯಲ್ಲಿ ಈ ವಿಚಾರದ ಕುರಿತಾಗಿ ಅಪ್ಪ ,ಅಮ್ಮ, ತಮ್ಮ ನನ್ನಲ್ಲಿ ಮಾತನಾಡಿದರು. ಆ ಸಂದರ್ಭದಲ್ಲಿ ನನ್ನ ಮನೆಯವರಲ್ಲಿ ತಿಳಿಸಿದ್ದೇನೆ , ನಾನು ಆತನನ್ನು ಮದುವೆಯಾದರೆ ಖಂಡಿತ ನೆಮ್ಮದಿಯಲ್ಲಿ ಇರುವುದಿಲ್ಲ ಎಂದು ಎಷ್ಟೇ ಅತ್ತು ಹೇಳಿದರೂ, ನನ್ನ ಮನೆಯಲ್ಲಿ ನನ್ನ ಮಾತನ್ನು ಯಾರೂ ನಂಬಲಿಲ್ಲ .
ಈ ಘಟನೆ ನಡೆದ ನಂತರವು ಅನೇಕ ವಿಚಾರಗಳ ಬಗ್ಗೆ ಮತ್ತೆ ಕಿರುಕುಳವನ್ನು ನೀಡಿದ್ದಾನೆ.
ವಿಪಯಾ೯ಸವೇನೆಂದರೆ ನನ್ನ ಬೇಸರಕ್ಕೆ ಕಾರಣಏನು ಎಂಬುದು ನನ್ನ ಮನೆಯಲ್ಲಿ ವಾಸವಾಗಿರುವ ಅಜ್ಜಿಗಾಗಲಿ , ಅಣ್ಣನಿಗಾಗಲಿ ಈ ವಿಚಾರಗಳ ಬಗ್ಗೆ ತಿಳಿದೇ ಇಲ್ಲ.
ಮುಂದೆ ರೋಹಿತ್ ಉಚ್ಚಿಲ್ ರವರ ಬಗ್ಗೆ ತಿಳಿಸುವುದಾದರೆ, ನಾನಗೂ, ರೋಹಿತ್ ಉಚ್ಚಿಲ್ ರವರಿಗೂ ಮೊದಲು ಯಾವುದೇ ಸಂಬಂಧ ಇರಲಿಲ್ಲ. ಎರಡು ತಿಂಗಳ ಹಿಂದೆ, ಒಂದು ಕಾಯ೯ಕ್ರಮದಲ್ಲಿ ನಾನು ಬೇಸರವಾಗಿರುವುದನ್ನು ಕಂಡು ನನ್ನ ಬೇಸರಕ್ಕೆ ಕಾರಣ ಏನೆಂದು ಕೇಳಿದಾಗ, ಎಲ್ಲ ವಿಚಾರವನ್ನು ಅವರಲ್ಲಿ ತಿಳಿಸಿದೆ. ನನ್ನ ಮಾತನ್ನು ಕೇಳಿದ ರೋಹಿತ್ ಉಚ್ಚಿಲ್ ರವರು, ‘ ನಾನು ನಿನ್ನ ತಂದೆಯ ವರಲ್ಲಿ ಶ್ರೇಯ ನಿಗ ಈ ಮದುವೆ ಇಷ್ಟ ಇಲ್ಲ, ನಿಮ್ಮ ಜಾತಿಯ ಬೇರೆ ಒಳ್ಳೆಯ ಹುಡುಗನೊಂದಿಗೆ ಮದುವೆ ಮಾಡಿಸಿಯೆಂದು ಹೇಳುತ್ತೇನೆ’ಎಂದು ಹೇಳಿದಾಗ, ನಾನೇ ಬೇಡ ಎಂದು ಹೇಳಿದೆ . ಆ ಸಮಯದಲ್ಲಿ ನನ್ನನ್ನು ತನ್ನ ಸ್ವಂತ ತಂಗಿಯಂತೆ ನೋಡಿಕೊಳ್ಳುತ್ತಿದ್ದರು. ಆದರೆ ಮೊನ್ನೆ ನನ್ನ ಪರೀಕ್ಷೆ ಮುಗಿದ ದಿನದಂದು ಆದ ಘಟನೆಯ ಬಗ್ಗೆಯು ತಿಳಿಸಿದೆ, ಕೊನೆಯದಾಗಿ ನಾನು ಆ ದಿನ ಆತ್ಮಹತ್ಯೆ ಮಾಡುತ್ತೇನೆ ಎಂದು ನಿಧ೯ರಿಸಿದಾಗ ನನ್ನನ್ನು ಸಮಾಧಾನಿಸಿ ನನ್ನನ್ನು ಆ ದಿನ ಬದುಕಿಸಿದ ವ್ಯಕ್ತಿ. ಮುಂದೆ ಜುಲೈ ತಿಂಗಳ ಮೊದಲ ವಾರ, ನಾನು ಹಾಗೂ ರೋಹಿತ್ ಉಚ್ಚಿಲ್ ರವರು ಮದುವೆಯಾಗುವುದಾಗಿ ನಿಧ೯ರಿಸಿದೆವು.ನಾನು ಆ ಸಂದರ್ಭದಲ್ಲಿ ಆ ನಿಧಾ೯ರ ವನ್ನು ಕೈಗೊಳ್ಳದಿದ್ದರೆ, ಖಂಡಿತ ಆತನೊಂದಿಗೆ ಮದುವೆ ಮಾಡಿಸುತ್ತಿದ್ದರು. ಈ ಮದುವೆ ನನ್ನ ಸ್ವಂತ ನಿಧಾ೯ರವಾಗಿದೆ. ಆದರೆ ಅಪ್ಪ ಅಮ್ಮನನ್ನು ಬಿಟ್ಟು, ಅಥವಾ ಅಪ್ಪ ಅಮ್ಮನಿಗೆ ಅವಮಾನ ಮಾಡಬೇಕು ಎಂಬುದಾಗಿ ಯಾವುದೇ ಉದ್ದೇಶ ಇರಲ್ಲಿಲ್ಲ. ನನ್ನನ್ನು ರೋಹಿತ್ ಉಚ್ಚಿಲ್ ರವರು ಮದುವೆಯಾಗದಿರುತ್ತಿದ್ದರೆ, ಖಂಡಿತವಾಗಿ ನಾನು ಇವತ್ತು ಬದುಕುಳಿಯುತ್ತಿರಲಿಲ್ಲ.
ಇವತ್ತು ನಮ್ಮ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯಾರೂ ಒಬ್ಬರೂ, ನಾನು ಇಷ್ಟು ಬೇಸರದಿಂದ ಕುಗ್ಗಿದ ಸಂದರ್ಭದಲ್ಲಿ ನನ್ನನ್ನು ಸಮಾಧಾನಿಸಲೂ ಬರಲಿಲ್ಲ.
ನನ್ನ ಸಮುದಾಯದವರು ಬೇರೆ ಸಮುದಾಯದವರನ್ನು ಮದುವೆಯಾಗುವುದಾಗಲಿ , ಬೇರೆ ಧಮ೯ಮದವರನ್ನು ಮದುವೆಯಾಗಿರುದಾಗಲಿ ಇದೇ ಹೊಸತೇನಲ್ಲ. ನನ್ನ ಕಷ್ಟಕಾಲದಲ್ಲಿ ಸಹಾಯ ಮಾಡಿದ ವಕ್ತಿಗಳಿಗೆ ತೊಂದರೆಯನ್ನು ನೀಡದಿರಿ. ಈ ವಿಚಾರದ ಬಗ್ಗೆ ಏನೇ ಸ್ಪಷ್ಟೀಕರಣ ಬೇಕಿದ್ದರೂ ಅಥವಾ ಸಾಕ್ಷಿಗಳು ಬೇಕಿದ್ದರು ನೀಡಲು ಸಿದ್ಧಳಿರುತ್ತೇನೆ.
ನನ್ನನ್ನು ನನ್ನ ಪಾಡಿಗೆ ಬದುಕಲು ಬಿಡಿ…
– ಶ್ರೇಯ

- Advertisement -

Related news

error: Content is protected !!