Tuesday, July 28, 2026
spot_imgspot_img
spot_imgspot_img

ಮರಣ ದಂಡನೆಯ ವಿಧಾನವನ್ನು ಬದಲಿಸಿದ ಅಮೆರಿಕ!!

- Advertisement -
- Advertisement -

ವಾಶಿಂಗ್ಟನ್: ಗಲ್ಲು ಶಿಕ್ಷೆಗೆ ಒಳಗಾಗುವ ಅಪರಾಧಿಗಳನ್ನು ಗುಂಡು ಹಾರಿಸಿ ಮತ್ತು ವಿಷಗಾಳಿ ಪ್ರಯೋಗಿಸಿಯೂ ಮರಣ ದಂಡನೆ ಜಾರಿಗೊಳಿಸಲು ಅಮೆರಿಕ ಮುಂದಾಗಿದೆ.

ಈ ಹೊಸ ವಿಧಾನದ ಮರಣದಂಡನೆ ಡಿಸೆಂಬರ್ 24ರಿಂದ ಜಾರಿಗೆ ಬರಲಿದೆ. ಅಮೆರಿಕದ ಕಾನೂನು ಇಲಾಖೆ ಸದ್ದಿಲ್ಲದೆ ಮರಣ ದಂಡನೆಯನ್ನು ಜಾರಿಗೊಳಿಸುವ ವಿಧಾನಗಳಿಗೆ ತಿದ್ದುಪಡಿ ತರುತ್ತಿದೆ. ಅಮೆರಿಕದಲ್ಲಿ ಮರಣ ದಂಡನೆಗೆ ಒಳಗಾಗಿರುವ ಕೈದಿಗಳ ಶಿಕ್ಷೆಯನ್ನು ಜಾರಿಗೊಳಿಸುವ ಹಾಗೂ ಇನ್ನೂ ಹಲವು ವಿಧಾನಗಳನ್ನು ಅಧ್ಯಕ್ಷ ಡೊನಾಲ್ಡ್ ನಿರ್ಗಮನ ಹಂತದಲ್ಲಿರುವ ಡೊನಾಲ್ಡ್ ಟ್ರಂಪ್‌ ಸರ್ಕಾರ ಮೂಲ ವಿಧಾನಗಳ ಪಟ್ಟಿಗೆ ಸೇರಿಸಿದೆ. ಈವರೆಗೆ ಕೈದಿಗಳಿಗೆ ಮಾರಕ ಇಂಜೆಕ್ಷನ್‌ಗಳನ್ನು ಕೊಟ್ಟು ಮರಣ ದಂಡನೆ ಜಾರಿಗೊಳಿಸಲಾಗುತ್ತಿತ್ತು.

- Advertisement -

Related news

error: Content is protected !!