ಸತೀಶ್ ಮುಂಚೂರು ಮತ್ತು ಇತರರ ವಿರುದ್ದ ಎಫ್ಐಆರ್ ದಾಖಲು…



ಮಂಗಳೂರು: ಸುರತ್ಕಲ್ ನ ಸತೀಶ್ ಮುಂಚೂರು ಮತ್ತು ಇತರರ ವಿರುದ್ದ ಪಡ್ರೆ ಧೂಮವತಿ ದೈವಸ್ಥಾನದ ಬಂಗಾರ ಮತ್ತು ಹಣ ಕಳ್ಳತನ ಮಾಡಿದ ದೂರು ದಾಖಲಾಗಿದ್ದು, ಸುರತ್ಕಲ್ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಸತೀಶ್ ಮುಂಚೂರು ಮತ್ತು ದಿನಕರ್ ಶೆಟ್ಟಿ ಸೇರಿದಂತೆ ಇತರರು ಸುರತ್ಕಲ್ ಪಡ್ರೆ ಜುಮಾದಿ ದೈವಸ್ಥಾನಕ್ಕೆ ನುಗ್ಗಿ ಭಕ್ತರಿಂದ ಸಂಗ್ರಹವಾದ ಹಣ, ಚಿನ್ನ, ಬೆಳ್ಳಿಯನ್ನು ಕಳ್ಳತನ ಮಾಡಿ ಬಳಕೆ ಮಾಡಿದ್ದಾರೆ ಎಂದು ಪಡ್ರೆ ಜುಮಾದಿ ದೈವಸ್ಥಾನದ ಉಪಾಧ್ಯಕ್ಷ ಪದ್ಮನಾಭ ಶೆಟ್ಟಿಯವರು ನ್ಯಾಯಾಲಯಕ್ಕೆ ದೂರು ನೀಡಿದ್ದರು. ನ್ಯಾಯಾಲಯದ ನಿರ್ದೇಶನದಂತೆ ಸುರತ್ಕಲ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಎಫ್ಐಆರ್ ನಲ್ಲಿ ದಿನಕರ್ ಶೆಟ್ಟಿ, ಬಾಬು ಭಂಡಾರಿ, ಲೋಕಯ್ಯ ಶೆಟ್ಟಿ, ಯೋಗೀಶ್ ಕೊಂಕಣಬೈಲ್, ಅಪೇಕ್ಷ ಶೆಟ್ಟಿ, ರವಿರಾಜ್ ಸುವರ್ಣ, ರಮಾನಾಥ್ ಅಮೀನ್, ಲತೀಶ್ ಶೆಟ್ಟಿ, ಮುಖೇಶ್ ಶೆಟ್ಟಿ, ಸ್ವಪ್ನ, ಸುನೀಲ್, ಸತೀಶ್ ಮುಂಚೂರು, ರಾಜೇಶ್ ರವರುಗಳನ್ನು ಪಡ್ರೆ ದೈವಸ್ಥಾನದ ಹಣ, ಬಂಗಾರ ಕಳ್ಳತನದ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳ ವಿರುದ್ದ ಬಿಎನ್ ಎಸ್ 303, 314, 316, 318, 319, 336, 315 ಸೆಕ್ಷನ್ ಗಳಡಿಯಲ್ಲಿ ಕ್ರೈಂ ನಂಬರ್ 94/2025 ದಾಖಲಾಗಿದೆ.








