ಅಳಿಕೆ ಬಂಟರ ಸಂಘದ ಅಧ್ಯಕ್ಷ ರಾಗಿ ಮೋಹನ್ ದಾಸ್ ರೈ ಎರುಂಬು, ಯುವ ಬಂಟರ ಸಂಘದ ಅಧ್ಯಕ್ಷರಾಗಿ ಅಕ್ಷಯ್ ಭಂಡಾರಿ ಕೊಲ್ಯ, ಮಹಿಳಾ ವಿಭಾಗದ ಅಧ್ಯಕ್ಷರಾಗಿ ಸಾಯಿಗೀತಾ ಆರ್ ಹೆಗ್ಡೆ ಆಯ್ಕೆ



ಬಂಟರ ಸಂಘ ಅಳಿಕೆ ಇದರ ನೂತನ ಕಮಿಟಿಯ ಪದಗ್ರಹಣ ಮತ್ತು ಅಷ್ಟಾವದಾನ ದುರ್ಗಾ ಪೂಜೆಯು ಎರುಂಬು ವಿಷ್ಣುಮಂಗಲ ದೇವಸ್ಥಾನದ ಸಭಾ ಭವನದಲ್ಲಿ ಬಹಳ ಅಚ್ಚುಕಟ್ಟಾಗಿ ನಡೆಯಿತು. ಪ್ರಾರಂಭದಲ್ಲಿ ವಿಷ್ಣುಮಂಗಲ ದೇವಸ್ಥಾನದಲ್ಲಿ ಸಂಕಲ್ಪ ಮಾಡಿ, ಸಭಾಭವನದಲ್ಲಿ ದೀಪ ಬೆಳಗಿಸುವ ಮೂಲಕ ಶ್ರೀ ಬಾಲಕೃಷ್ಣ ಕಾರಂತರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಂಟ ಬಾಂಧವರಿಂದ ಭಜನೆ, ನಂತರ ನೂತನ ಕಮಿಟಿಯ ಪದಗ್ರಹಣ ನಡೆಯಿತು. ಶ್ರೀ ರಾಜೇಂದ್ರ ರೈ ಪಡಿಬಾಗಿಲು ನಿಕಟಪೂರ್ವ ಅಧ್ಯಕ್ಷರಿಂದ ನೂತನ ಕಮಿಟಿಗೆ ಅಧಿಕಾರ ಹಸ್ತಾಂತರಿಸಿದರು.ಮಹಿಳಾ ವಿಭಾಗ ಅಳಿಕೆ ಬಂಟರ, ಯುವ ಬಂಟರ ವಿಭಾಗ ಅಳಿಕೆ ಮತ್ತು ಬಂಟರ ಸಂಘ ಅಳಿಕೆಯ ಪದಗ್ರಹಣ ಸಮಾರಂಭ ಹಿರಿಯರ ಸಮ್ಮುಖದಲ್ಲಿ ನಡೆಯಿತು. ನೂತನ ಬಂಟರ ಸಂಘ ಅಳಿಕೆಯ ಅಧ್ಯಕ್ಷರಾದ ಮೋಹನದಾಸ್ ರೈಯವರು ಮುಂದಿನ ಮೂರು ವರ್ಷದ ಕಾಲಾವಧಿಯಲ್ಲಿ ಎಲ್ಲರ ಸಂಪೂರ್ಣ ಸಹಕಾರವೀರಲೆಂದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.SSLC ಮತ್ತು PUC ಯಲ್ಲಿ 90% ಕ್ಕಿಂತ ಅಧಿಕ ಮಾರ್ಕು ತೆಗೆದ ಇಬ್ಬರು ಮಕ್ಕಳನ್ನು ಸನ್ಮಾನಿಸಲಾಯಿತು.
ಬಳಿಕ ಅಷ್ಟಾವದಾನ ಸೇವೆ ಪ್ರಾರಂಭವಾಯಿತು. ಮೂರು ಬಗೆಯ ವೇಧ ಪಠಣ, ಶಂಖನಾದ, ಸ್ಯಾಕ್ಸೋಫೋನ್ ವಾದನ, ಕುಣಿತ ಭಜನೆ, ಭರತನಾಟ್ಯ ಮತ್ತು ಯಕ್ಷಗಾನಸೇವೆ ಬಹಳ ಸೊಗಸಾಗಿ ಶ್ರೀದೇವಿಗೆ ಸಮರ್ಪಣಾ ಭಾವದಿಂದ ಶ್ರೀದೇವಿಗೆ ಅರ್ಪಿಸಿದರು. ಮಹಾ ಪೂಜೆಯ ಬಳಿಕ ಅನ್ನಧಾನ ಸೇವೆ ನಡೆಯಿತು. ಸಂಜೆ ಗಂಟೆ 5.30 ಕ್ಕೆ ಪ್ರಾರಂಭವಾದ ಕಾರ್ಯಕ್ರಮ 8.30 ಮುಗಿದಾಗ ಕಾರ್ಯಕ್ರಮದ ಸಮಯ ಪಾಲನೆಯ ಬಗ್ಗೆ ಎಲ್ಲರೂ ಮೆಚ್ಚುಗೆಯ ಮಾತನಾಡಿದರು.








