Tuesday, April 30, 2024
spot_imgspot_img
spot_imgspot_img

ಅಲಯನ್ಸ್ ವಿ.ವಿಯ ಮಾಜಿ ವೈಸ್​‌ ಚಾನ್ಸಲರ್ ಗೆ ಇಡಿ ಸಮನ್ಸ್!!

- Advertisement -G L Acharya panikkar
- Advertisement -

ಬೆಂಗಳೂರು: ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ (ಫೆಮಾ) ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಅಲಯನ್ಸ್​‌ ವಿಶ್ವವಿದ್ಯಾಲಯದ ಮಾಜಿ ವೈಸ್​‌ ಚಾನ್ಸಲರ್​‌ ಮಧುಕರ್​ ಅಂಗೂರ್​ಗೆ ಇಡಿ ಸಮನ್ಸ್​ ನೀಡಿದೆ.

ಅಮೆರಿಕ ದೇಶದ ಪೌರತ್ವ ಹೊಂದಿರುವ ಮಧುಕರ್​‌ ಅಂಗೂರ್​ ಸುಮಾರು 100 ಕೋಟಿ ರೂಪಾಯಿಗಳ ಸಾರ್ವಜನಿಕ ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮನಿ ಲ್ಯಾಂಡರಿಂಗ್​ ಸಂಬಂಧಿಸಿದ ಹೊಸ ಪ್ರಕರಣವೊಂದರಲ್ಲಿ ಇಸಿಐಆರ್​‌ ದಾಖಲಿಸಿದ ಇಡಿ‌ ಅಂಗೂರ್‌ ಮತ್ತು ಸಹವರ್ತಿಗಳ ಬ್ಯಾಂಕ್​‌ ಖಾತೆ ವಿವರ, ಸ್ಥಿರ ಮತ್ತು ಚಿರಾಸ್ತಿ ವಿವರಗಳು.. ಹಾಗೂ 10 ವರ್ಷಗಳ ಐಟಿ ರಿಟರ್ನ್ಸ್​‌ ಸಲ್ಲಿಸುವಂತೆ ನಿರ್ದೇಶನ ನೀಡಿದೆ.

2010 -2017 ನಡುವೆ ವಿಶ್ವವಿದ್ಯಾಲಯ ಮತ್ತು ಅದರ ಪ್ರಾಯೋಜಕತ್ವ ಹೊಂದಿದ್ದ ಅಂಗೂರ್​​ ಕುಲಪತಿ ಸ್ಥಾನದಲ್ಲಿದ್ದಾಗ ಕಂಪನಿಯಿಂದ ಬೃಹತ್‌ ಮೊತ್ತದ ಹಣ ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಹಲವಾರು ಕ್ರಿಮಿನಲ್​‌ ಆರೋಪಗಳನ್ನು ಹೊಂದಿರುವ ಅಂಕೂರ್​ ಪ್ರಸ್ತುತ ಜಾಮೀನಿನ ಮೇಲೆ ಹೊರಗಿದ್ದಾರೆ. ಇತ್ತೀಚೆಗೆ ಚೆಕ್​‌ ಬೌನ್ಸ್​ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ದೊಡ್ಡ ಮೊತ್ತವನ್ನು ಪಾವತಿ ಮಾಡಿದ್ದಾರೆ. ಡಿಸೆಂಬರ್​‌ 2 ರಂದು ಹಾಜರಾಗುವಂತೆ ಇಡಿ ಸಮನ್ಸ್​‌ ಜಾರಿಮಾಡಿದ್ದು , ತನಿಖೆಗೆ ಸಹಕರಿಸದಿದ್ದರೆ ಅವರಿಗೆ ದೊಡ್ಡ ಸಂಕಷ್ಟ ಎದುರಾಗೋದು ಗ್ಯಾರಂಟಿ ಎನ್ನಲಾಗುತ್ತಿದೆ.

- Advertisement -

Related news

error: Content is protected !!