Tuesday, May 21, 2024
spot_imgspot_img
spot_imgspot_img

ಪತಂಜಲಿಯ 14 ಉತ್ಪನ್ನಗಳ ಲೈಸೆನ್ಸ್ ರದ್ದು

- Advertisement -G L Acharya panikkar
- Advertisement -
This image has an empty alt attribute; its file name is VC_PUC_-1-819x1024.jpg

ಸುಪ್ರೀಂಕೋರ್ಟ್ ನಲ್ಲಿ ಪ್ರತೀ ಬಾರಿಯೂ ಛಿಮಾರಿ ಹಾಕಿಸಿಕೊಳ್ಳುತ್ತಿರುವ ಯೋಗಗುರು ಬಾಬಾರಾಮದೇವ್ ಅವರಿಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದ್ದು, ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಲೈಸೆನ್ಸ್ ಅನ್ನು ರದ್ದು ಮಾಡಿ ಉತ್ತರಾಖಂಡ ಸರ್ಕಾರ ನಿರ್ಧಾರ ಕೈಗೊಂಡಿದೆ.

ಉತ್ತರಾಖಂಡ ಸರ್ಕಾರವು ಸೋಮವಾರ ಏಪ್ರಿಲ್ 15 ರ ಆದೇಶದ ಮೂಲಕ ಪತಂಜಲಿಯ 14 ಉತ್ಪನ್ನಗಳ ಪರವಾನಗಿಯನ್ನು ರದ್ದುಗೊಳಿಸಿದೆ. ಅಲ್ಲದೆ ರಾಮ್‌ದೇವ್ ಮತ್ತು ಆಚಾರ್ಯ ಬಾಲಕೃಷ್ಣ ಮತ್ತು ಪತಂಜಲಿ ವಿರುದ್ಧ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇಬ್ಬರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಲಾಗಿದೆ. ಪತಂಜಲಿ ಸಂಸ್ಥೆಗೆ ಸೇರಿದ ದಿವ್ಯಾ ಫಾರ್ಮಸಿ ಉತ್ಪಾದಿಸುವ ‘ದೃಷ್ಟಿ ಐ ಡ್ರಾಪ್’, ‘ಸ್ವಾಸರಿ ಗೋಲ್ಡ್’, ‘ಸ್ವಾಸರಿ ವಟಿ’, ‘ಬೋನ್‌ಚೋಂ’, ‘ಸ್ವಾಸರಿ ಪ್ರವಾಹಿ’, ‘ಸ್ವಾಸರಿ ಅವಲೇಹ್’, ‘ಮುಕ್ತಾ ವಟಿ ಎಕ್‌ಸ್ಟ್ರಾ ಪವರ್‌’, ‘ಲಿಪಿ ಡೋಮ್ “, ‘ಮಧುಗ್ರಿಟ್’, ‘ಮಧುನಾ ಶಿನಿ ವಟಿ ಎಕ್ಷಾ ಪವರ್’, ‘ಲಿವಾಮೃತ್‌ ಅಡ್ವಾನ್ಸ್’, ‘ಲಿವೋ ಗ್ರಿಟ್’, ‘ಐಗ್ರಿಟ್ ಗೋಲ್ಡ್’ ಉತ್ಪನ್ನಗಳ ಲೈಸೆನ್ಸ್‌ ರದ್ದು ಮಾಡಲಾಗಿದೆ. ಇತ್ತೀಚೆಗೆ ಪತಂಜಲಿ ಕ್ಷಮೆ ಕೂಡಾ ಕೇಳಿತ್ತು. ಮಂಗಳವಾರ ವಿಚಾರಣೆ ಮುಂದುವರೆಯಲಿದ್ದು, ಅದಕ್ಕೂ ಮುನ್ನ ಲೈಸೆನ್ಸ್‌ ರದ್ದು ಆದೇಶ ಹೊರಬಿದ್ದಿದೆ

- Advertisement -

Related news

error: Content is protected !!