Saturday, June 6, 2026
spot_imgspot_img
spot_imgspot_img

ಕೇಪು ಮಂಡಲ ಪಂಚಾಯತ್ ಮಾಜಿ ಸದಸ್ಯ ಕೇಪು ಗುತ್ತು ದೇವದಾಸ ರೈ ನಿಧನ

- Advertisement -
- Advertisement -

ಕೇಪು ಮಂಡಲ ಪಂಚಾಯತ್ ಮಾಜಿ ಸದಸ್ಯ ಕೇಪು ಗುತ್ತು ದೇವದಾಸ ರೈ (85) ರವರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

ದೇವದಾಸ ರೈರವರು ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಹಲವಾರು ವರ್ಷಗಳ ಕಾಲ ಕೇಪು ವಲಯ ಕಾಂಗ್ರೆಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಕೇಪು ಮಂಡಲ ಪಂಚಾಯತ್ ಮಾಜಿ ಸದಸ್ಯ ,ಕಾಂಗ್ರೆಸ್ ಮುಖಂಡರಾಗಿದ್ದರು.

ಇತ್ತೀಚೆಗೆ ಕೇಪು ವಲಯ ಕಾಂಗ್ರೇಸ್‌ ಸಮಿತಿ ವತಿಯಿಂದ ಮಾಜಿ ಸಚಿವ ರಮಾನಾಥ ರೈ ಮತ್ತು ಕಾಂಗ್ರೇಸ್‌ ಮುಖಂಡರ ಸಮುಖದಲ್ಲಿ ದೇವದಾಸ ರೈರವರನ್ನು ಅವರ ಮನೆಯಲ್ಲಿ ಸನ್ಮಾನಿಸಲಾಯಿತು.

ಮೃತರು ಪತ್ನಿ, 2 ಹೆಣ್ಣು, 2 ಗಂಡು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಇಂದು ಮಧ್ಯಾನ 3 ಗಂಟೆಗೆ ಅವರ ಸ್ವಗ್ರಹದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!