



ಪ್ರಸ್ತುತ ಸಾಮಾಜಿಕ ಯೋಧರ ಸೃಷ್ಟಿಯಾಗುವುದು ಸ್ವಾತಂತ್ರ್ಯದ ಸುಸ್ಥಿರತೆಗೆ ಪೂರಕ ಎನ್ನುತ್ತಾ 1947ರ ಸಂತಸದ ಸ್ವಾತಂತ್ರ್ಯದ ಸಂಭ್ರಮವನ್ನು ನೆನಪಿಸಿದ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲಾ ಆಡಳಿತಾಧಿಕಾರಿ ರಾಧಾಕೃಷ್ಣ ಎರುಂಬು ರವರು ಸಿರಿ ವಿದ್ಯಾಲಯ ಪಾಲ್ತಾಜೆ, ಸಾಲೆತ್ತೂರು ನಲ್ಲಿ ಧ್ವಜಾರೋಹಣಗೈದು 79 ನೇ ಸ್ವಾತಂತ್ರೋತ್ಸವಕ್ಕೆ ಶುಭ ಕೋರಿದರು.
ಶ್ರೀರಂಗನಾಥ್ ರೈ,ನಿವೃತ್ತ ಸೇನಾ ಅಧಿಕಾರಿಗಳು ಸಿಕ್ಕ ಸ್ವಾತಂತ್ರ ವನ್ನು ಪ್ರತಿಯೊಬ್ಬ ಮಕ್ಕಳು ನಾಗರಿಕರು ಸರಿಯಾಗಿ ಉಪಯೋಗಿಸಿದಲ್ಲಿ ಮುಂದಿನ ಭಾರತ ವಿಶ್ವಗುರು ಆಗುವುದರಲ್ಲಿ ಸಂದೇಹವಿಲ್ಲ ಎಂದು ಶುಭಾoಸನೆಗೈದರು.ಸಂಸ್ಥೆಯ ಅಧ್ಯಕ್ಷರಾದಸತೀಶ್ ಕುಮಾರ್ ಆಳ್ವಾರವರು ವಿದ್ಯಾರ್ಥಿಗಳು ಮತ್ತು ಪೋಷಕರು ಸದಾ ಸಮಾಜದ, ದೇಶದ ಒಳಿತಿನ ಆಸ್ತಿಗಳಾಗುವ ಯೋಧರಾಗೋಣವೆoದು ಶುಭ ಹಾರೈಸಿದರು.ಕಾರ್ಯದರ್ಶಿ ಡಾ. ರಾಜೇಶ್ ರೈ,ಕೋಶಾಧಿಕಾರಿ ಕರುಣಾಕರ ರೈಸಂಚಾಲಕಿ ರೇಷ್ಮಾ ಆರ್ ರೈಟ್ರಸ್ಟಿ ಗಳಾದ ಅಕ್ಷಯ್ ಕುಮಾರ್ ರೈಗಾಯತ್ರಿ ಶಿವರಾಮ ರೈ, ಪಿ. ಟಿ. ಎ ಅಧ್ಯಕ್ಷ ಪ್ರೀತಮ್ ಬಲ್ಯಾಯ, ಸಂಸ್ಥೆಯ ಹಿರಿಯ ಶೈಕ್ಷಣಿಕ ಮಾರ್ಗದರ್ಶಕಿ ಶಾಲಿನಿ ಆರ್ ನೋಂಡ, ಮುಖ್ಯಉಪಾಧ್ಯಾಯಿನಿಪ್ರೇಮ, ಶಿಕ್ಷಕರು, ಪೋಷಕರು, ಉಪಸ್ಥಿ ತರಿದ್ದರು ಅನನ್ಯ ಸಾಥ್ವಿ ನಿರೂಪಿಸಿ ಪೂರ್ವಿಕ್ ಸ್ವಾಗತಿಸಿ, ಪ್ರಣಮ್ಯ, ಅಸ್ವಾದ್ ಅಹಮದ್,ಹರ್ಷಿಕ,ಝಹಿದ್ ಬಹುಮಾನ ಪಟ್ಟಿಯನ್ನು ವಾಚಿಸಿದರು. ಶಾಲಾ ಮುಖಂಡ ಜಿಹಾದ್ ಸ್ವಾತಂತ್ರೋತ್ಸವದ ಬಗ್ಗೆ ವಿವರಿಸಿದರು. ಅಜಾಜ್ ವಂದನಾರ್ಪಣೆ ಗೈದರು.








