Sunday, June 7, 2026
spot_imgspot_img
spot_imgspot_img

ಕುಡಿತಕ್ಕೆ ಹಣ ನೀಡದ ಪತ್ನಿಯನ್ನು ಕೊಲೆ ಮಾಡಿದ ಪತಿ

- Advertisement -
- Advertisement -

ಮೈಸೂರು: ಕುಡಿತಕ್ಕೆ ಹಣ ನೀಡದ ಪತ್ನಿಯನ್ನು ಪತಿ ಕೊಲೆ ಮಾಡಿದ ಘಟನೆ ಮೈಸೂರಿನ ಮಹದೇಶ್ವರ ಬಡಾವಣೆಯಲ್ಲಿ ನಡೆದಿದೆ.

ಕೊಲೆಯಾದ ಮಹಿಳೆ ಗಾಯತ್ರಿ. ಪಾಪಣ್ಣ ಕೊಲೆ ಮಾಡಿರುವ ಪತಿ. ರಿಯಲ್ ಎಸ್ಟೇಟ್ ವಹಿವಾಟು ನಡೆಸುತ್ತಿದ್ದ ಪಾಪಣ್ಣ ಸಾಲಗಾರನಾಗಿ ಕುಡಿತದ ಚಟಕ್ಕೆ ದಾಸನಾಗಿದ್ದ.

ಹಣಕ್ಕಾಗಿ ಪತ್ನಿ ಮಕ್ಕಳನ್ನು ಪೀಡಿಸುತ್ತಿದ್ದ. ಜಮೀನು ಮಾರಿ ಹಣ ನೀಡುವಂತೆ ಹೆಂಡತಿಯನ್ನ ಪೀಡಿಸುತ್ತಿದ್ದ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಪತ್ನಿ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗುವಾಗ ಮಗನ ಕೈಗೆ ಸಿಕ್ಕಿ ಬಿದ್ದಿದ್ದಾನೆ.

ವಿಜಯನಗರ ಪೊಲೀಸ್ ಠಾಣೆಗೆ ಮಗ ದೂರು ನೀಡಿದ್ದು, ಆರೋಪಿ ಪಾಪಣ್ಣನನ್ನ ಪೊಲೀಸರು ಬಂಧಿಸಿದ್ದಾರೆ.

- Advertisement -

Related news

error: Content is protected !!