Tuesday, July 21, 2026
spot_imgspot_img
spot_imgspot_img

ಬೆಂಗಳೂರು: ಯುವತಿ ಮದುವೆಗೆ ನಿರಾಕರಿಸಿದ್ದಕ್ಕೆ ಹೈಟೆನ್ಷನ್ ಕಂಬ ಏರಿದ ಯುವಕ

- Advertisement -
- Advertisement -

ಬೆಂಗಳೂರು: ಪ್ರೀತಿಸಿದ ಹುಡುಗಿ ಮದುವೆಯಾಗಲು ನಿರಾಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಹೈಟೆನ್ಷನ್ ಕಂಬ ಏರಿದ ಘಟನೆ ಆನೇಕಲ್ ತಾಲೂಕಿನ ಚಿನ್ನಯ್ಯನಪಾಳ್ಯದಲ್ಲಿ ನಡೆದಿದೆ.

ಸೋಮಶೇಖರ್ ಹೈಟೆನ್ಷನ್ ಕಂಬ ಹತ್ತಿದ ಲವರ್ ಬಾಯ್. ಚಿನ್ನಯ್ಯನಪಾಳ್ಯ ನಿವಾಸಿಯಾದ ಸೋಮಶೇಖರ್ ಕಳೆದ ಮೂರು ವರ್ಷಗಳಿಂದ ಯುವತಿಯನ್ನ ಪ್ರೀತಿಸುತ್ತಿದ್ದ. ಇತ್ತೀಚಿಗೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಲವ್ ಬ್ರೇಕಪ್ ಮಾಡಿಕೊಳ್ಳಲು ಯುವತಿ ಮುಂದಾದ ಹಿನ್ನೆಲೆ ಸೋಮಶೇಖರ್ ಮನೆಯ ಶೀಟ್ ಹೊಡೆದು ದಾಂಧಲೆ ಮಾಡಿ, ಬಳಿಕ ಮನೆ ಸಮೀಪದ ಹೈಟೆನ್ಷನ್ ಕಂಬ ಹತ್ತಿ ಹುಡುಗಿ ಬರೋವರೆಗೆ ಕೆಳಗೆ ಇಳಿಯುವುದಿಲ್ಲ ಎಂದಿದ್ದಾನೆ.

ಆನೇಕಲ್ ಪೊಲೀಸರು ಸ್ಥಳಕ್ಕೆ ಬಂದು, ಮನವೊಲಿಸಿದರೂ ಪಾಗಲ್ ಪ್ರೇಮಿ ಕೆಳಗಿಳಿಯಲಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ತಂಡ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಗ್ರಾಮಸ್ಥರು ಜಮಾಯಿಸಿದ್ದು, ಯುವಕನನ್ನ ಕೆಳಗಿಳಿಸಲು ಶತಪ್ರಯತ್ನ ನಡೆಸಲಾಗುತ್ತಿದೆ ಎಂಬುದಾಗಿ ಮೂಲಗಳಿಂದ ತಿಳಿದುಬಂದಿದೆ.

- Advertisement -

Related news

error: Content is protected !!